Monday, November 25, 2024
Monday, November 25, 2024

ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಕುಂದಗೋಳ

ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಕುಂದಗೋಳ

Date:

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿರುವ ಐತಿಹಾಸಿಕ ದೇವಾಲಯವೇ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ. ಪ್ರಸ್ತುತ ಕುಂದಗೋಳ ಎಂದು ಕರೆಯುವ ಈ ಪ್ರದೇಶದ ಮೂಲ ಹೆಸರು ಕುಂದಣ ಆಗಿತ್ತು ಎಂದು ಹೇಳುತ್ತಾರೆ. ಹಾಗೆಯೇ ಇಲ್ಲಿರುವ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಮೂಲನಾಮ ಶ್ರೀ ರಾಮಚಂದ್ರೇಶ್ವರ ಶಂಭುಲಿಂಗೇಶ್ವರ ಎಂಬುದು. ಪ್ರಸ್ತುತ ಈ ದೇವಾಲಯವು ರಾಷ್ಟ್ರೀಯ ಪುರಾತತ್ವ ಸಂರಕ್ಷಿತ ಸ್ಮಾರಕವಾಗಿದೆ.

ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ: ಈ ದೇವಾಲಯವನ್ನು ಕದಂಬ ಕಾಲದಲ್ಲಿ ನಿರ್ಮಾಣ ಮಾಡಿದ್ದು ಹಾಗೂ 11ನೇ ಶತಮಾನದಲ್ಲಿ ಚಾಲುಕ್ಯರು ಪುನರ್ ನವೀಕರಿಸಿದರೆಂದು ದಾಖಲೆಗಳು ಹೇಳುತ್ತವೆ. ನಂತರ ಕಾಲದಲ್ಲಿ ಈ ದೇವಾಲಯವು ಮುಸ್ಲಿಂ ದಾಳಿಗೆ ಒಳಪಟ್ಟು 19ನೇ ಶತಮಾನದ ಹೊತ್ತಿಗೆ ದೇವಾಲಯವು ಇನ್ನೊಮ್ಮೆ ಜೀರ್ಣೋದ್ಧಾರವಾಯಿತು ಎಂದು ತಿಳಿದು ಬರುತ್ತದೆ. ದೇವಾಲಯಕ್ಕೆ ಸಂಬಂಧಪಟ್ಟಂತೆ ಇಲ್ಲಿ ಶಾಸನವನ್ನು ಸಹ ನೋಡಬಹುದು.

ದೇವಾಲಯದ ವಾಸ್ತುಶೈಲಿ: ಪೂರ್ವಾಭಿಮುಖವಾಗಿರುವ ನಿರ್ಮಾಣವಾಗಿರುವ ಈ ದೇವಾಲಯವು ಏಕಕೂಟವಾಗಿದ್ದು, ಗರ್ಭಗೃಹ, ಅಂತರಾಳ ಮತ್ತು ನವರಂಗ ಭಾಗಗಳನ್ನು ಒಳಗೊಂಡಿದೆ. ಗರ್ಭಗುಡಿಯಲ್ಲಿನ ಪಾಣಿಪೀಠದಲ್ಲಿರುವ ಶಿವಲಿಂಗವು ತೆಳು ಕಂದು ಬಣ್ಣದಲ್ಲಿದ್ದು ವಿಶೇಷತೆಯಿಂದ ಕೂಡಿದೆ. ಗರ್ಭಗುಡಿಗೆ ಅಭಿಮುಖವಾಗಿ ನಂದಿಯ ವಿಗ್ರಹವಿದ್ದು, ಪ್ರತಿವರ್ಷ ಯುಗಾದಿಯಂದು ಬೆಳಗ್ಗೆ ಸೂರ್ಯನ ಪ್ರಥಮ ಕಿರಣವು ಗರ್ಭಗುಡಿ ಮುಂದೆ ಕುಳಿತಿರುವ ನಂದಿಯ ಕೊಂಬಿನ ಮಧ್ಯದಲ್ಲಿ ಹಾದು ಹೋಗಿ ಶಿವಲಿಂಗವನ್ನು ಸ್ಪರ್ಶಿಸುತ್ತದೆ.

ಇಲ್ಲಿಯೇ ಪರಿವಾರ ದೇವತೆಗಳಾದ ಪಾರ್ವತಿ ಮತ್ತು‌ ಗಣಪತಿ ವಿಗ್ರಹವಿದೆ. ನವರಂಗ ಭಾಗದಲ್ಲಿ ವಿವಿಧ ಆಕೃತಿಯ ಹೊಳಪಾದ 64 ಕಂಬಗಳಿದ್ದು, ಪ್ರತಿಯೊಂದು ಕಂಬವನ್ನು ನುಣುಪಾಗಿ ಮತ್ತು ವಿವಿಧ ಕೆತ್ತನೆಗಳಿಂದ ಕೂಡಿದೆ. ಸಭಾಮಂಟಪದಲ್ಲಿ ಕುಳಿತುಕೊಳ್ಳಲು ಕಕ್ಷಾಸನದ ವ್ಯವಸ್ಥೆಯಿದ್ದು, ದೇವಾಲಯದ ಹೊರಭಾಗದ ಕಕ್ಷಾಸನದಲ್ಲಿ‌ ವಿವಿಧ ರೀತಿಯ ಶಿಲ್ಪಗಳು, ಲತಾಬಳ್ಳಿಗಳ ಕೆತ್ತನೆಯನ್ನು ಕಾಣಬಹುದು. ದೇವಾಲಯದಲ್ಲಿ ಮುಖ್ಯವಾಗಿ ಶಿವರಾತ್ರಿ ಹಬ್ಬವನ್ನು‌ ವಿಜೃಂಭಣೆಯಿಂದ ನಡೆಸುವುದು ಮಾತ್ರವಲ್ಲದೇ ಈ ದೇವಾಲಯವು ಚಾಲುಕ್ಯರ ಕಲಾ ಶೈಲಿಗೆ ಹೆಸರುವಾಸಿಯಾಗಿದೆ‌ ಎಂದು ಹೇಳಬಹುದು.

ಸಂಗ್ರಹ: ಮಹಾಂತೇಶ್ ಸಿ ಉಣಕಲ್, ಪ್ರಥಮ ಬಿ.ಎ ವಿದ್ಯಾರ್ಥಿ, ಎಂ.ಎಸ್.ಆರ್.ಎಸ್ ‌ಕಾಲೇಜು ಶಿರ್ವ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!