ನ್ಯೂಯಾರ್ಕ್, ಜ.22: ಅಮೆರಿಕದಲ್ಲಿ ನವಜಾತ ಶಿಶುವಿನ ಕನಿಷ್ಠ ಒಬ್ಬ ಪೋಷಕ ಅಮೆರಿಕನ್ ಪ್ರಜೆ ಅಥವಾ ಗ್ರೀನ್ ಕಾರ್ಡ್ ಹೊಂದಿರುವವರಲ್ಲದಿದ್ದರೆ, ಆ ಮಗು ಅಮೆರಿಕನ್ ಪ್ರಜೆಯಾಗಿರುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಟ್ರಂಪ್ ಅವರ ನಿರ್ಧಾರವು ಅಮೆರಿಕದಲ್ಲಿ ತಾತ್ಕಾಲಿಕ ವೀಸಾ ಸ್ಥಾನಮಾನದಲ್ಲಿರುವ ಅಂದರೆ- ತಾತ್ಕಾಲಿಕ ಕೆಲಸದ ವೀಸಾಗಳು (H-1B ಮತ್ತು L1), ಅವಲಂಬಿತ ವೀಸಾಗಳು (H4), ಅಧ್ಯಯನ ವೀಸಾಗಳು (F1), ಶೈಕ್ಷಣಿಕ ಸಂದರ್ಶಕ ವೀಸಾಗಳು (J1), ಅಥವಾ ಅಲ್ಪಾವಧಿಯ ವ್ಯವಹಾರ ಅಥವಾ ಪ್ರವಾಸಿ (B1 ಅಥವಾ B2) ವೀಸಾಗಳಲ್ಲಿರುವ ಲಕ್ಷಾಂತರ ಭಾರತೀಯರು ಸೇರಿದಂತೆ. ಫೆಬ್ರವರಿ 20 ರಿಂದ ಆದೇಶ ಹೊರಡಿಸಿದ 30 ದಿನಗಳ ನಂತರ ಯುಎಸ್‌ನಲ್ಲಿ ಜನಿಸಿದ ಎಲ್ಲಾ ಮಕ್ಕಳಿಗೆ ಈ ನಿರ್ಧಾರ ಅನ್ವಯಿಸುತ್ತದೆ.
ಅಮೆರಿಕದಲ್ಲಿ ಐದು ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯ ಮೂಲದವರಿದ್ದಾರೆ. ಈ ಆದೇಶವನ್ನು ಈಗಾಗಲೇ ನ್ಯೂ ಹ್ಯಾಂಪ್‌ಶೈರ್ ಮತ್ತು ಮ್ಯಾಸಚೂಸೆಟ್ಸ್‌ನ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗಿದೆ ಮತ್ತು ಮುಂದಿನ ತಿಂಗಳೊಳಗೆ ನ್ಯಾಯಾಲಯಗಳು ತಡೆಯಾಜ್ಞೆ ನೀಡಿದರೆ ಟ್ರಂಪ್ ಅವರ ಹೊಸ ಆದೇಶ ಜಾರಿಗೆ ಬರುವುದಿಲ್ಲ.