Monday, January 20, 2025
Monday, January 20, 2025

ಮಾಮ್ಸ್ ಬಗ್ಗೆ ಭಯ ಬೇಡ, ಎಚ್ಚರವಿರಲಿ

ಮಾಮ್ಸ್ ಬಗ್ಗೆ ಭಯ ಬೇಡ, ಎಚ್ಚರವಿರಲಿ

Date:

ಮಾಮ್ಸ್ ಅಥವಾ ಮಂಗನ ಬಾವು ಎಂದು ಕರೆಯುವ ವಿರಳವಾಗಿದ್ದ ಈ ಕಾಯಿಲೆ ಮತ್ತೆ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಇದರ ಬಗ್ಗೆ ತಿಳಿದುಕೊಳ್ಳೋಣ.

ಏನಿದು ಮಾಮ್ಸ್?: ಇದು ಪ್ಯಾರಾಮಿಕ್ಸೊ ವೈರಸ್ ಎಂಬ ವೈರಾಣುವಿನ ಸೋಂಕಾಗಿದೆ. ಇದರಲ್ಲಿ ಕೆನ್ನೆ ಹಾಗೂ ದವಡೆಯಲ್ಲಿರುವ ಪೆರೋಟಿಡ ಲಾಲಾ ಗ್ರಂಥಿಗಳಲ್ಲಿ ಉರಿಯೂತವಾಗುತ್ತದೆ.

ಹೇಗೆ ಹರಡುತ್ತದೆ?: ಸೋಂಕಿತ ವ್ಯಕ್ತಿಗಳ ಸೀನಿನ ಅಥವಾ ಉಸಿರಾಟಗಳಿಂದ ಇತರರಿಗೆ ಹರಡುತ್ತದೆ. (ಡ್ರಾಪ್ಲೆಟ್ ಇನ್ಫೆಕ್ಷನ್). ಸೀನುವುದರಿಂದ, ಕೆಮ್ಮಿನಿಂದ ಮಾತನಾಡುವಾಗ, ಮುಟ್ಟಿದ ವಸ್ತುಗಳಿಂದ, ಆಟ ಆಡುವಾಗ ಹರಡುವುದು.

ರೋಗದ ಲಕ್ಷಣಗಳು: ಈ ಕಾಯಿಲೆ ಎರಡರಿಂದ ಹದಿನೈದು ವರ್ಷದ ಮಕ್ಕಳಿಗೆ ಕಾಡುವುದು ಜಾಸ್ತಿ. ವಯಸ್ಕರಿಗೂ ಸೋಂಕಾಗಬಹುದು. ಮೈಕೈ ನೋವು, ವಿಪರೀತ ಜ್ವರ, ವಾಂತಿ, ತಲೆನೋವು, ದುರ್ಬಲತೆ, ಹಸಿವಾಗದೆ ಇರುವುದು, ಕೆನ್ನೆಯ ಬದಿಯಲ್ಲಿ ಬಾವು ಕಾಣಿಸಿಕೊಳ್ಳುತ್ತದೆ. ಕಿವಿ ನೋವು ಮತ್ತು ದವಡೆ ನೋವು ಕೂಡ ಇರಬಹುದು. ಇದು ಕೆಲವು ವಾರಗಳ ಕಾಲವಿರುತ್ತದೆ. ಒಂದು ಸಲ ಬಂದರೆ ಮತ್ತೊಮ್ಮೆ ಸೋಂಕಾಗುವುದು ಕಡಿಮೆ. ಇದರಿಂದ ಅನೇಕ ದುಷ್ಪರಿಣಾಮಗಳು ಆಗಬಹುದು. ಕೆಲವು ಅಂಗಗಳಿಗೆ ಹಾನಿ ಉಂಟು ಮಾಡಬಹುದು. ಗಂಡು ಮಕ್ಕಳಲ್ಲಿ ವೃಷಣಗಳ ಉರಿಯೂತವಾಗಿ ಪುರುಷರ ಬಂಜೆತನಕ್ಕೆ ಕಾರಣವಾಗಬಹುದು. ಹೆಣ್ಣು ಮಕ್ಕಳಲ್ಲಿ ಅಂಡಾಶಯಗಳ ಉರಿಯೂತವಾಗಿ ಬಂಜೆತನವಾಗಬಹುದು. ಮೇದೋಜೀರಕಾಂಗದ ಉರಿಯೂತವಾಗಬಹುದು. ಇದರಿಂದ ವಾಂತಿ ಹಾಗು ಇನ್ನಿತರ ಲಕ್ಷಣಗಳು ಕಾಣಬಹುದು. ಕಿವುಡುತನ, ಮೂತ್ರಪಿಂಡದ ಉರಿಯೂತ, ತೈರೊಯ್ಡ ಉರಿಯೂತ, ಕೀಲುಗಳ ಉರಿಯೂತ ಆಗಬಹುದು.

ಜಾಗರೂಕರಾಗಿರಿ: ಈ ಸೋಂಕು ತಗಲಿದಾಗ ಇತರರ ಜೊತೆ ಬೆರೆಯಬಾರದು. ಇತರರಿಗೆ ಸೋಂಕು ತಾಗುವ ಭಯವಿರುವುದು. ಇದನ್ನು ತಡೆಯಲು ಎಂಎಂಆರ್ ವ್ಯಾಕ್ಸಿನ್ (ಮಮ್ಸ್ ಮಿಸೆಲ್ ರುಬೆಲ್ಲಾ) ಮುಂಚಿನಿಂದಲೂ ಲಭ್ಯವಿದೆ. ತಪ್ಪದೆ ನೀಡಿ.

ಚಿಕಿತ್ಸೆ: ಚಿಕಿತ್ಸೆಯ ವಿಷಯ ಬಂದಾಗ ಇದಕ್ಕೆಂದೇ ಔಷಧಿಗಳು ಲಭ್ಯವಿಲ್ಲ. ಅದರ ಲಕ್ಷಣಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಜ್ವರ, ಕೆಮ್ಮು, ನೆಗಡಿಗೆ ಔಷಧ ನೀಡುತ್ತಾರೆ. ನೀರನ್ನು ಸೇವಿಸಿ. ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ. ಊತದ ಮೇಲೆ ಐಸ್ ಪ್ಯಾಕ್ ಇಡಿರಿ. ಆಯುರ್ವೇದ ಔಷಧಗಳು- ಸುದರ್ಶನ ಘನವಟಿ, ತ್ರಿಭುವನ ಕೀರ್ತಿ ರಸ. ತಾಲಿಸಾದಿ ಚೂರ್ಣ, ಅಮೃತಾರಿಸ್ಟ್ ಮುಂತಾದವುಗಳು.

-ಡಾ. ಹರ್ಷಾ ಕಾಮತ್

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!