Sunday, January 19, 2025
Sunday, January 19, 2025

ಪ್ರಧಾನಿ ಮೋದಿ ಹುಟ್ಟುಹಬ್ಬ-71ರ ಸಂಖ್ಯಾಫಲ ಹೇಗಿದೆ?

ಪ್ರಧಾನಿ ಮೋದಿ ಹುಟ್ಟುಹಬ್ಬ-71ರ ಸಂಖ್ಯಾಫಲ ಹೇಗಿದೆ?

Date:

ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು 71ರ ಹುಟ್ಟು ಹಬ್ಬ. ಮೋದಿಯವರು ಪ್ರಧಾನಿ ಪೀಠ ಸ್ವೀಕರಿಸಿ 7 ವರುಷಗಳು ತುಂಬಿವೆ. ಇನ್ನು ಇರುವ ಅವಧಿ ಕೇವಲ ಮೂರು ವರುಷ. ಹಾಗಾಗಿ ಇದೊಂದು ತುಂಬಾ ಅರ್ಥಪೂರ್ಣವಾದ ಸಂದರ್ಭ. ಈ ಏಳರ ಆಟ ಮೋದಿಯ ಜೀವನ ಪೂರ್ತಿ ತುಂಬಾ ಮಹತ್ತರ ಸಂಖ್ಯೆ ಅನ್ನುವುದು ಮೇಲ್ನೋಟಕ್ಕೆ ಕಾಣುವ ಸಂಖ್ಯಾ ಭವಿಷ್ಯ.

ಇನ್ನು ಮುಂದಿನ ಚುನಾವಣೆ 2024ಕ್ಕೆ, ಆವಾಗ ಮೋದಿಯವರಿಗೆ 74 ತುಂಬಿ ಬಿಡುತ್ತದೆ. ಬಿಜೆಪಿ ಪಕ್ಷದ ಪ್ರಾಯದ ಸಂಖ್ಯಾ ನಿಯಮದ ಪ್ರಕಾರ 75ರ ಅನಂತರ ರಾಜಕೀಯದಿಂದ ವಾನಪ್ರಸ್ಥದ ಕಡೆಗೆ ನಡೆಯುವ ಪ್ರಾಯ. ಈ 75ರ ಗಡಿ ದಾಟಿದ ಬಿಜೆಪಿಯ ಪ್ರಮುಖ ನಾಯಕರಿಗೆ ವಾನಪ್ರಸ್ಥದ ಕಡೆದಾರಿ ತೋರಿಸಿದ ಪ್ರಾಯವೂ ಹೌದು. 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೆ ಸ್ಪರ್ಧಿಸುವ ಪ್ರಾಯದ ಅರ್ಹತೆ ಇದೆ ಯಾಕೆಂದರೆ ಆಗ ಅವರಿಗೆ 74 ತುಂಬಿರುತ್ತದೆ. ಆದರೆ ಮೋದಿಯವರಿಗೂ ಮತ್ತು ಬಿಜೆಪಿಯ ಒಳಗೂ ಹೊರಗೂ ಇರುವ ದೊಡ್ಡ ಪ್ರಶ್ನೆ ಅಂದರೆ 2024 ರ ಚುನಾವಣೆಯಲ್ಲಿ ಬಿಜೆಪಿ ಅರ್ಥಾತ್ ಮೋದಿ ಗೆದ್ದರೆ ಅವರು ಕೇವಲ ಒಂದು ವರುಷಕ್ಕೆ ಮಾತ್ರ ಪ್ರಧಾನಿಯಾಗಿ ಮುಂದುವರಿಯಬೇಕೇ? ಕರ್ನಾಟಕದಲ್ಲಿ ಯಡಿಯೂರಪ್ಪನವರಿಗೆ ಹೇಳಿದ ತರಹ? ಇದು ಮುಂದೆ ಸಾಕಷ್ಟು ಚರ್ಚೆಗೂ ಬರಬಹುದಾದ ಪ್ರಶ್ನೆ.

ವಿರೋಧಿಗಳಂತೂ ಇದನ್ನೇ ಬ್ರಹ್ಮಾಸ್ತ್ರವಾಗಿ ಬಳಸಿಕೊಳ್ಳುವುದಂತೂ ಗ್ಯಾರಂಟಿ. ಆದರೆ ಮೋದಿ ಅಧಿಕಾರದಲ್ಲಿ ಮುಂದುವರಿಯಬೇಕೆಂಬ ಜಾಯಾಮಾನದವರಲ್ಲ. ಆದರೆ ಪಕ್ಷ ಗೆದ್ದು ಬರಬೇಕಾದರೆ ಮೋದಿಯವರ ಹೆಸರು ಬೇಕೇ ಬೇಕು ಅನ್ನುವ ಪರಿಸ್ಥಿತಿ. ಮೋದಿ ಹೆಸರಿನಲ್ಲಿಯೇ ಗೆದ್ದು ಬಂದವರಿಗೆ ಮೋದಿಯವರು ಬೇಡ ಅನ್ನುವ ನೈತಿಕತೆ ಎಲ್ಲಿದೆ? ಮೋದಿಯವರಿಗೆ 2025ಕ್ಕೆ 75ತುಂಬಿದರೂ ಕೂಡ ಜನರು ಅವರನ್ನು ಬೇಡ ಅನ್ನುವ ಮನ:ಸ್ಥಿತಿಯಲ್ಲಿ ಖಂಡಿತವಾಗಿಯೂ ಇಲ್ಲ. ಅವರ ಮನೋಸಾಮರ್ಥ್ಯ ದೇಹದ ತಾಖತ್ತು ಚೆನ್ನಾಗಿ ಇರುವಾಗ 2029 ರವರೆಗೂ ಈ ದೇಶಕ್ಕೆ ಮೋದಿಯವರ ಅಗತ್ಯವಿದೆ ಅನ್ನುವುದನ್ಮು ಖಂಡಿತವಾಗಿಯೂ ಪ್ರತಿಪಾದಿಸುತ್ತಾರೆ. ಹಾಗಾಗಿ ಮೋದಿಯವರು 15 ವರುಷಗಳ ಕಾಲ ಈ ದೇಶದ ಪ್ರಧಾನಿಯಾಗುವುದು ಶತ ಸಿದ್ದ. ಅದರಲ್ಲಿ ಎರಡು ಮಾತಿಲ್ಲ.

ಬಿಜೆಪಿಗ್ಗಿಂತ ಮೋದಿಯವರು ಹೇಗೆ ಭಿನ್ನ? ಇದು ಕುತೂಹಲದ ಪ್ರಶ್ನೆ. ಮೋದಿ ಬಿಜೆಪಿ ಹೌದು ಆದರೆ ಬಿಜೆಪಿ ಮೋದಿ ಅಲ್ಲ. ಇದು ಖಂಡಿತವಾಗಿಯೂ ಸತ್ಯ.ಈ ಸತ್ಯದ ಅರಿವು ಮತದಾರರಿಗೆ ಆಗಿದೆ. ಮಾತ್ರವಲ್ಲ ಪಕ್ಷದವರಿಗೂ ಗೊತ್ತಿದೆ ಹಾಗಾಗಿ ಮೋದಿ ಅನ್ನುವ “ಬ್ರ್ಯಾಂಡ್ ನೇಮ್” ಬಿಜೆಪಿ ಗೆಲುವಿನ ಪ್ರಧಾನ ಅಸ್ತ್ರ. ಬಿಜೆಪಿ ಯವರಿಗೆ ಹಿಂದುತ್ವದ ಅಸ್ತ್ರ ಚಲಾವಣೆಯಲ್ಲಿ ಮಾಸಿದ ತಕ್ಷಣವೇ ಬಳಸಲು ಇರುವ ಪ್ರಮುಖ ಅಸ್ತ್ರವೆಂದರೆ ಮೋದಿ ಎಂಬ ನಾಮಾಸ್ತ್ರ. ಮೋದಿಯವರ ಪ್ರಾಮಾಣಿಕತೆ, ಅವಿಶ್ರಾಂತ ದುಡಿಮೆ, ದೂರದರ್ಶಿತ್ವ ಚಾಣಾಕ್ಷತನ, ವರ್ಚಸ್ಸು ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಸ್ನೇಹಿತನದ ವ್ಯವಹಾರದ ಗತ್ತುಗಾರಿಕೆ ಅದಕ್ಕಿಂತ ಮುಖ್ಯವಾಗಿ ಅಪ್ಪಟ ರಾಷ್ಟ್ರಭಕ್ತ ಇದರಿಂದಲೇ ಅವರಿಗೆ ಭಕ್ತಾದಿಗಳು ಜಾಸ್ತಿ.

ಇಂದು ಮೋದಿಯವರು ಎಷ್ಟು ಖ್ಯಾತರು ಅಂದರೆ ಗ್ರಾಮ ಮಟ್ಟದಿಂದ ಹಿಡಿದು ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದವರಗೆ ಮೋವರ ಹೆಸರನ್ನು ಪ್ರತಿದಿನವೂ ಜಪಿಸುವವರೂ ಇದ್ದಾರೆ, ಶಪಿಸುವವರೂ ಇದ್ದಾರೆ! ಹಾಗಾಗಿ ಮೋದಿ ಅನ್ನುವ ಹೆಸರು ಜಗದಗಲಕ್ಕೂ ಪಸರಿಸಿದೆ. ಮೋದಿಯವರ ಭಕ್ತರಿಗೆ ಮೋದಿಯವರ ಮೇಲೆ ಒಂದಿಷ್ಟು ಬೇಸರವೂ ಇದೆ. ಅದಕ್ಕೆ ಮುಖ್ಯ ಕಾರಣ ಇವರ ಹೆಸರನ್ನು ಹೇಳಿಕೊಂಡು ಗೆದ್ದು ಬಂದು ನಾವುಗಳೇ ಜನ ನಾಯಕರು ಅಂದುಕೊಂಡು ಭ್ರಷ್ಟಾಚಾರದಲ್ಲಿ ಮುಳುಗಿರುವವರನ್ನು ಇವರು ಸಹಿಸಿಕೊಂಡು ಬೆನ್ನು ತಟ್ಟುತ್ತಾರಲ್ಲ. ಇದು ಸ್ವಲ್ಪ ಮೋದಿಯವರ ಬಗ್ಗೆ ಬೇಸರ ತರುವ ಸಂಗತಿಯೂ ಹೌದು. ಹಾಗಂತ ಇಂತಹವರನ್ನು ಪೂರ್ತಿಯಾಗಿ ಹೊರಗಿಟ್ಟು ರಾಜಕೀಯ ಮಾಡುವುದು ಮೋದಿಯವರಿಗೂ ಕಷ್ಟ. ಇದು ಮೋದಿಯವರಿಗೂ ತಿಳಿದಿದೆ.

ರಾಷ್ಟ್ರ ರಕ್ಷಣಾ ಕಾರ್ಯದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ದೇಶದಲ್ಲಿ ಮಹತ್ತರ ಬದಲಾವಣೆ ಅಂದರೆ ಸಂವಿಧಾನದ ವಿಧಿ 370 ಮತ್ತು 35ಎ ರದ್ದು, ಪೌರತ್ವ ಕಾಯಿದೆ; ಜಿ ಎಸ್ ಟಿ; ಅನ್ನುವ ರಾಷ್ಟೀಯ ತೆರಿಗೆ ನೀತಿ; ರಾಮ ಮಂದಿರದಂತಹ ಸೂಕ್ಷ್ಮ ವಿಚಾರಗಳನ್ನು ನ್ಯಾಯಾಂಗದ ಪರಿಧಿಯಲ್ಲಿ ಬಗೆಹರಿಸಿದ್ದು ಭ್ರಷ್ಟಾಚಾರದ, ತಡೆಗೆ ನೋಟ್ ಬ್ಯಾನ್ ಅಸ್ತ್ರ ಮುಂತಾದ ಪ್ರಮುಖ ದಿಟ್ಟ ಹೆಜ್ಜೆಗಳು ಅವರನ್ನು ಸಾಧನೆಯ ಉತ್ತುಂಗಕ್ಕೆ ಏರಿಸಿದ ಕ್ರಾಂತಿಕಾರಿ ನಿರ್ಣಯಗಳು. ಆದರೂ ಮೋದಿಯವರು ಬಹುಮುಖ್ಯವಾದ ಸವಾಲುಗಳು ಇನ್ನೂ ಜೀವಂತವಾಗಿಯೇ ಇವೆ.

ಕೊರೊನದ ನಡುವೇ ದೇಶದಲ್ಲಿ ಉದ್ಯೋಗ ಆರ್ಥಿಕ ಚೇತರಿಕೆ ಆಗಬೇಕಾಗಿದೆ; ಬೆಲೆ ಏರಿಕೆ ನಿಯಂತ್ರಣ ಮಾಡಬೇಕಾದ ಅತೀ ದೊಡ್ಡ ಸವಾಲಿದೆ. ದೇಶದ ಹೆಮ್ಮೆಯ ಪ್ರಧಾನಿ ಎಂದೇ ಖ್ಯಾತರಾದ ಮೋದಿಯವರು ಈ ಎಲ್ಲಾ ಸವಾಲು ಸಮಸ್ಯೆಗಳನ್ನು ಬಗೆಹರಿಸಲಿ ಅನ್ನುವುದು ನಮ್ಮೆಲ್ಲರ ಆಶಯವೂ ಹೌದು.

-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ (ರಾಜಕೀಯ ವಿಶ್ಲೇಷಕರು)

1 COMMENT

  1. ಸಂಖ್ಯಾ ಬಲದೊಂದಿಗೆ ಗ್ರಹಬಲದ ಬಗ್ಗೆಯೂ ಹೇಳಿದ್ದರೆ ಚೆನ್ನಾಗಿತ್ತು,

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!