ಬೀಜಿಂಗ್, ಫೆ.9: ಚೀನಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ 10 ಮನೆಗಳು ಕುಸಿದು 30 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಚೀನಾ ಉನ್ನತ ಮಟ್ಟದ ತುರ್ತು ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ನೈಋತ್ಯ ಸಿಚುವಾನ್ ಪ್ರಾಂತ್ಯದ ಜುನ್ಲಿಯನ್ ಕೌಂಟಿಯಲ್ಲಿ ಶನಿವಾರ ಭೂಕುಸಿತ ಸಂಭವಿಸಿದ್ದು, ತುರ್ತು ನಿರ್ವಹಣಾ ಸಚಿವಾಲಯವು ಅಗ್ನಿಶಾಮಕ ದಳದವರು ಸೇರಿದಂತೆ ನೂರಾರು ರಕ್ಷಣಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಏತನ್ಮಧ್ಯೆ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೂಡ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ನಾಪತ್ತೆಯಾದ ಜನರನ್ನು ಪತ್ತೆಹಚ್ಚಲು ಮತ್ತು ಸಾವುನೋವುಗಳನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.
ಚೀನಾದಲ್ಲಿ ಭಾರಿ ಭೂಕುಸಿತ

ಚೀನಾದಲ್ಲಿ ಭಾರಿ ಭೂಕುಸಿತ
Date: