ಟೆಹ್ರಾನ್, ಮೇ 20: ಹೆಲಿಕಾಪ್ಟರ್ ಅವಘಡದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್ ಸಾವನ್ನಪ್ಪಿದ್ದಾರೆ. ಅಧ್ಯಕ್ಷ ರೈಸಿ ಅವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನಗೊಂಡ ಸ್ಥಳವು ಸೋಮವಾರ ಮುಂಜಾನೆ ದಟ್ಟವಾದ ಕಾಡಿನ ಪರ್ವತಗಳಲ್ಲಿ ಪತ್ತೆಯಾಗಿದೆ.
ಏನಾಗಿತ್ತು?: ಅಧ್ಯಕ್ಷ ರೈಸಿ ಅಜರ್‌ಬೈಜಾನ್‌ಗೆ ಭೇಟಿ ನೀಡಿದ ನಂತರ ಇರಾನ್‌ಗೆ ಹಿಂದಿರುಗುತ್ತಿದ್ದಾಗ ಭಾನುವಾರ ಮಧ್ಯಾಹ್ನ ಅವರ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದಿಂದ ಪತನಗೊಂಡಿದೆ. ಪತನಗೊಂಡ ಹೆಲಿಕಾಪ್ಟರ್‌ನಲ್ಲಿ ಅಧ್ಯಕ್ಷ ರೈಸಿ ಸಹಿತ ಒಂಬತ್ತು ಮಂದಿ ಇದ್ದರು.
ಪ್ರಧಾನಿ ಸಂತಾಪ: ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಅಧ್ಯಕ್ಷ ಡಾ. ಸೈಯದ್ ಇಬ್ರಾಹಿಂ ರೈಸಿ ಅವರ ನಿಧನದಿಂದ ತೀವ್ರ ದುಃಖ ಮತ್ತು ಆಘಾತವಾಗಿದೆ. ಭಾರತ-ಇರಾನ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವಲ್ಲಿ ಅವರ ಕೊಡುಗೆ ಯಾವಾಗಲೂ ಸ್ಮರಣೀಯವಾಗಿದೆ. ಈ ದುಃಖದ ಸಮಯದಲ್ಲಿ ಭಾರತ ಇರಾನ್ ಜೊತೆ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.