Sunday, January 19, 2025
Sunday, January 19, 2025

ಸಹೃದಯಿ ಗೆಳೆಯನನ್ನು ನಾವಿಂದು ಕಳೆದುಕೊಂಡಿದ್ದೇವೆ

ಸಹೃದಯಿ ಗೆಳೆಯನನ್ನು ನಾವಿಂದು ಕಳೆದುಕೊಂಡಿದ್ದೇವೆ

Date:

ರನಟ ಡಾ. ರಾಜಕುಮಾರ್ ಅವರ ಅಷ್ಟೂ ದೈತ್ಯ ಪ್ರತಿಭೆಗಳನ್ನು ತನ್ನೊಳಗೆ ತುಂಬಿಸಿಕೊಂಡು ಬಂದ ನಟ ಪುನೀತ್ ರಾಜಕುಮಾರ್. ಮೊದಲು ಬಾಲನಟ ಆಗಿ ಬೆಟ್ಟದ ಹೂವು ಸಿನೆಮಾಕ್ಕೆ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಪಡೆದವರು ಅವರು. ಬಾಲನಟನಾಗಿ ಅವರದ್ದು ಅದ್ಭುತ ಇನ್ನಿಂಗ್ಸ್ ಎಂದೇ ಹೇಳಬಹುದು.

ಮುಂದೆ ಮಾಸ್ ಹೀರೋ ಆಗಿ ಚಂದನವನಕ್ಕೆ ಗ್ರಾಂಡ್ ಎಂಟ್ರಿ ಕೊಟ್ಟ ನಂತರ ಪುನೀತ್ ಅಭಿನಯದ ಹೆಚ್ಚು ಕಡಿಮೆ ಎಲ್ಲಾ ಸಿನೆಮಾಗಳು ಸೂಪರ್ ಹಿಟ್ ಆಗಿವೆ. ಒಬ್ಬ ನಟನ ಎಲ್ಲಾ ಸಿನೆಮಾಗಳನ್ನು ನಾನು ನೋಡಿದ ದಾಖಲೆ ಇದ್ದರೆ ಅದು ಪುನೀತ್ ಅವರದ್ದು ಮಾತ್ರ!

ಬರೇ ಮನರಂಜನೆಗಾಗಿ ಸಿನೆಮಾ ಮಾಡದೆ ಅದರ ಮೂಲಕ ಸಾಮಾಜಿಕ ಸಂದೇಶ ಮತ್ತು ಒಂದು ಮೆಗಾ ಅಪೀಲ್ ಕೊಡುವ ಅವರ ಸಿನಿಮಾಗಳದ್ದೇ ಒಂದು ತೂಕ! ರಾಜಕುಮಾರ ಕನ್ನಡ ಸಿನೆಮಾದಲ್ಲಿ ಅವರ ಪಾತ್ರ ಹೇಗಿತ್ತೋ ಅವರು ಹಾಗೆಯೇ ಬದುಕಿದವರು. ಇತ್ತೀಚೆಗೆ ಅತ್ಯುತ್ತಮವಾದ ಕನ್ನಡದ ಸಿನೆಮಾಗಳನ್ನು ನಿರ್ಮಾಣ ಮಾಡುವ ಸಂಸ್ಥೆಯನ್ನು ಸ್ಥಾಪನೆ ಮಾಡಿ ಅನೇಕ ಹೊಸ ಕಲಾವಿದರಿಗೆ ಅವಕಾಶ ಕೊಡುತ್ತಾ ಇದ್ದರು.

ಹತ್ತಾರು ಅನಾಥಾಲಯ, ವೃದ್ಧಾಶ್ರಮ, ಶಾಲೆಗಳ ದತ್ತು ಸ್ವೀಕಾರ, 1800ಕ್ಕಿಂತ ಅಧಿಕ ಮಕ್ಕಳ ಶೈಕ್ಷಣಿಕ ದತ್ತು ಸ್ವೀಕಾರ, ಗೋ ಶಾಲೆಗಳ ಅಭಿವೃದ್ಧಿ, ಹೀಗೆ ಅವರ ಸಾಮಾಜಿಕ ಕಳಕಳಿಗೆ ನೂರಾರು ಮುಖಗಳು.

ನಟನಾಗಿ ಅವರು ಕನ್ನಡಕ್ಕೆ ನಿಜವಾದ ಗಾಡ್ಸ್ ಗ್ರೇಸ್ ಎಂದೇ ಹೇಳಬಹುದು. ಫೈಟಿಂಗ್, ಡಾನ್ಸ್, ಡೈಲಾಗ್, ಮ್ಯಾನರಿಸಂ, ಭಾವನೆಗಳು, ಸ್ಕ್ರೀನ್ ಅಪಿಯರೆನ್ಸ್ ಎಲ್ಲದರಲ್ಲೂ ಅವರಿಗೆ ಅವರೇ ಸಾಟಿ. ಅವರು ಹಾಡಿದ ಅಷ್ಟೂ ಹಾಡುಗಳು ಭಾರೀ ಜನಪ್ರಿಯ ಆಗಿವೆ.

ತನ್ನ ಹಾಡುಗಳ ಮೂಲಕ ಬಂದ ಅಷ್ಟೂ ದುಡ್ಡನ್ನು ಮೈಸೂರಿನ ಒಂದು ಚಾರಿಟಬಲ್ ಟ್ರಸ್ಟಿಗೆ ವರ್ಗಾಯಿಸಿ ಪ್ರಚಾರದಿಂದ ಗಾವುದ ದೂರ ನಿಂತುಬಿಟ್ಟವರು ಇದೇ ಪುನೀತ್. ತನ್ನ ತಂದೆಯವರ ಹಾಗೆ ತನ್ನ ಸಿನೆಮಾಗಳು ಹಾಗೂ ಮಾದರಿ ಬದುಕಿನ ಮೂಲಕ ಬಹು ಎತ್ತರದಲ್ಲಿ ನಿಂತವರು ಪುನೀತ್. ಕನ್ನಡದ ಕೋಟ್ಯಾಧಿಪತಿ ಸಂಚಿಕೆಗಳಿಗೆ ಅವರು ತುಂಬಿಸಿದ ಎನರ್ಜಿ ಎಷ್ಟು ಅದ್ಭುತ!

ಯಾವ ರೀತಿಯ ಪಾತ್ರಕ್ಕೂ ನ್ಯಾಯವನ್ನು ಒದಗಿಸುವ ಒಬ್ಬ ವರ್ಸೇಟೇಲ್ ನಟನನ್ನು ಹಾಗೂ ಒಬ್ಬ ಮಾನವೀಯ ಅಂತಃಕರಣದ ಸಹೃದಯಿ ಗೆಳೆಯನನ್ನು ನಾವಿಂದು ಕಳೆದುಕೊಂಡಿದ್ದೇವೆ.

ಈ ದುಃಖವು ಎಂದಿಗೂ ಮರೆತು ಹೋಗುವುದಿಲ್ಲ, ಅವರ ಸಿನಿಮಾಗಳ ಹಾಗೆ!

-ರಾಜೇಂದ್ರ ಭಟ್ ಕೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!