Sunday, January 19, 2025
Sunday, January 19, 2025

ಚುನಾವಣೇೂತ್ತರ ಸಮೀಕ್ಷೆ ಬಿಜೆಪಿಗೆ ಎಚ್ಚರಿಕೆಯ ಘಂಟೆ?

ಚುನಾವಣೇೂತ್ತರ ಸಮೀಕ್ಷೆ ಬಿಜೆಪಿಗೆ ಎಚ್ಚರಿಕೆಯ ಘಂಟೆ?

Date:

ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಚುನಾವಣಾ ಕಾರ್ಯ ಮುಗಿದಿದ್ದು ಚುನಾವಣೇೂತ್ತರ ಸಮೀಕ್ಷೆ ಹೊರ ಬಿದ್ದಿದು ಗುಜರಾತಿನಲ್ಲಿ ಬಿಜೆಪಿ ಗದ್ದುಗೆ ಹಿಡಿಯಬಹುದು. ಆದರೆ ಹಿಮಾಚಲ ಪ್ರದೇಶದಲ್ಲಿ ನೇರಾನೇರ ಹಣಾಹಣಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕಾಣಬಹುದು ಅನ್ನುವ ಸಮೀಕ್ಷಾ ವರದಿ ಹೊರ ಬಿದ್ದಿದೆ.

ಈ ಸಮೀಕ್ಷೆಯಿಂದ ಬಿಜೆಪಿಗರು ಹಿರಿ ಹಿರಿ ಹಿಗ್ಗುವ ಯಾವುದೇ ಪರಿಸ್ಥಿತಿ ಖಂಡಿತವಾಗಿಯೂ ಇಲ್ಲ ಅನ್ನುವುದು ಈ ಎರಡು ರಾಜ್ಯಗಳ ಚುನಾವಣೇೂತ್ತರ ಫಲಿತಾಂಶದಿಂದ ಸ್ವಷ್ಟವಾಗಿರುವುದಂತೂ ನೂರಕ್ಕೆ ನೂರು ಸತ್ಯ.

ಈ ಸಮೀಕ್ಷೆಯ ವರದಿಯ ಮೇಲೆ ಮುಂದಿನ ಸ್ಥಿತಿಗತಿಯ ಬಗ್ಗೆ ವಿಶ್ಲೇಷಣೆ ಮಾಡುವುದೇ ನನ್ನ ಉದ್ದೇಶ.

ಸಮೀಕ್ಷೆಯ ವರದಿಯ ಪ್ರಕಾರ ಗುಜರಾತಿನಲ್ಲಿ ಬಿಜೆಪಿ ಸ್ವಷ್ಟ ಬಹುಮತದೊಂದಿಗೆ ಗದ್ದುಗೆ ಹಿಡಿಯುವುದು ಖಚಿತ. ಆದರೆ ಇಲ್ಲಿ ನಾವು ಪರಿಗಣಿಸಬೇಕಾದದ್ದು ಈ ಫಲಿತಾಂಶ ನಿಜಕ್ಕೂ ಬಿಜೆಪಿಯ ಗೆಲುವೇ ಅಥವಾ ಮೇೂದಿಯವರ ವಯಕ್ತಿಕ ವರ್ಚಸ್ಸು ಮಾತ್ರವಲ್ಲ ಅವರದ್ದೆ ನೆಲವಾದ ಕಾರಣ ಈ ಹೋಮ್ ಗ್ರೌಂಡ್ ಪಿಚ್ಚಿನಲ್ಲಿ ದೇಶದ ಪ್ರಧಾನಿ ಮೋದಿಯವರಿಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು.

ಮಾತ್ರವಲ್ಲ ಇದು ಅವರ ಗೌರವ ಮರ್ಯಾದೆಯ ಪ್ರಶ್ನೆ ಕೂಡ ಹೌದು. ಅಂದರೆ ಈ ಗೆಲುವು ಆಡಳಿತಾರೂಢ ಬಿಜೆಪಿಯ ಗೆಲುವಲ್ಲ ಅನ್ನುವುದು ಅಷ್ಟೇ ಸ್ವಷ್ಟ. ಹಾಗಾಗಿ ಮೇೂದಿ ಮತ್ತು ಅಮಿತ್ ಶಾ ತಮ್ಮ ಸಂಪೂರ್ಣ ಶಕ್ತಿಯನ್ನು ಧಾರೆ ಎರೆದ ಕಾರಣ ಬಿಜೆಪಿಗೆ ಗುಜರಾತಿನಲ್ಲಿ ವಿಜಯದ ಮಾಲೆ ಪ್ರಾಪ್ತವಾಗಬೇಕು ಅನ್ನುವುದು ಗುಜರಾತ್ ಸಾಮಾನ್ಯ ಮತದಾರರ ಅಭಿಪ್ರಾಯವೂ ಹೌದು.

ಆದರೆ ಬಿಜೆಪಿಯ ಕಾರ್ಯಕರ್ತ ಬಿಜೆಪಿಯ ಪರವಾಗಿ ಮತದಾರರು ಶಾಶ್ವತವಾಗಿ ನಿಂತಿದ್ದಾರೆ ಎಂದು ನಂಬಿದರೆ ಇದಕ್ಕಿಂತ ಮೂರ್ಖತನ ಬೇರೊಂದಿಲ್ಲ. ಈ ಮಾತುಗಳನ್ನು ಇನ್ನೂ ಸ್ವಷ್ಟಿಕರಿಸಬೇಕಾದರೆ ನಾವು ತೆಗೆದುಕೊಳ್ಳಬೇಕಾದ ಇನ್ನೊಂದು ಸಮೀಕ್ಷಾ ವರದಿ ಹಿಮಾಚಲ ಪ್ರದೇಶದ್ದು.

ಹಿಮಾಚಲದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಾ ನೇರ ಸೆಣಸಾಟವಿದೆ ಅನ್ನುವುದು ಸಮೀಕ್ಷೆಯ ಉತ್ತರ. ಹಾಗಾದರೆ ಬರೇ ಬಿಜೆಪಿಯ ಸಾಧನೆ ಒಂದೇ ಮಾನದಂಡವಾಗಿದ್ದರೆ ಗುಜರಾತಿನ ಫಲಿತಾಂಶ ಹಿಮಾಚಲದಲ್ಲೂ ಪ್ರತಿಫಲಿಸಬೇಕಿತ್ತು. ಅಂದರೆ ಇಲ್ಲಿ ಆಡಳಿತ ವಿರೇೂಧಿ ಅಲೆ ಸ್ವಷ್ಟವಾಗಿರುವ ಕಾರಣ ಕಾಂಗ್ರೆಸ್ ಮತ್ತೆ ತಲೆ ಎತ್ತಿ ನಿಲ್ಲವ ಸ್ಥಿತಿ ಬಂದಿದೆ.

ಈ ಎರಡೂ ಫಲಿತಾಂಶದ ಜೊತೆಗೆ ದೆಹಲಿಯ ಸ್ಥಳೀಯ ಚುನಾವಣೆಯಲ್ಲಿ ಕೂಡಾ ಬಿಜೆಪಿಗೆ ಮುಖಭಂಗವಾಗುವ ಸಮೀಕ್ಷೆಯ ವರದಿ ಬಂದಿದೆ.

ಒಟ್ಟಿನಲ್ಲಿ ಬಿಜೆಪಿ ತನ್ನ ಆಡಳಿತದ ವೈಖರಿಯಿಂದ ಚುನಾವಣೆಯಲ್ಲಿ ಗೆದ್ದು ಬರಲು ಸಾಧ್ಯವಿಲ್ಲ ಬದಲಾಗಿ ಹಿಂದುತ್ವ, ರಾಷ್ಟ್ರೀಯವಾದ, ಮೇೂದಿ ಹೆಸರಿನಲ್ಲಿಯೇ ಚುನಾವಣೆ ಎದುರಿಸಿ ಕಾಂಗ್ರೆಸ್ ಮತ್ತು ಸ್ಥಳೀಯ ಪಕ್ಷಗಳನ್ನು ಎದುರಿಸಬೇಕಾಗಿದೆ ಅನ್ನುವುದು ಸ್ವಷ್ಟ ಸಂದೇಶ ಮತ್ತು ಈ ಚುನಾವಣಾ ಸಮೀಕ್ಷೆಯ ಒಟ್ಟಾರೆ ಫಲಿತಾಂಶ.

ಬಿಜೆಪಿಗೆ ಮುಂದಿನ ಗುರಿ ಕರ್ನಾಟಕ. ಆದರೆ ಇಲ್ಲಿ ಕೂಡ ಬಿಜೆಪಿಗೆ ಆಡಳಿತದ ಸಾಧನೆಯೊಂದೆ ಗೆಲುವು ತಂದುಕೊಡಬಹುದು ಅನ್ನುವ ವಿಶ್ವಾಸ ಸ್ವತಃ: ಬಿಜೆಪಿ ನಾಯಕರಿಗೆ ಇಲ್ಲ. ಏನಿದ್ದರೂ ಮೇೂದಿಯವರ ಕೃಪಕಟಾಕ್ಷ, ಹಿಂದುತ್ವ ಅಲೆ ಜೊತೆಗೆ ರಾಷ್ಟ್ರೀಯವಾದದ ಮಾತುಗಳು ನೂರರ ಗಡಿಗೆ ತೆಗೆದುಕೊಂಡು ಹೇೂಗಬಹುದು ಅನ್ನುವ ಆತ್ಮವಿಶ್ವಾಸ ಅಷ್ಟೇ?

ಆದರೆ ಒಂದಂತೂ ಸತ್ಯ ಕಾಂಗ್ರೆಸ್ ಗೂ ಕೂಡ ಸ್ವಂತ ಬಲದಲ್ಲಿ ಸರ್ಕಾರ ಮಾಡುವುದು ಕೂಡ ಕನಸಿನ ಮಾತು. ಹಾಗಂತ ರಾಜ್ಯದಲ್ಲಿ ಕಾಂಗ್ರೆಸ್ ಬೇರು ಹೇೂಗಿಲ್ಲ. ಈ ಬೇರುಗಳಿಗೆ ಸರಿಯಾಗಿ ನೀರು ಹಾಕಿ ಬೆಳೆಸಬಲ್ಲ ಸಮರ್ಥ ನಾಯಕರು ಸಿಕ್ಕಿದರೆ ಖಂಡಿತವಾಗಿಯೂ ಕಾಂಗ್ರೆಸ್ ಮತ್ತೆ ಚಿಗುರುವ ಎಲ್ಲಾ ಲಕ್ಷಣಗಳು ಇದೆ.

ಆದರೆ ಇದೇ ಸಿದ್ಧರಾಮಯ್ಯ ನವರ ನಾಲಿಗೆ, ಡಿಕೆಶಿಯವರ ಕಳೆ ಕುಂದಿದ ಮುಖಗಳನ್ನು ಹಿಡಿದು ಚುನಾವಣೆ ಎದುರಿಸುವುದು ತುಂಬಾ ಕಷ್ಟದ ಮಾತು. ರಾಹುಲ್ ರವರ ಜೇೂಡು ನಡೆ ನುಡಿಮಾತಿನಿಂದ ಮತದಾರರನ್ನು ಆಕರ್ಷಿಸುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ.

ಕರ್ನಾಟಕದ ಮಟ್ಟಿಗೆ ಒಂದಂತೂ ಸತ್ಯ, ಕುಮಾರಸ್ವಾಮಿ ಅವರ ಪಂಚರತ್ನ ರಥಯಾತ್ರೆ 30 ರಿಂದ 35 ಸ್ಥಾನಗಳನ್ನು ಸಂಪಾದಿಸಿ ಬಿಟ್ಟರೆ ಮುಂದೆ ನಮ್ಮ ರಾಜ್ಯವನ್ನು ಬಿಜೆಪಿ ಆಳಬೇಕೋ? ಕಾಂಗ್ರೆಸ್ ಆಳಬೇಕೋ ಎಂದು ನಿರ್ಧರಿಸುವ ವ್ಯಕ್ತಿ ಅರ್ಥಾತ್‌ ಶಕ್ತಿ ಜೆಡಿಎಸ್ ನ ಕುಮಾರಸ್ವಾಮಿ ಅನ್ನುವುದು ಶತಃ ಸಿದ್ಧದ ಪರಿಸ್ಥಿತಿ. ಕಾದು ನೇೂಡಬೇಕು.

– ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!