Friday, January 31, 2025
Friday, January 31, 2025

ಶ್ರೀಲಂಕಾದಲ್ಲಿ ಭಾರತೀಯ ಮೀನುಗಾರರ ಮೇಲೆ ಗುಂಡು; ಇಬ್ಬರಿಗೆ ಗಂಭೀರ ಗಾಯ

ಶ್ರೀಲಂಕಾದಲ್ಲಿ ಭಾರತೀಯ ಮೀನುಗಾರರ ಮೇಲೆ ಗುಂಡು; ಇಬ್ಬರಿಗೆ ಗಂಭೀರ ಗಾಯ

Date:

ಯು.ಬಿ.ಎನ್.ಡಿ., ಜ.28: ಡೆಲ್ಫ್ಟ್ ದ್ವೀಪದ ಬಳಿ ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿದ ಘಟನೆಯ ಕುರಿತು ಭಾರತ ನವದೆಹಲಿಯಲ್ಲಿರುವ ಶ್ರೀಲಂಕಾ ಹೈಕಮಿಷನರ್ ಅವರನ್ನು ಕರೆಸಿ ಪ್ರತಿಭಟನೆ ಸಲ್ಲಿಸಿದೆ. ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ, “ಡೆಲ್ಫ್ಟ್ ದ್ವೀಪದ ಸಮೀಪದಲ್ಲಿ 13 ಭಾರತೀಯ ಮೀನುಗಾರರನ್ನು ಬಂಧಿಸಿದ ಸಂದರ್ಭದಲ್ಲಿ ಶ್ರೀಲಂಕಾ ನೌಕಾಪಡೆಯಿಂದ ಗುಂಡು ಹಾರಿಸಿದ ಘಟನೆ ಇಂದು ಬೆಳಗಿನ ಜಾವ ವರದಿಯಾಗಿದೆ. ಮೀನುಗಾರಿಕಾ ದೋಣಿಯಲ್ಲಿದ್ದ 13 ಮೀನುಗಾರರಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು, ಪ್ರಸ್ತುತ ಜಾಫ್ನಾ ಬೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ತಿಳಿಸಿದೆ. 

“ಇತರ ಮೂವರು ಮೀನುಗಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಾಫ್ನಾದಲ್ಲಿರುವ ಭಾರತೀಯ ದೂತಾವಾಸದ ಅಧಿಕಾರಿಗಳು ಆಸ್ಪತ್ರೆಯಲ್ಲಿ ಗಾಯಗೊಂಡ ಮೀನುಗಾರರನ್ನು ಭೇಟಿ ಮಾಡಿ ಅವರ ಯೋಗಕ್ಷೇಮವನ್ನು ಕೋರಿದ್ದಾರೆ ಮತ್ತು ಮೀನುಗಾರರು ಮತ್ತು ಅವರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದ್ದಾರೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಈ ವಿಷಯವನ್ನು ಶ್ರೀಲಂಕಾ ಸರ್ಕಾರದೊಂದಿಗೆ ಪ್ರಸ್ತಾಪಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. “ಇಂದು ಬೆಳಿಗ್ಗೆ ನವದೆಹಲಿಯಲ್ಲಿರುವ ಶ್ರೀಲಂಕಾದ ಹಂಗಾಮಿ ಹೈಕಮಿಷನರ್ ಅವರನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಸಲಾಯಿತು ಮತ್ತು ಘಟನೆಯ ಬಗ್ಗೆ ತೀವ್ರ ಪ್ರತಿಭಟನೆ ಸಲ್ಲಿಸಲಾಯಿತು. ಕೊಲಂಬೊದಲ್ಲಿರುವ ನಮ್ಮ ಹೈಕಮಿಷನ್ ಕೂಡ ಈ ವಿಷಯವನ್ನು ಶ್ರೀಲಂಕಾ ಸರ್ಕಾರದ ವಿದೇಶಾಂಗ ಸಚಿವಾಲಯದೊಂದಿಗೆ ಪ್ರಸ್ತಾಪಿಸಿದೆ ಎಂದು ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಕ್ಕಳ ಸಂಬಂಧಿತ ಕಾಯ್ದೆಗಳ ಕುರಿತು ತರಬೇತಿ ಕಾರ್ಯಾಗಾರ

ಉಡುಪಿ, ಜ.30: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು,...

ಕಾರಂತರ ಮೌಲ್ಯ, ನಿಷ್ಠೆಯ ಬದುಕು ಪ್ರತಿಯೊಬ್ಬರಿಗೂ ಆದರ್ಶ: ಡಾ.ಮಹಾಬಲೇಶ್ವರ ರಾವ್

ಉಡುಪಿ, ಜ.30: ಯಾವುದೇ ಅಡಂಬರ ಸೋಗಿನ ಜೀವನ ನಡೆಸದೇ ಸರಳವಾದ ಮೌಲ್ಯ...

ಪತ್ರ ಲೇಖನ ಸ್ಪರ್ಧೆ; ಪ್ರಥಮ ಬಹುಮಾನ ರೂ. 50,000

ಉಡುಪಿ, ಜ.30: ಅಂಚೆ ಇಲಾಖೆಯ ವತಿಯಿಂದ ಯು.ಪಿ.ಯು ಇಂಟರ್‌ನ್ಯಾಷನಲ್ ಲೆಟರ್ ರೈಟಿಂಗ್...

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್

ಪ್ರಯಾಗರಾಜ್, ಜ.30: ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಅವರು ಪ್ರಯಾಗರಾಜ್‌ನಲ್ಲಿ ನಡೆದ...
error: Content is protected !!