Tuesday, February 25, 2025
Tuesday, February 25, 2025

ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ಇನ್ನ

ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ಇನ್ನ

Date:

ಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಿಂದ ಸುಮಾರು 22 ಕಿ.ಮೀ ದೂರದಲ್ಲಿರುವ ಗ್ರಾಮವೇ ಇನ್ನ. ಈ‌ ಗ್ರಾಮದಲ್ಲಿರುವ ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಾಲಯವು ತನ್ನದೇ ಆದ ಕ್ಷೇತ್ರ ಐತಿಹ್ಯವನ್ನು ಹೊಂದಿದೆ.

ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ಶಾಂಭವಿ ನದಿಯ ದಡದಲ್ಲಿರುವ ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಾಲಯವು, ಇನ್ನ ಗ್ರಾಮದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ.

ದಂತಕಥೆಯ ಪ್ರಕಾರ ಭಾರ್ಗವ ಋಷಿಯು ಹತ್ತಿರದ ಬೆಟ್ಟದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿದಾಗ ಸಂತೋಷಗೊಂಡ ಶಿವನು ಭಾರ್ಗವನನ್ನು ಆಶೀರ್ವದಿಸಿ ಕೈಲಾಸದಿಂದ‌ ಕೆಳಗಿಳಿದು ಬಂದು ಲಿಂಗದ ರೂಪದಲ್ಲಿ ಇರುವುದಾಗಿ ವರವನ್ನು ನೀಡಿದನು. ಹಾಗಾಗಿ ಈ ದೇವಸ್ಥಾನವು ಹುಟ್ಟಿಕೊಂಡಿತು ಎಂಬ ಪ್ರತೀತಿ ಇದೆ‌. ಇಂದಿಗೂ ಸಹ ಬಹುಪಾಲು ಭಾರ್ಗವ ಗೋತ್ರದ ಕುಟುಂಬಗಳಿಗೆ ಇನ್ನ ಮಹಾಲಿಂಗೇಶ್ವರ ಹಾಗೂ ದುರ್ಗಾಪರಮೇಶ್ವರಿ ಕುಲದೇವರಾಗಿದ್ದಾರೆ. ಶಿಲಾಮಯವಾಗಿರುವ ಗರ್ಭಗುಡಿಯಲ್ಲಿ ಶಿವನನ್ನು ಲಿಂಗದ ರೂಪದಲ್ಲಿ ಪೂಜಿಸುತ್ತಿದ್ದು, ಇದಕ್ಕೆ ಅಭಿಮುಖವಾಗಿ ನಂದಿ ವಿಗ್ರಹವನ್ನು ನೋಡಬಹುದು.

ಗರ್ಭಗುಡಿಯ ನಂತರದಲ್ಲಿ ತೀರ್ಥ ಮಂಟಪವಿದೆ. ತುಳುನಾಡಿನ ಹೆಚ್ಚಿನ ದೇವಾಲಯಗಳಲ್ಲಿ ಕಂಡು ಬರುವಂತೆ ಇಲ್ಲಿಯು ಸಹ ನೈಋತ್ಯ ದಿಕ್ಕಿನಲ್ಲಿ ಗಣಪತಿ ಗುಡಿಯನ್ನು ನೋಡಬಹುದು. ಈ ಗುಡಿಯ ಎಡಬದಿಯಲ್ಲಿ ಸಾಸ್ತಾರ ಗುಡಿ (ಅಯ್ಯಪ್ಪ ದೇವರ ಗುಡಿ) ಇದ್ದು, ದೇವಸ್ಥಾನ ಪ್ರವೇಶಿಸುವಾಗ ಎಡ ಭಾಗದಲ್ಲಿ ವರಾಹಿ ಗುಡಿ (ಪಂಜುರ್ಲಿ ಗುಡಿ) ಇದೆ. ದೇವಾಲಯದ ಒಳಭಾಗದಲ್ಲಿ ಒಂದು ಬಾವಿ ಹಾಗೂ ತುಳಸಿ ಕಟ್ಟೆಯನ್ನು ಕಾಣಬಹುದು. ದೇವಾಲಯದ ಹೊರಭಾಗದಲ್ಲಿ ಹೋಮಗಳನ್ನು ಮಾಡಲು ಮಂಟಪವಿದ್ದು, ದೇವಾಲಯದ ಸುತ್ತಲೂ ಉದ್ಯಾನವನವನ್ನು ಕಾಣಬಹುದು. ಈ ದೇವಾಲಯವು 2006 ರಲ್ಲಿ ಜೀರ್ಣೋದ್ಧಾರಗೊಂಡಿದೆ‌.

ಸಂಗ್ರಹ: ವೇದ್ಯಾಶ್ರೀ
ದ್ವಿತೀಯ ಬಿ.ಎ ವಿದ್ಯಾರ್ಥಿನಿ
ಎಂ.ಎಸ್.ಆರ್.ಎಸ್ ಕಾಲೇಜು ಶಿರ್ವ

 

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...
error: Content is protected !!