Saturday, November 23, 2024
Saturday, November 23, 2024

ಭಾರತೀಯ ಅಕ್ಷರ ಸಂಪತ್ತು‌‌ ಕಾಪಾಡಿದ‌ ಶ್ರೇಷ್ಠ ‌ಶ್ರೀತಾಳೆ (ಸೀತಾಳೆ) ಮರ

ಭಾರತೀಯ ಅಕ್ಷರ ಸಂಪತ್ತು‌‌ ಕಾಪಾಡಿದ‌ ಶ್ರೇಷ್ಠ ‌ಶ್ರೀತಾಳೆ (ಸೀತಾಳೆ) ಮರ

Date:

ಸಿರು, ಹಸಿವು, ಅಕ್ಷರ” ಸಂಪತ್ತನ್ನು ಒದಗಿಸುವ ಶ್ರೀತಾಳೆ ಎಂಬ ಶ್ರೇಷ್ಠ ಮರವು ಪ್ರಸ್ತುತ ವಿಶ್ವದ ಕೆಂಪು ಪಟ್ಟಿಯಲ್ಲಿದೆ ಎಂದು ಹೇಳಲು ಬೇಸರವಾಗುತ್ತಿದೆ‌. ಕಾರಣ ಈ‌ ಮರ ಹೂ ಬಿಟ್ಟರೆ ಕೇಡುಗಾಲ ವಕ್ಕರಿಸಿದಾಗೆ, ಸೂತಕದ ಛಾಯೆ ಗ್ರಾಮದವರಿಗೆ ಕಟ್ಟಿಟ್ಟ ಬುತ್ತಿ ಎನ್ನುವ ಮೌಢ್ಯದ ನಂಬಿಕೆಯಿಂದಾಗಿ.

ಈ‌ ಮರದ ಸಸ್ಯನಾಮ “ಕೊರಿಫಾ ಅಂಬ್ರಕುಲಿಫೆರಾ” (Corypha Umbraculifera) ಇಂಡೋನೇಷ್ಯಾ ಭಾಗದಲ್ಲಿ “ಲೊಂಟಾರ” (Lontara) ಎಂಬುದಾಗಿ ಕರೆಯುತ್ತಾರೆ.‌ ಈ‌ ಮರಕ್ಕೆ ಕನ್ನಡದಲ್ಲಿ ಶ್ರೀತಾಳೆ/ ಸೀತಾಳೆ, ಸಂಸ್ಕೃತದಲ್ಲಿ ಅವಿನಾಶಿ, ಕೇರಳದಲ್ಲಿ ಕೊಡಪಣ ಮರ ಹಾಗೂ ತುಳುವಿನಲ್ಲಿ ಪಣೋಲಿದ ಮರ ಎಂದೂ ಕರೆಯುತ್ತಾರೆ.

ಈ ಮರವು ಸುಮಾರು 66 ವರ್ಷಗಳಿಗೊಮ್ಮೆ ಹೂ ಬಿಡವುದರ‌ ಮೂಲಕ ಎರಡು ಲಕ್ಷಕ್ಕೂ ಹೆಚ್ಚು ಬೀಜವನ್ನು ಬಿಡುತ್ತದೆ. ಈ ಮರದ ಒಡಲಲ್ಲಿ ಸುಮಾರು 200-250 ಕೆ.ಜಿ.ಯಷ್ಟು ಸಬ್ಬಕ್ಕಿಯಂತ ಹಿಟ್ಟು/ತಿರುಳು ದೊರಕುತ್ತದೆ‌.

ಇಂತಹ ಮರಗಳು ಕಾಡು-ನಾಡಿನಲ್ಲಿ ಇದ್ದರೆ ಸುಮಾರು 100 ಕುಟುಂಬಗಳು 3 ತಿಂಗಳುಗಳ ಕಾಲದಷ್ಟು ಆಹಾರವನ್ನು ಪಡೆಯಬಹುದು. ಇದರಲ್ಲಿ ಸಂಗ್ರಹ ಮಾಡಿದ ಸುಮಾರು 38000 ಬೀಜಗಳನ್ನು ಕಾವೇರಿಯಿಂದ ವಾರಣಾಸಿಯವರೆಗೆ ಈಗಾಗಲೇ ‌ಪ್ರಸಾರಣ ಮಾಡಲಾಗಿದೆ.

ಭಾರತೀಯ ಇತಿಹಾಸ, ಪುರಾಣ, ಕಾವ್ಯಗಳನ್ನು ಅಕ್ಷರ ರೂಪದಲ್ಲಿ ಬರೆದಿರುವುದು ಈ‌ ಮರದ ಎಲೆಗಳಿಂದಲೇ. ಇವುಗಳನ್ನು “ತಾಡೋಲೆ ಗ್ರಂಥ” ಎಂದು ಕರೆಯಲಾಗುತ್ತದೆ. ಇಂತಹ‌ ಅನೇಕ ಮರಗಳು ಉಡುಪಿ, ದಕ್ಷಿಣ ‌ಕನ್ನಡ ಜಿಲ್ಲೆಗಳಲ್ಲಿದ್ದು ಅವುಗಳ ರಕ್ಷಣಾ ಕೆಲಸ ಮಾತ್ರ ತುಂಬಾ ಕಷ್ಟಸಾಧ್ಯವಾಗಿದೆ.‌

ಏಕೆಂದರೆ ಈ ಮರವು ಹೂ ಬಿಟ್ಟು ಅರಳಿ ನಿಂತರೆ ಊರಿಗೆ, ಮನೆಯ‌ ಯಜಮಾನನಿಗೆ ಅನಿಷ್ಟವೆಂದು ಕಡಿದುರುಳಿಸುತ್ತಿರುವರು. ಆದರೂ ಇಂತಹ ಮರಗಳ ರಕ್ಷಣೆಯನ್ನು ಮಾಡುವ ಅನೇಕ ವೃಕ್ಷ ‌ಪ್ರೇಮಿಗಳು, ಸಂಶೋಧಕರು ಇದ್ದಾರೆ.

ವಿನಾಶದಂಚಿನಲ್ಲಿರುವ ಶ್ರೀತಾಳೆ ಮರದ ಸಂರಕ್ಷಣೆಯು ಸಕ್ರಿಯವಾಗಿ ‌ಮುಂದುವರಿಯಬೇಕಾಗಿದೆ, ಮೌಢ್ಯತೆಗೆ‌ ಒಳಗಾಗದೇ‌ ಭಾರತೀಯ ‌ಇತಿಹಾಸಕ್ಕೆ ಕೊಡುಗೆಯನ್ನು ನೀಡಿದ ಶ್ರೀತಾಳೆ‌ ಮರದ ರಕ್ಷಣೆ ನಮ್ಮ‌‌ ನಿಮ್ಮೆಲ್ಲರ ಹೊಣೆಯಾಗಿದೆ.

ಮಾಹಿತಿ: ಪ್ರೊ. ಎಸ್‌. ಎ. ಕೃಷ್ಣಯ್ಯ (ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ-ಉಡುಪಿ. ಇದರ ಅಧ್ಯಯನ ‌ನಿರ್ದೇಶಕರು)

ಬರಹ: ಶ್ರುತೇಶ್ ಆಚಾರ್ಯ ‌ಮೂಡುಬೆಳ್ಳೆ. (ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ)
ಛಾಯಾಚಿತ್ರ ಕೃಪೆ: ರವಿ ಸಂತೋಷ್ ಆಳ್ವ
ಸಹಕಾರ: ಗಣೇಶ್ ರಾಜ್ ಸರಳೇಬೆಟ್ಟು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತಿಹಾಸದ ಅವಲೋಕನ ಬದುಕಿನ ಪುನರ್ ವಿಮರ್ಶೆಗೆ ಸಹಾಯಕ: ಶಬಾನ್ ಅಂಜುಮ್

ಕೋಟ, ನ.22: ಇತಿಹಾಸದ ಪಿತಾಮಹ ಹೆರೋಡಟಸ್ ಸಂಸ್ಕೃತಿಗಳ ತಿಳಿಯಲು ಒಂದು ಉತ್ತಮ...

ಆನಂದತೀರ್ಥ: ವಾರ್ಷಿಕ ಕ್ರೀಡಾಕೂಟ

ಕಟಪಾಡಿ, ನ.22: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪಾಜಕ ಆನಂದತೀರ್ಥ ಪ.ಪೂ ಕಾಲೇಜು...

ಸಾಂಸ್ಕೃತಿಕ ಸ್ಪರ್ಧೆ: ಮಣಿಪಾಲ ಜ್ಞಾನಸುಧಾದ ವಿದ್ಯಾರ್ಥಿಗಳ ಅಮೋಘ ಸಾಧನೆ

ಉಡುಪಿ, ನ.22: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ...

ಅರುಣ್ಯಾ 2024: ಭಂಡಾರಕಾರ್ಸ್ ಪಿಯು ಕಾಲೇಜು ತಂಡ ಚಾಂಪಿಯನ್

ಬಸ್ರೂರು, ನ.22: ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿ ಉಡುಪಿ ಜಿಲ್ಲಾಮಟ್ಟದ...
error: Content is protected !!