ಒಬ್ಬ ವ್ಯಕ್ತಿ ತನ್ನ ದೇಹದ ಆರೋಗ್ಯವನ್ನು ಕಾಪಾಡಲು ಹಲವಾರು ಚಟುವಟಿಕೆಗಳನ್ನು ಮಾಡುತ್ತಾನೆ. ಯೋಗ, ವ್ಯಾಯಾಮ, ವಾಯುವಿಹಾರ, ಹೀಗೆ ಅನೇಕ ವಿಧಾನಗಳನ್ನು ಅನುಸರಿಸುತ್ತಾನೆ. ಚಪ್ಪಾಳೆ ಹೊಡೆಯುವುದರಿಂದ ನಾವು ಫಿಟ್ ಎಂಡ್ ಫ್ರೆಶ್ ಆಗಿರಲು ಸಾಧ್ಯ. ಹೌದು, ಕ್ಲಾಪಿಂಗ್ ಥೆರಪಿಯಿಂದ ಎಷ್ಟೆಲ್ಲಾ ಉಪಯೋಗಗಳಿವೆ!
ವ್ಯಕ್ತಿ ಅಥವಾ ಗುಂಪನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಥವಾ ಒಬ್ಬರ ಸಾಧನೆಯನ್ನು ಮೆಚ್ಚಿ ನಾವು ಚಪ್ಪಾಳೆ ತಟ್ಟುತ್ತೇವೆ. ಚಪ್ಪಾಳೆ ಹೊಡೆಯುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬ ವಿಚಾರ ಹಲವರಿಗೆ ಗೊತ್ತಿರಲಿಕ್ಕಿಲ್ಲ.
ಚಪ್ಪಾಳೆ ತಟ್ಟುವುದು ಕೂಡ ಒಂದು ಥೆರಪಿಯೇ. ನಮಗೆ ತಿಳಿಯದ ಹಾಗೆ ಚಪ್ಪಾಳೆಯಿಂದ ನಮ್ಮ ಆರೋಗ್ಯ ವೃದ್ಧಿಸುತ್ತದೆ. ಚಪ್ಪಾಳೆಯ ಸಂದರ್ಭದಲ್ಲಿ ನಮ್ಮ ಕೈಗಳ ಎಲ್ಲ ಬಿಂದುಗಳು ಸ್ಪರ್ಶಿಸುವುದರಿಂದ ಅನೇಕ ರೋಗಗಳು ಕಡಿಮೆಯಾಗುತ್ತವೆ.
ಚಪ್ಪಾಳೆ ತಟ್ಟುವುದರಿಂದ ನಮ್ಮ ದೇಹದಲ್ಲಿ ರಕ್ತ ಸಂಚಾರ ಸುಗಮವಾಗುವುದು ಮಾತ್ರವಲ್ಲದೇ ನಮ್ಮಲ್ಲಿರುವ ಕಾಲೆಸ್ಟ್ರಾಲ್ ಅಂಶಗಳು ಕಡಿಮೆಯಾಗುತ್ತವೆ. ಅಸ್ತಮಾ, ಡಯಾಬಿಟಿಸ್, ಹೃದಯ ಸಂಬಂಧಿ ಖಾಯಿಲೆ, ಸಂಧಿವಾತದಂತಹ ಖಾಯಿಲೆಗಳಿಂದ ಮುಕ್ತಿ ಸಿಗಲು ನಮಗೆ ಚಪ್ಪಾಳೆ ಸಹಕಾರಿಯಾಗುತ್ತದೆ. ಚಪ್ಪಾಳೆ ತಟ್ಟುವುದರಿಂದ ದೇಹಕ್ಕೆ ನವೋಲ್ಲಾಸ ಸಿಗುತ್ತದೆ.
ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುವುದರಿಂದ ಅವರ ಬರವಣಿಗೆಯಲ್ಲಿ ಸಾಕಷ್ಟು ಸುಧಾರಣೆಯಾಗುತ್ತದೆ. ನಿಯಮಿತವಾಗಿ ಚಪ್ಪಾಳೆ ತಟ್ಟುವುದರಿಂದ ದೇಹಕ್ಕೆ ಚೈತನ್ಯ ಸಿಗುತ್ತದೆ. ನಮ್ಮಲ್ಲಿ ಸಕಾರಾತ್ಮಕ ಆಲೋಚನೆಗಳು ಹೆಚ್ಚಾಗಲು ಚಪ್ಪಾಳೆ ಸಹಕಾರಿಯಾಗಿದೆ.
ಚಪ್ಪಾಳೆ ತಟ್ಟುವುದರಿಂದ ನಮ್ಮಲ್ಲಿರುವ ಬಿಳಿ ರಕ್ತ ಕಣಗಳು ಹೆಚ್ಚಾಗಿ ಹಲವಾರು ರೋಗದಿಂದ ನಮ್ಮನ್ನು ರಕ್ಷಿಸುತ್ತದೆ. ಚಪ್ಪಾಳೆಯಿಂದ ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಸಿಗುವ ಜೊತೆಗೆ ದೈಹಿಕ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ. ನಿಯಮಿತವಾದ ಚಪ್ಪಾಳೆಯಿಂದ ವಿವಿಧ ಅಂಗಗಳಿಗೆ ರಕ್ತ ಪರಿಚಲನೆಯು ಸುಧಾರಿಸುತ್ತದೆ.