ಚಳಿಗಾಲದಲ್ಲಿ ದೇಹವನ್ನು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು ಖರ್ಜೂರ ಸೇವನೆ ಅತ್ಯಗತ್ಯ. ಚಳಿಗಾಲದಲ್ಲಿ ನಮ್ಮ ದೇಹದಲ್ಲಿ ವಿಭಿನ್ನ ರೀತಿಯ ಸಮಸ್ಯೆಗಳು ಉಂಟಾಗುವುದು ಸಾಮಾನ್ಯ. ಖರ್ಜೂರ ಸೇವಿಸುವುದರಿಂದ ಚಳಿಗಾಲದಲ್ಲಿ ದೈಹಿಕ ಸಮಸ್ಯೆಗಳನ್ನು ದೂರ ಮಾಡಬಹುದು.
ಒಣಗಿದ ಖರ್ಜೂರ ಸೇವನೆಯಿಂದ ಚಳಿಯಿಂದ ದೇಹದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ. ಖರ್ಜೂರದಲ್ಲಿ ಕಾರ್ಬೋಹೈಡ್ರೇಟ್, ಪೊಟ್ಯಾಸಿಯಮ್, ಫೈಬರ್, ವಿಟಮಿನ್ ಸಿ, ಮತ್ತು ಕಬ್ಬಿಣ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಇದರಿಂದ ದೇಹಕ್ಕೆ ಚೈತನ್ಯ ಲಭಿಸುವುದು.
ರಕ್ತದೊತ್ತಡ ರೋಗಿಗಳಿಗೆ ಖರ್ಜೂರ ಸೇವನೆಯಿಂದ ಹಲವು ಉಪಯೋಗಗಳಿವೆ. ಖರ್ಜೂರದ ಫೈಬರ್ ಜೀರ್ಣಕ್ರಿಯೆ ಉತ್ತಮವಾಗಿ ಆಗುವಂತೆ ಸಹಕರಿಸುತ್ತದೆ. ಖರ್ಜೂರದ ಹಿತಮಿತ ಸೇವನೆಯಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಅಸಿಡಿಟಿ ಸಮಸ್ಯೆಯನ್ನು ಕೂಡ ನಿವಾರಿಸುವ ಸಾಮರ್ಥ್ಯ ಖರ್ಜೂರಕ್ಕಿದೆ. ಶ್ವಾಸಕೋಶವನ್ನು ಉತ್ತಮ ಸ್ಥಿತಿಯಲ್ಲಿಡಲು ಖರ್ಜೂರ ಸೇವನೆ ಅತ್ಯಗತ್ಯವಾಗಿದೆ.
ತಜ್ಞರ ಪ್ರಕಾರ ಬೆಳಿಗ್ಗೆ ಹಾಲಿನೊಂದಿಗೆ 2 ರಿಂದ 3 ಖರ್ಜೂರವನ್ನು ಬೆರೆಸಿ ಕುಡಿಯುವುದರಿಂದ ಚಳಿಯ ಅನುಭವ ಕಡಿಮೆಯಾಗುವುದು. ಖರ್ಜೂರದ ಹಾಲು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಖರ್ಜೂರ ಹಾಲು ಜ್ವರ ಮತ್ತು ಶೀತ ಬಾಧೆಯನ್ನು ಕಡಿಮೆ ಮಾಡುತ್ತದೆ. ಉದ್ಯೋಗಿಗಳಿಗೆ ಉದ್ಯೋಗ ಕ್ಷೇತ್ರದಲ್ಲಿ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯ ಖರ್ಜೂರಕ್ಕಿದೆ. ಖರ್ಜೂರ ಸೇವನೆಯಿಂದ ದೇಹಕ್ಕೆ ಚೈತನ್ಯ ಲಭಿಸುವುದರಿಂದ ಆಯಾಸ ಕಡಿಮೆಯಾಗುತ್ತದೆ.