Friday, September 20, 2024
Friday, September 20, 2024

ತಲೈವಾ ರಜನೀಕಾಂತ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ತಲೈವಾ ರಜನೀಕಾಂತ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

Date:

ಭಾರತದ ಸಿನೆಮಾ ರಂಗದ ಮಹಾನ್ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯು ದೊರೆತಿದೆ. ಅದಕ್ಕೆ ಅವರು ಅತ್ಯಂತ ಅರ್ಹರಾಗಿದ್ದಾರೆ.

ಭಾರತೀಯ ಸಿನಿಮಾರಂಗಕ್ಕೆ ಗಣನೀಯ ಕೊಡುಗೆ ನೀಡಿದ ಓರ್ವ ವ್ಯಕ್ತಿಗೆ ಪ್ರತೀ ವರ್ಷವೂ ಈ ಪ್ರಶಸ್ತಿಯು ಲಭಿಸುತ್ತ ಬಂದಿದ್ದು ಈ ಬಾರಿ ರಜನೀಕಾಂತ್ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಆರಂಭದಲ್ಲಿ ಬೆಂಗಳೂರಿನಲ್ಲಿ ಒಬ್ಬ ಸಾಮಾನ್ಯ ಬಸ್ ಕಂಡಕ್ಟರ್ ಆಗಿ ತನ್ನ ಹೋರಾಟದ ಬದುಕನ್ನು ಆರಂಭ ಮಾಡಿದ ಶಿವಾಜಿ ರಾವ್ ಗಾಯಕವಾಡ (ರಜನಿಕಾಂತ್ ಮೊದಲ ಹೆಸರು) ಮೊದಲ ಬಾರಿಗೆ ಅಭಿನಯಿಸಿದ್ದು ತಮಿಳು ‘ಅಪೂರ್ವ ರಾಗಂಗಳ’ ಸಿನೆಮಾದಲ್ಲಿ. ಅದು ಲೆಜೆಂಡರಿ ನಿರ್ದೇಶಕರಾದ ಕೆ.ಬಾಲಚಂದರ್ ಅವರು ನಿರ್ದೇಶನ ಮಾಡಿದ ಸಿನೆಮಾ. ಆರಂಭದ ಹತ್ತಾರು ಸಿನೆಮಾಗಳಲ್ಲಿ ರಜನಿ ಅಭಿನಯ ಮಾಡಿದ್ದು ವಿಲನ್ ಪಾತ್ರಗಳಲ್ಲಿ!

ಮುಂದೆ ಭಾರತದ ಖ್ಯಾತನಾಮ ನಿರ್ದೇಶಕರಾದ ಕೆ.ಬಾಲಚಂದರ್, ಭಾರತೀರಾಜ, ಬಾಲು ಮಹೇಂದ್ರ, ಪಿ. ವಾಸು, ಶಂಕರ್ ಮೊದಲಾದವರು ಅವರ ಒಳಗಿದ್ದ ದೈತ್ಯ ಅಭಿನಯ ಪ್ರತಿಭೆಯನ್ನು ಹೊರತೆಗೆದರು.

ಈಗ ರಜನೀಕಾಂತ್ ಬೆಳೆದು ನಿಂತಿರುವ ರೀತಿಯನ್ನು ನೋಡಿದಾಗ ನಿಜವಾಗಿಯೂ ವಿಸ್ಮಯ ಮೂಡುತ್ತದೆ. ವರ್ಷಕ್ಕೆ ಒಂದು, ಎರಡು ವರ್ಷಕ್ಕೆ ಒಂದು ಹೀಗೆ ಆಯ್ದ ಸಿನೆಮಾದಲ್ಲಿ ಅಭಿನಯ ಮಾಡುತ್ತಿರುವ ಆತನ ಶ್ರೇಷ್ಟ ಸಿನೆಮಾಗಳು ಕಡಿಮೆ ಅಂದರೂ 400-500 ಕೋಟಿ ರೂ.ಗಳಷ್ಟು ದುಡಿಯುತ್ತವೆ. ಆತನಿಗೆ ಜಗತ್ತಿನ ಎಲ್ಲ ಕಡೆಗಳಲ್ಲಿ ಅಭಿಮಾನಿ ಸಂಘಗಳಿವೆ. ಜಪಾನಿನ ಆತನ ಸಾವಿರ ಸಂಖ್ಯೆಯ ಅಭಿಮಾನಿಗಳು ರಜನಿ ಸಿನೆಮಾ ಬಿಡುಗಡೆ ಆದಾಗ ಭಾರತಕ್ಕೆ ಬಂದು ಸಿನೆಮಾ ನೋಡಿ ಹೋಗುತ್ತಾರೆ.

ಉತ್ತಮ ಪಾತ್ರ ದೊರೆತರೆ ಕೇವಲ ಒಂದು ರೂಪಾಯಿ ಸಂಭಾವನೆ ಪಡೆದು ಕೂಡ ರಜನೀಕಾಂತ್ ಅಭಿನಯ ಮಾಡಿದ್ದಿದೆ. ಚಾರಿಟಿಯಲ್ಲಿ ಕೂಡ ಆತ ಇತರರಿಗಿಂತ ಮುಂದೆ ಇದ್ದಾನೆ. ಶ್ರೇಷ್ಠವಾದ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳು ಈಗಾಗಲೇ ಆತನಿಗೆ ದೊರೆತಿವೆ.

ಈ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಆತ ತನ್ನ ಗುರುವಾದ ಕೆ. ಬಾಲಚಂದ್ರನ್ ಅವರಿಗೆ ಸಮರ್ಪಣೆ ಮಾಡಿದ್ದಾರೆ ಮತ್ತು ತನ್ನ ಸಂಕಷ್ಟ ಕಾಲದಲ್ಲಿ ಸಹಾಯ ಮಾಡಿದ ಹಲವು ಗೆಳೆಯರನ್ನು ಪ್ರೀತಿಯಿಂದ ನೆನಪು ಮಾಡಿಕೊಂಡಿದ್ದಾರೆ.

ತಲೈವಾ ರಜನೀಕಾಂತ್ ಅವರಿಗೆ ಶುಭವಾಗಲಿ.

ರಾಜೇಂದ್ರ ಭಟ್ ಕೆ
ಜೇಸಿಐ ರಾಷ್ಟ್ರಮಟ್ಟದ ತರಬೇತುದಾರರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!