Saturday, November 23, 2024
Saturday, November 23, 2024

ಸೂರ್ಯನ ಆವೃತ್ತಿತ ನರ್ತನ

ಸೂರ್ಯನ ಆವೃತ್ತಿತ ನರ್ತನ

Date:

ಪ್ರತಿ ದಿನವೂ ಈ ರೀತಿಯ ಪ್ರಕ್ರಿಯೆ ಸೂರ್ಯನಲ್ಲಿ ಶತ, ಸಹಸ್ರಮಾನಗಳಿಂದಲೇ ಅಂಕೆ ಇಲ್ಲದೇ ನಡೆಯುತ್ತಲೇ ಇದೆ. ಇದು ಸೂರ್ಯನ ಮೇಲೆ ಕಾಣುವ ಕಲೆಗಳಿಂದ ನಮಗೆ ತಿಳಿಯುತ್ತಿದೆ. ಕೆಲ ವರ್ಷಗಳಲ್ಲಿ ಕಲೆಗಳೇ ಇರುವುದಿಲ್ಲ. ಶಾಂತ ಸೂರ್ಯ.

ಮ್ಮ ಸೂರ್ಯನೇ ಹೀಗೆ. ಹನ್ನೊಂದು ವರ್ಷಗಳಿಗೊಮ್ಮೆ ಡಂಗುರ ಸಾರಿ ನರ್ತನ. ದಶದಿಶೆಗೆ ಉಕ್ಕಿ ಉಕ್ಕಿ ಚಿಮ್ಮುವ ಶಕ್ತಿ ಪ್ರವಾಹಗಳು. ಇವೇ ಸೂರ್ಯನ ಮಾರುತಗಳು. ಶತ, ಸಹಸ್ರಮಾನಗಳಿಂದಲೂ ಈ ಪೃಕ್ರಿಯೆ ನಡೆಯುತ್ತಿದೆಯಾದರೂ ನಮಗೆ ಇತ್ತೀಚೆಗಷ್ಟೇ ಸ್ವಲ್ಪ ಸ್ವಲ್ಪ ತಿಳಿಯುತ್ತಿದೆ.

2020 ರಿಂದ ಪ್ರಾರಂಭವಾಗಿರುವ ಹನ್ನೊಂದು ವರ್ಷಗಳ ಈ ಹೊಸ ಆವರ್ತನೆಯಲ್ಲಿ, ಇದೀಗ ಇಂದು ವಿಜೃಂಭಣೆ. ಇವತ್ತಿನ ಈ ಸೌರ ಮಾರುತಗಳನ್ನು ಅತೀ ಹೆಚ್ಚಿನ ಶಕ್ತಿಯ ಎಕ್ಸ್ 1 ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ಸೌರ ಮಾರುತಗಳ ಶಕ್ತಿಯನ್ನು ಎ, ಬಿ, ಸಿ, ಎಮ್ ಹಾಗೂ ಎಕ್ಸ್ ಎಂದು ವಿಂಗಡಿಸುತ್ತಾರೆ. ಎ, ಕಡಿಮೆ ಶಕ್ತಿ ಯವುಗಳಾದರೆ, ಎಕ್ಸ್ ಮಾರುತಗಳು ಅತೀ ಹೆಚ್ಚಿನ ಶಕ್ತಿಯ ಮಾರುತಗಳು. 2011 ರಲ್ಲೂ ಈಗಿನಂತೆ ಶಕ್ತಿಯುತ ಮಾರುತ ಅಪ್ಪಳಿಸಿತ್ತು.

ಹನ್ನೊಂದು ವರ್ಷಗಳ ಆವರ್ತನೆಯಲ್ಲಿ ಕೆಲವು ದಿನಗಳಲ್ಲಿ ಈಗಿನ ಮಟ್ಟದ ಅತೀ ಹೆಚ್ಚಿನ ಶಕ್ತಿ ಉತ್ಸರ್ಜನೆ ಕಾಣುತ್ತೇವೆ. ಇದೇನೂ ಹೊಸತಲ್ಲ. ಸೂರ್ಯನ ಆವರ್ತನೆಗಳಲ್ಲಿ ಮಾಮೂಲಿ. ಪ್ರತೀ ದಿನವೂ ಈ ರೀತಿಯ ಪ್ರಕ್ರಿಯೆ ಸೂರ್ಯನಲ್ಲಿ ಶತ, ಸಹಸ್ರಮಾನಗಳಿಂದಲೇ ಅಂಕೆ ಇಲ್ಲದೇ ನಡೆಯುತ್ತಲೇ ಇದೆ. ಇದು ಸೂರ್ಯನ ಮೇಲೆ ಕಾಣುವ ಕಲೆಗಳಿಂದ ನಮಗೆ ತಿಳಿಯುತ್ತಿದೆ. ಕೆಲ ವರ್ಷಗಳಲ್ಲಿ ಕಲೆಗಳೇ ಇರುವುದಿಲ್ಲ. ಶಾಂತ ಸೂರ್ಯ. ಆದರೆ ಅತೀ ಕಡಿಮೆ ಆದ ಕೆಲವೇ ಸಮಯದಲ್ಲಿ ಅತೀ ಹೆಚ್ಚು ಕಲೆಗಳಿಂದ ವಿಜ್ರಂಭಿಸುವುದು ಸೂರ್ಯನ ನರ್ತನದ ಕ್ರಮ. 2019 ರಲ್ಲಿ ಅತೀ ಕಡಿಮೆ ಸೂರ್ಯನ ಕಲೆಗಳು.

ಈ ಕಲೆಗಳು ದೊಡ್ಡದಾಗಿ ಕಂಡಾಗ, ಅಲ್ಲಿಂದ ವಿಶೇಷ ಶಕ್ತಿ ಮಾರುತಗಳು ಭೂಮಿಗೂ ಅಪ್ಪಳಿ‌ಸುವದುಂಟು. ಈಗ ನಡೆಯುತ್ತಿರುವುದೂ ಅದೇ. ಮೊನ್ನೆ ಜುಲೈ 3 ರಂದು ಈ ರೀತಿಯ ಪ್ರಕ್ರಿಯೆ ವಿಜ್ಞಾನಿಗಳ ಗಮನಕ್ಕೆ ಬಂತು. ಇದೊಂದು ಪ್ರಬಲ ಸೌರ ಮಾರುತವಾಗಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದರು.

ನಮ್ಮ ಭೂಮಿ ಈ ರೀತಿಯ ಹೊಡೆತಗಳನ್ನು ಪ್ರಾರಂಭದಿಂದಲೂ ಸಹಿಸಿಕೊಂಡು ಬಂದಿದೆ. ಈ ನಮ್ಮ ಭೂಮಿಯ ಸುತ್ತ ಇರುವ ಭೂ ಅಯಾನುಗಳ ಕವಚಗಳು (ವಾನ್ ಅಲೆನ್ ಬೆಲ್ಟ್) ಸೂರ್ಯ ಮಾರುತಗಳಿಗೆ ನೇರ ನುಗ್ಗಲು ಅವಕಾಶ ಕೊಡುವುದಿಲ್ಲ. ಭೂಮಿಯ ಸುತ್ತ ಸುಮಾರು 5 ಸಾವಿರ ಹಾಗೂ 15 ಸಾವಿರ ಕಿಮೀ ದೂರದಲ್ಲಿ ಕಾಂತ ಕ್ಷೇತ್ರದಂತೆ ಸುತ್ತಿಕೊಂಡಿವೆ ಈ ಕವಚಗಳು. ಅವು ಸಮಭಾಜಕ ವೃತ್ತದ ಸುತ್ತ ಉಬ್ಬಿ, ಧ್ರುವ ಪ್ರದೇಶಗಳಲ್ಲಿ ಕಂತಿವೆ. ಹಾಗಾಗಿ ಈ ಸೌರ ಮಾರುತಗಳು ಭೂಮಿಯ ಧ್ರುವ ಪ್ರದೇಶದಲ್ಲಿ ಹೆಚ್ಚು ಅಪ್ಪಳಿಸುತ್ತವೆ.

ತೊಂದರೆ ಯಾರಿಗೆ?

ಆಕಾಶದಲ್ಲಿರುವ ಗಗನ ಯಾತ್ರಿಗಳಿಗೆ, ಹಾಗೆ ನಮ್ಮ ಎಲ್ಲ ಕೃತಕ ಉಪಗ್ರಹಗಳಿಗೆ ಈ ಶಕ್ತಿಯುತ ಮಾರುತಗಳು ತೊಂದರೆ ಕೊಡುತ್ತವೆ. ಈ ಸೌರ ಮಾರುತಗಳ ವಿದ್ಯುತ್ ಕಾಂತೀಯ ಶಕ್ತಿಯುತ ಕಣಗಳು, ಕೃತಕ ಉಪಗ್ರಹಗಳ ಇಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಪ್ರಭಾವ ಬೀರಬಹುದು. ಭೂಮಿ ತನ್ನ ಸುತ್ತಲಿನ ಎಲ್ಲ ಜೀವಿಗಳನ್ನು ಈ ಮಾರುತಗಳಿಂದ ರಕ್ಷಿಸಿದರೂ, ಮನುಷ್ಯ ಮಾಡಿಕೊಂಡಿರುವ ಆಕಾಶದಲ್ಲಿರುವ ಆಧುನಿಕ ತಂತ್ರಜ್ಞಾನಗಳು ಕೆಲ ಕ್ಷಣಗಳ ತೊಂದರೆಗೆ ಈಡಾಗಬಹುದು.

ಈ ಕಷ್ಟ ಕಾಲದಲ್ಲೂ ಸಂಭ್ರಮವೊಂದಿದೆ, ಅದೇ ಧ್ರುವ ಪ್ರಭೆ. ಈ ಮಾರುತಗಳ ಅಬ್ಬರದ ಕಾಲದಲ್ಲಿ ಉತ್ತರ ಹಾಗೂ ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಅತೀ ಸುಂದರ ಪ್ರಭೆ ಕಾಣಲಿದೆ. ಈ ಪ್ರದೇಶಗಳಲ್ಲಿ ಭೂಮಿಯ ವಾತಾವರಣದ ಒಳ ನುಸುಳಿದ ಮಾರುತ ಕಣಗಳು ವಾತಾವರಣದ ಕಣಗಳೊಂದಿಗೆ ಘರ್ಷಿಸಿ ಕಣ್ಣಿಗೆ ಕಾಣುವ ಬಣ್ಣ ಬಣ್ಣದ ಬೆಳಕನ್ನು ಬಿಡುಗಡೆ ಮಾಡುತ್ತವೆ. ಇದು ಇಡೀ ಉತ್ತರ ಆಕಾಶದಲ್ಲಿ ಕೆಲ ನಿಮಿಷಗಳ ಅತೀ ಸುಂದರ ಕುಣಿತ. ಬಹಳ ಮನೋಹರವಾಗಿರುತ್ತವೆ ಈ ಧ್ರುವ ಪ್ರಭೆಗಳು. ಈಗ ಈ ಕೆಲ ತಿಂಗಳುಗಳಲ್ಲಿ ಧ್ರುವ ಪ್ರಭೆ ಅತೀ ಹೆಚ್ಚಿರುತ್ತದೆ.

ಇಷ್ಟೆಲ್ಲಾ ತಿಳಿದಿರುವ ನಮಗೆ ಸೂರ್ಯ ಇನ್ನೂ ಅರ್ಥ ಆಗಿಲ್ಲ. ಈ ಸೌರ ಕಲೆಗಳು, ಹನ್ನೊಂದು ವರ್ಷಗಳ ಆವರ್ತನ, ಚಿಮ್ಮಿ ಚಿಮ್ಮುವ ಶಕ್ತಿ ಯುಕ್ತಿ ಪ್ರವಾಹಗಳು, ವಿಜ್ಞಾನಿಗಳಿಗೂ ಸರಿಯಾಗಿ ತಿಳಿದಿಲ್ಲ. ಸೂರ್ಯನೇ ಅರ್ಥವಾಗಿಲ್ಲ ಇನ್ನೂ.
ಅಧ್ಯಯನ ನಡೆಯತ್ತಲೇ ಇದೆ.

ಡಾ ಎ ಪಿ ಭಟ್, ಉಡುಪಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತಿಹಾಸದ ಅವಲೋಕನ ಬದುಕಿನ ಪುನರ್ ವಿಮರ್ಶೆಗೆ ಸಹಾಯಕ: ಶಬಾನ್ ಅಂಜುಮ್

ಕೋಟ, ನ.22: ಇತಿಹಾಸದ ಪಿತಾಮಹ ಹೆರೋಡಟಸ್ ಸಂಸ್ಕೃತಿಗಳ ತಿಳಿಯಲು ಒಂದು ಉತ್ತಮ...

ಆನಂದತೀರ್ಥ: ವಾರ್ಷಿಕ ಕ್ರೀಡಾಕೂಟ

ಕಟಪಾಡಿ, ನ.22: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪಾಜಕ ಆನಂದತೀರ್ಥ ಪ.ಪೂ ಕಾಲೇಜು...

ಸಾಂಸ್ಕೃತಿಕ ಸ್ಪರ್ಧೆ: ಮಣಿಪಾಲ ಜ್ಞಾನಸುಧಾದ ವಿದ್ಯಾರ್ಥಿಗಳ ಅಮೋಘ ಸಾಧನೆ

ಉಡುಪಿ, ನ.22: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ...

ಅರುಣ್ಯಾ 2024: ಭಂಡಾರಕಾರ್ಸ್ ಪಿಯು ಕಾಲೇಜು ತಂಡ ಚಾಂಪಿಯನ್

ಬಸ್ರೂರು, ನ.22: ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿ ಉಡುಪಿ ಜಿಲ್ಲಾಮಟ್ಟದ...
error: Content is protected !!