ಸರಕಾರ ಕೊಡುವ ಹಣವನೆಲ್ಲ ನುಣ್ಣಗೆ ಬೊಳಿಸಿದರು
ಮತ್ತೆ ಇಂಬು ಹೊಡೆದು ನನ್ನನ್ನು ಕೆಳಗೆ ಬಿಳಿಸಿದರು
ಕಾಡುಮೇಡುಗಳ ಮದ್ಯೆ ನಾನು ಸ್ವತಂತ್ರ್ಯನಾಗಿದ್ದೆ
ಇವರು ಮೊಸದಿ ತೋಡಿದ ಖೆಡ್ಡಾಕ್ಕೆ ತಿಳಿಯದೆ ಬಿದ್ದೆ
ಇವರು ನನ್ನ ಕರೆಯುವ ಹೆಸರು ಅರ್ಜುನ
ನನ್ನ ಭಾವಿಗೆ ದೂಡಿ ಆಳ ನೋಡುವ ಇವರು ದುರ್ಜನ.
ಮಣಭಾರದ ಸರಪಳಿಯಿಂದ ಬಿಗಿದು ನನ್ನ ನಿಲ್ಲಿಸಿದರು
ಆಹಾರವು ಕೊಡದೆ ಹೊರಗಡೆ ಬಿಡದೆ ದಿನವು ದಣಿಸಿದರು
ಕೆಳಲೇಬೇಕಾಯಿತು ನನ್ನ ಉಸಿರ ಉಳಿಸಿಕೊಳ್ಳಲು ಇವರ ಮಾತು
ನನ್ನೊಳಗಿನ ಸ್ವಾಭಿಮಾನದ ಸಿಟ್ಟು ಸೆಡುವುಗಳನೆಲ್ಲ ಬದಿಗಿರಿಸಿ ಸೋತು
ಇವರು ನನ್ನ ಕರೆಯುವ ಹೆಸರು ಅರ್ಜುನ
ನನ್ನ ಭಾವಿಗೆ ದೂಡಿ ಆಳ ನೋಡುವ ಇವರು ದುರ್ಜನ.
ಆನೆಯೆಂಬುದನ್ನೆ ಮರೆತು ಅವರೊಂದಿಗೆ ಹೇಳಿದ್ದು ಕೇಳಿಕೊಂಡು ಹೋದೆ
ಜನಸ್ನೇಹಿ ಆನೆ ಎನ್ನುತ್ತ ದಿನ ದಿನವು ಎರುತ್ತಲೆ ಹೊಯಿತು ನನ್ನ ಮರ್ಯಾದೆ
ಒಂದಷ್ಟು ವರುಷ ದಸರದ ಅಂಬಾರಿಯನ್ನು ಹೊರಸಿ ಮೆರಿಸಿದರು
ಮತ್ತೆ ವರುಷವಾಯಿತು ಅಂಬಾರಿ ಹೊರಬಾರದೆಂದು
ಅವರೆ ಕಾನೂನು ಬರೆಸಿದರು
ಈ ಮನುಷ್ಯರು ನನ್ನ ಕರೆಯುವ ಹೆಸರು ಅರ್ಜುನ
ನನ್ನ ಭಾವಿಗೆ ದೂಡಿ ಆಳ ನೋಡುವ ಇವರು ದುರ್ಜನ.
ಎಲ್ಲಿ ನಮ್ಮವರು ಊರಿಗೆ ನುಗ್ಗಿದರು ನನ್ನನ್ನೆ ಮುಂದೆ ನಿಲ್ಲಿಸಿ ಅವರನ್ನು ಹಿಮ್ಮೆಟ್ಟಿಸುತ್ತಿದ್ದರು
ನಾ ಒಲ್ಲೆ ಎಂದಾಗ ಅಂಕುಶದಿ ನನಗೆ ಬಿಸಿಮುಟ್ಟಿಸುತ್ತಿದ್ದರು.
ನಾ ಜನಸ್ನೇಹಿ ಆಗಿರುವುದಕ್ಕೊ ಏನೋ ಸಿಟ್ಟಾದ ನಮ್ಮಲೊಬ್ಬ ಮದಗಜ
ನನ್ನ ಕೊಲ್ಲುವಾಗ ದೂರದಿಂದ ನೋಡುತಿದ್ದ ಮನುಜ
ನಾನು ಇವರ ಸ್ನೇಹಿತನಲ್ಲ ಬರೀ ಆನೆಯೆಂಬುದನ್ನು ನೆನಪಿಸಿದ್ದು ನಿಜ.
-ಪ್ರೇರಕ (ರವಿಕಿರಣ್ ಕೋಟ)