Saturday, November 23, 2024
Saturday, November 23, 2024

ಶಾಸಕರಿಗೆ ಪದವಿ ಮಟ್ಟಕ್ಕೆ ಸರಿ ಸಮಾನವಾದ ವಿದ್ಯಾರ್ಹತೆ ನಿಗದಿಪಡಿಸಬೇಕಾದ ಅಗತ್ಯತೆಯಿದೆ

ಶಾಸಕರಿಗೆ ಪದವಿ ಮಟ್ಟಕ್ಕೆ ಸರಿ ಸಮಾನವಾದ ವಿದ್ಯಾರ್ಹತೆ ನಿಗದಿಪಡಿಸಬೇಕಾದ ಅಗತ್ಯತೆಯಿದೆ

Date:

ಕರ್ನಾಟಕ ಸರಕಾರದ ಸಚಿವರಾದವರ ಖಾತೆಗಳ ಬೇಡಿಕೆ ಬೆಟ್ಟದಷ್ಟು ದೊಡ್ಡದಿದೆ, ಆದರೆ ಕೆಲವರ ಶೈಕ್ಷಣಿಕ ಅರ್ಹತೆ ಹೆಬ್ಬೆಟ್ಟಿಕ್ಕಿಂತಲೂ ಕೆಳಗಿದೆ. ಇನ್ನೂ ಮುಂದೆ ಆದರೂ ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಬೇಕಾದ ಅಗತ್ಯತೆ ಇದೆ. ಹಾಗಂತ ಪದವಿ ಆದವರೆಲ್ಲರೂ ಜಾಣರು, ಪ್ರಾಮಾಣಿಕರು ಅನ್ನುವ ಅರ್ಥವೂ ಅಲ್ಲ. ಆದರೂ ಕನಿಷ್ಠ ಪಕ್ಷ ತಮ್ಮ ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆ ಮಾತನಾಡುವಾಗ ಕೆಲವೊಂದು ಸಾಂವಿಧಾನಿಕ ಹುದ್ದೆಗಳ ಹಾಗೂ ತಾಂತ್ರಿಕ ಪದಗಳನ್ನು ಅರ್ಥೈಸಲು ಸುಲಭವಾಗುವುದರ ಜೊತೆಗೆ ಆತ್ಮವಿಶ್ವಾಸ ಮೂಡಿಬರಲು ಪೂರಕವಾಗಬಹುದು.

ಕೆಲವು ರಾಜ್ಯಗಳಲ್ಲಿ ಸ್ಥಳೀಯ ಪಂಚಾಯತ್ ಚುನಾವಣೆಗಳಿಗೆ ಸ್ಪರ್ಧಿಸಲು ಹತ್ತನೇ ತರಗತಿಯ ಶಿಕ್ಷಣ ಅನಿವಾರ್ಯ ಅನ್ನುವಾಗ ದೇಶದಲ್ಲಿಯೇ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ ಅನ್ನುವ ಹೆಗ್ಗಳಿಕೆ ಇರುವಾಗ ನಮ್ಮಲ್ಲಿ ಶಾಸಕರುಗಳ ಸ್ಥಾನಕ್ಕೆ ಕನಿಷ್ಟ ಪಕ್ಷ ಪದವಿ ಶಿಕ್ಷಣದ ಆರ್ಹತೆ ನಿಗದಿಪಡಿಸುವದು ಸೂಕ್ತವಲ್ಲವೇ? ಇಂದಿನ ನಮ್ಮಲ್ಲಿನ ಗರಿಷ್ಠ ಸಂಖ್ಯೆಯ ಸಚಿವರು ಎಸ್.ಎಸ್.ಎಲ್.ಸಿ. ತಪ್ಪಿದರೆ ಪಿ.ಯು.ಸಿ.ಬಿಟ್ಟರೆ ಪದವೀಧರರು/ಸ್ನಾತಕೋತ್ತರ ಪದವಿ ಗಳಿಸಿದ ಸಚಿವರ ಸಂಖ್ಯೆ ಶೇ.20 ರಷ್ಟು ಇಲ್ಲ ಅನ್ನುವುದು ಅವರ ಜಾತಕದ ಪರಿಚಯ ಪತ್ರಿಕೆಗಳಲ್ಲಿ ಓದಿದಾಗ ತಿಳಿದು ಬಂತು.

ಮುಂದೆ ಆದರೂ ಇವರೆಲ್ಲರೂ ತಮ್ಮ ಶೈಕ್ಷಣಿಕ ಆಹ೯ತೆ ಹೆಚ್ಚಿಸಿ ಕೊಳ್ಳುಬೇಕು ಅನ್ನುವ ಷರತ್ತನ್ನು ಮುಖ್ಯಮಂತ್ರಿ ಹಾಕಿದ್ದರೆ ಚೆನ್ನಾಗಿರುತ್ತಿತ್ತು. ಹೆಚ್ಚಿನ ಸಚಿವರಿಗೆ ತಮ್ಮ ಇಲಾಖೆಗಳ ಕಾರ್ಯವ್ಯಾಪ್ತಿಯೇ ಗೊತ್ತಿಲ್ಲ. ಬರೇ ತಮ್ಮ ಖಾತೆಗೆ ಎಷ್ಟು ಅನುದಾನ ಬರುತ್ತದೆ, ಹಾಗೂ ಇನ್ನಿತರ ಹಣಕಾಸಿನ ಲೆಕ್ಕಾಚಾರ ಗೊತ್ತಿದೆ ಬಿಟ್ಟರೆ ತಮ್ಮ ಇಲಾಖೆಯಲ್ಲಿ ಜನರ ಶ್ರೇಯೋಭಿವೃದ್ದಿ ಹೇಗೆ ಮಾಡಬಹುದು, ಯಾವ ರೀತಿ ಉದ್ಯೋಗ ಸೃಷ್ಟಿ ಮಾಡಬಹುದು ಅನ್ನುವ ಸಾಮಾನ್ಯ ತಿಳುವಳಿಕೆ ಇಲ್ಲ ಅನ್ನುವುದು ಅವರು ಖಾತೆಗಳನ್ನು ಹುಡುಕುವ ವಿಧಾನದಲ್ಲಿಯೇ ಸ್ವಷ್ಟವಾಗಿ ಗೋಚರಿಸುತ್ತದೆ.

ಮತದಾರರು ಸುಶಿಕ್ಷಿತರಾಗಬೇಕೆಂದು ಸದಾ ಹೇಳುವ ಬಿಜೆಪಿ ಉನ್ನತ ನಾಯಕರುಗಳು ಕನಿಷ್ಠ ಪಕ್ಷ ತಮ್ಮ ಶಾಸಕರುಗಳು ಕನಿಷ್ಠ ಪದವಿ ಮಟ್ಟಕ್ಕೆ ಸರಿ ಸಮಾನವಾದ ವಿದ್ಯಾರ್ಹತೆ ಪಡೆದಿರಬೇಕು ಅನ್ನುವ ನಿಯಮಾವಳಿಯನ್ನು ಶಾಸಕರಿಗೆ ಅನ್ವಯಿಸುವುದು ಇಂದಿನ ಅನಿವಾರ್ಯತೆ ಅನ್ನುವುದು ನನ್ನ ಅಭಿಪ್ರಾಯ ಕೂಡ.

-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಮ್ಮ ಉಳಿವಿಗಾಗಿ ಪಶ್ಚಿಮ ಘಟ್ಟದ ಸಂರಕ್ಷಣೆ ಅತ್ಯಗತ್ಯ

ಮಂಗಳೂರು, ನ.23: ‘ಸಾರ ಸಂಸ್ಥೆ’ ‘ಪರಿಸರಕ್ಕಾಗಿ ನಾವು’ ವೇದಿಕೆಯ ಸಹಯೋಗದೊಂದಿಗೆ ಡಾ....

ಉಡುಪಿ ಜ್ಞಾನಸುಧಾ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಉಡುಪಿ, ನ.23: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ...

ಪ್ರಧಾನಮಂತ್ರಿ ಫಸಲ್ ಬಿಮಾ ಹಿಂಗಾರು ಮತ್ತು ಬೇಸಿಗೆ ಹಂಗಾಮು ಯೋಜನೆ

ಉಡುಪಿ, ನ.22: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಭತ್ತವನ್ನು ಗ್ರಾಮ...

ಜಿಲ್ಲೆಯಲ್ಲಿ ಕೆ.ಎಫ್.ಡಿ ಪ್ರಕರಣಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ

ಉಡುಪಿ, ನ.22: ಕ್ಯಾಸನೂರು ಅರಣ್ಯ ರೋಗವು ಅಥವಾ ಮಂಗನ ಜ್ವರ ಕಾಯಿಲೆಯು...
error: Content is protected !!