Sunday, January 19, 2025
Sunday, January 19, 2025

ಆಷಾಢ

ಆಷಾಢ

Date:

12 ಚಾಂದ್ರಮಾನ ಮಾಸಗಳಲ್ಲಿ ಆಷಾಢ ಮಾಸವು ನಾಲ್ಕನೆಯ ಮಾಸವಾಗಿದ್ದು, ಇದು ಗ್ರೀಷ್ಮ ಋತುವಿನಲ್ಲಿ ಕಂಡುಬರುತ್ತದೆ. ಆಷಾಢ ಎಂಬ ಹೆಸರು ಪೂರ್ವಾಷಾಢ ಮತ್ತು ಉತ್ತರಾಷಾಢ ಎಂಬ ನಕ್ಷತ್ರಗಳ ಆಧಾರದಿಂದ ಬಂದಿದೆ ಎನ್ನಲಾಗುತ್ತದೆ.

ಪುರಾಣ ಕಥೆಯ ಪ್ರಕಾರ ಆಷಾಢಳು ಇಂದ್ರ ಲೋಕದ ದೇವತೆಯಾಗಿದ್ದು, ಒಂದೊಮ್ಮೆ ನಾಗಕನ್ಯೆಯ ರೂಪವನ್ನು ಧರಿಸಿ ಶಿವನನ್ನು ನೋಡುವ ಸಲುವಾಗಿ ಕೈಲಾಸವನ್ನು ಪ್ರವೇಶಮಾಡುತ್ತಾಳೆ. ಧ್ಯಾನಮಗ್ನನಾಗಿದ್ದ ಶಿವನನ್ನು ನೋಡಿದ ಕೂಡಲೇ ಆಷಾಢಳು, ಪಾರ್ವತಿಯ ರೂಪವನ್ನು ಧಾರಣೆ ಮಾಡಿ ಶಿವನ ಪಕ್ಕ ಕುಳಿತುಕೊಳ್ಳುತ್ತಾಳೆ. ಇದನ್ನು ಅರಿತ ಶಿವನು ಕ್ರೋಧಗೊಂಡು ತನ್ನ ತ್ರಿಶೂಲದಿಂದ ಆಕೆಯನ್ನು ದೂರಸರಿಸಿ ಭೂಲೋಕದಲ್ಲಿ “ಕಹಿಯಾದ ಬೇವಿನ ಮರವಾಗಿ ಹುಟ್ಟು” ಎಂದು ಶಪಿಸುತ್ತಾನೆ. ತನ್ನ ತಪ್ಪಿನ ಅರಿವಾದ ಆಷಾಢಳನ್ನು ಗಮನಿಸಿದ ಶಿವನು ಆಷಾಢಳಿಗೆ, “ಬೇವಿನ ಮರವಾದರೂ ಭೂಲೋಕದಲ್ಲಿ ಪೂಜಿಸಲು ಅರ್ಹಳಾಗು” ಎಂದು ಆಶೀರ್ವಾದ ನೀಡುತ್ತಾನೆ. ಈ ರೀತಿಯಾಗಿ ಆಕೆ ಭೂಮಿಯ ಮೇಲೆ ಪೂಜೆಗೆ ಅರ್ಹಳಾದಳು ಎಂಬ ಪ್ರತೀತಿಯಿದೆ.

ಇನ್ನೊಂದು ಕಥೆಯ ಪ್ರಕಾರ ಹಿಂದೊಮ್ಮೆ ಇಂದ್ರದೇವನು ಋಷಿ ಗೌತಮನಿಂದ ಶಾಪಕ್ಕೆ ಒಳಗಾದಗ ಆಷಾಢದ ನಾಲ್ಕು ಸೋಮವಾರ ಸೋಮೇಶ್ವರನ ವ್ರತವನ್ನು ಕೈಗೊಂಡು ಶಾಪ ಮುಕ್ತನಾದ ಎಂಬ ಪ್ರತಿತಿಯಿದೆ. ಇಷ್ಟು ಮಾತ್ರವಲ್ಲದೇ ಶಿವನು ಪಾರ್ವತಿಗೆ ಅಮರತ್ವದ ರಹಸ್ಯವನ್ನು ಇದೇ ಮಾಸದಲ್ಲಿ ಹೇಳಿದ್ದ ಎಂದೂ, ಹಾಗೆಯೇ ಗಂಗೆಯು ಭೂಮಿಗೆ ಇದೇ ಮಾಸದಲ್ಲಿ ಹರಿದು ಬಂದಿದ್ದಳು ಎಂಬ ಪ್ರತೀತಿ ಇದೆ. ಮಹಾ ಪತಿವ್ರತೆಯಾದ ಅನುಸೂಯ ದೇವಿಯು ಈ ಮಾಸದ ನಾಲ್ಕು ಸೋಮವಾರ ಶಿವನ ವ್ರತ ಕೈಗೊಂಡಿದ್ದಳು ಎನ್ನಲಾಗಿದೆ.

ಈ ಮಾಸದಲ್ಲಿ ಸೂರ್ಯನು ಉತ್ತರಾಯಣದಿಂದ ದಕ್ಷಿಣಾಯಣಕ್ಕೆ ತನ್ನ ಪಥದ ಬದಲಾವಣೆ ಮಾಡಿ ಮಿಥುನ ರಾಶಿ ಇಂದ ಕರ್ಕಾಟಕ ರಾಶಿಗೆ ಪ್ರವೇಶಿಸುತ್ತಾನೆ. ಹೀಗಾಗಿ ಈ ಮಾಸವು ದಕ್ಷಿಣಾಯಣದ ಪ್ರಾರಂಭವನ್ನು ಸೂಚಿಸುತ್ತದೆ. ಇದನ್ನು “ಶೂನ್ಯಮಾಸ” ಎಂದು ಕರೆಯಲಾಗಿದೆ. ಹಿಂದೂ ಪುರಾಣಗಳು ಹೇಳುವ ಪ್ರಕಾರ ದೇವಾನುದೇವತೆಗಳು ಉತ್ತರಾಯಣದಲ್ಲಿ ಎಚ್ಚರವಿದ್ದು, ದಕ್ಷಿಣಾಯಣದಲ್ಲಿ
ನಿದ್ರೆಗೆ ಜಾರುತ್ತಾರೆ.

ಸನಾತನ ಧರ್ಮದಲ್ಲಿನ ಎಲ್ಲಾ ಶುಭ ಕೈಂಕರ್ಯಗಳು ದೇವರ ಉಪಸ್ಥಿತಿಯಲ್ಲಿ ನಡೆಯುತ್ತವೆ, ಆದರೆ ಈ ಮಾಸದಲ್ಲಿ ದೇವಾನುದೇವತೆಗಳು ನಿದ್ರೆಗೆ ಜಾರುವುದರಿಂದ ಈ ಮಾಸದಲ್ಲಿ ಯಾವುದೇ ಶುಭಕಾರ್ಯಗಳು ನಡೆಯುವಂತಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ನೈಸರ್ಗಿಕ ಕಾರಣವೇನೆಂದರೆ ಈ ಮಾಸದಲ್ಲಿ ಮಳೆಯು ಯಥೇಚ್ಛವಾಗಿ ಆಗುವುದರಿಂದ ಮತ್ತು ಕೃಷಿಗೆ ಹೆಚ್ಚಾಗಿ ಉತ್ತೇಜನ ನೀಡುವುದರಿಂದ ಜನರು ಬೇರೆ ಕೆಲಸಗಳಿಗೆ ಹೆಚ್ಚಾಗಿ ಗಮನಹರಿಸುವುದಿಲ್ಲ ಎನ್ನುವುದಾಗಿದೆ.

ಈ ಆಷಾಢ ಮಾಸದಲ್ಲಿ ಗುಪ್ತ ನವರಾತ್ರಿ, ಭೀಮನ ಅಮವಾಸ್ಯೆ ಮುಂತಾದ ಹಬ್ಬಗಳು ಪ್ರಮುಖವಾದವುಗಳಾಗಿವೆ. ಪುರಿ ಜಗನ್ನಾಥ ಯಾತ್ರೆಯು ಈ ಮಾಸದ ವಿಶೇಷವಾಗಿದೆ. ಯತಿಗಳು ಈ ಮಾಸದಲ್ಲಿ ತಮ್ಮ ಚಾತುರ್ಮಾಸವನ್ನು ಪಡೆಯುತ್ತಾರೆ ಮತ್ತು ಈ ಮಾಸದಲ್ಲಿ ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಅಲ್ಲದೆ ಪ್ರಥಮ ಏಕಾದಶಿ ವ್ರತ, ಅಮರನಾಥನ ಶಿವಲಿಂಗ ದರ್ಶನವೂ ಪ್ರತಿವರ್ಷ ಈ ಸಮಯದಲ್ಲೇ ನಡೆಯುತ್ತದೆ.

ತುಳುನಾಡಿನಲ್ಲಂತೂ ಈ ಮಾಸವನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ತುಳುವಿನಲ್ಲಿ ಈ ಮಾಸವನ್ನು “ಆಟಿ ತಿಂಗೊಲ್’ ಎಂದು ಕರೆಯಲಾಗುತ್ತದೆ. ಈ ತಿಂಗಳಲ್ಲಿ ಆಟಿದ ಅಮಾವಾಸ್ಯೆ ಒಂದು ವಿಶೇಷ ಆಚರಣೆಯಾಗಿದೆ. ಈ ಅಮಾವಾಸ್ಯೆಯ ದಿನ ಹಾಳೆ ಅಥವಾ ಸಪ್ತಪರ್ಣೀಯ ಮರದ ಕೆತ್ತೆಯನ್ನು ಸೂರ್ಯೋದಯಕ್ಕೆ ಮುಂಚಿತವಾಗಿ ಕಲ್ಲಲ್ಲಿ ಕೆತ್ತಿ ತಂದು ಕಷಾಯ ಮಾಡಿ ದೇವರಿಗೆ ಸಮರ್ಪಣೆ ಮಾಡಿ ಕುಡಿಯುವ ಪದ್ಧತಿ ಇದೆ ಹಾಗೂ ಇದರೊಂದಿಗೆ ಮೆತ್ತೆದ ಗಂಜಿ, ಪತ್ರಡ್ಡೆ ಇತ್ಯಾದಿ ವಿಶೇಷ ಖಾದ್ಯಗಳನ್ನು ಮಾಡಲಾಗುತ್ತದೆ.

ಕೆಸರ್ ಕಂಡೊದ ಗೊಬ್ಬು, ಆಟಿಡೊಂಜಿ ದಿನ ಮುಂತಾದ ಕಾರ್ಯಕ್ರಮಗಳನ್ನು ಈ ತಿಂಗಳಿನಲ್ಲೇ ಹಮ್ಮಿಕೊಳ್ಳಲಾಗುತ್ತದೆ. ಈ ಮಾಸದಲ್ಲಿ ಮಾಡುವಂತ ಅಡುಗೆಗಳು ಕೂಡ ವಿಶೇಷವೇ ಹೌದು. ಹಾಗೆಯೇ ಊರಿಗೆ ಬಂದ ಮಾರಿಯನ್ನು ದೂರ ಮಾಡಲು ಆಟಿ ಕಳೆಂಜೆ ಮನೆ ಮನೆಗೆ ಬರುವುದು ಕೂಡ ಇದೇ ತಿಂಗಳಿನಲ್ಲಿ. ಅಲ್ಲದೆ ಈ ತಿಂಗಳಿನಲ್ಲಿ ನವ ವಿವಾಹಿತ ಸ್ತ್ರೀಯನ್ನು ತವರು ಮನೆಗೆ ಕಳುಹಿಸುವ ಪದ್ಧತಿ ಇದೆ. ಈ ತಿಂಗಳಿನಲ್ಲಿ ಅತ್ತೆ-ಸೊಸೆ, ಪತಿ-ಪತ್ನಿ ಒಟ್ಟಿಗೆ ಇರುವುದನ್ನು ಹಿರಿಯರು ನಿಷೇಧಿಸಿರುತ್ತಾರೆ.

ಹೀಗೆ ಆಷಾಢ ಮಾಸವು ಶ್ರೇಷ್ಠವಾದ ಮಹತ್ವವನ್ನು ಹೊಂದಿರುವ ಮಾಸ ಎನ್ನಬಹುದಾಗಿದೆ.

-ಶ್ರಾವ್ಯಾ ಆಚಾರ್ಯ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!