Monday, January 20, 2025
Monday, January 20, 2025

ಯುವ ಮನಸ್ಸಿನ ಸಮೂಹದ ಹೆಜ್ಜೆಗೆ ಹತ್ತು ವರ್ಷದ ಸಂಭ್ರಮ

ಯುವ ಮನಸ್ಸಿನ ಸಮೂಹದ ಹೆಜ್ಜೆಗೆ ಹತ್ತು ವರ್ಷದ ಸಂಭ್ರಮ

Date:

ಬ್ರಹ್ಮಾವರ, ಜ.6: ವಿಶ್ವ ಕಂಡ ಶ್ರೇಷ್ಠ ಸಂತರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಒಬ್ಬರು. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ. ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ ಎನ್ನುವ ಅವರ ಪ್ರೇರಣೆಗಳು ತತ್ವ ಇಂದಿಗೂ ಪ್ರಸ್ತುತ. ಅವರಿಂದ ಪ್ರೇರಣೆಗೊಂಡು ಸಮಾಜಕ್ಕೆ ಏನಾದರೂ ನಮ್ಮಿಂದ ಜೊತೆಗೆ ನನ್ನಿಂದ ನೀಡಬೇಕು ಎನ್ನುವ ಸದುದ್ದೇಶದಿಂದ ಚಿರುಗುರೊಡೆದು ಇಂದು ಹೆಮ್ಮಾರವಾದುದು ಯುವವಾಹಿನಿ ಎನ್ನುವ ಸಂಘಟನೆ. ವಿದ್ಯೆ ಉದ್ಯೋಗ ಸಂಪರ್ಕ ಎನ್ನುವ ಧ್ಯೇಯವನ್ನಿಟ್ಟುಗೊಂಡು ಹುಟ್ಟಿದ ಸಂಘಟನೆಯಾಗಿ ಯುವವಾಹಿನಿ ಜನ್ಮ ತಾಳಿತು. ಹಲವು ಘಟಕಗಳ ಜೊತೆಗೂಡಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡಿ ವಿಶೇಷವಾಗಿ
ಗುರುತಿಸಿಕೊಂಡಿದೆ. ಈ ಸಂಘಟನೆಯ ಹೆಮ್ಮರದ ಕೊಂಬೆಗಳಾಗಿ ಯಡ್ತಾಡಿಯಲ್ಲಿ ಘಟಕದ ಭಾಗವಾಗಿ ಹತ್ತು ವರ್ಷಗಳ ಹಿಂದೆ ಯುವಾಹಿನಿ (ರಿ) ಯಡ್ತಾಡಿ ಘಟಕ ಮುನ್ನೆಲೆಗೆ ಬಂದಿತು. ಸಮಾಜಮುಖಿ ಚಿಂತನೆಗೆ ಮೊದಲ ಆದ್ಯತೆ ಯುವವಾಹಿನಿ ಯಡ್ತಾಡಿ ಘಟಕ ಆರಂಭವಾದ ದಿನದಿಂದ ಒಂದಲ್ಲ ಒಂದು ಚಟುವಟಿಕೆ ಹೊಸ ಚಿಂತನೆಯೊಂದಿಗೆ ಹೆಜ್ಜೆಯನ್ನಿಡುತ್ತಿದೆ. ಮಕ್ಕಳನ್ನು ಗುರುಯಾಗಿಸಿಕೊಂಡು ಮಕ್ಕಳಲ್ಲಿನ ಸೂಪ್ತ ಪ್ರತಿಭೆ ಅನಾವರಣಗೊಂಡು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಇರಾದೆಯಲ್ಲಿ ಬೇಸಿಗೆ ಶಿಬಿರ ಆಯೋಜನೆ, ಐತಿಹಾಸಿಕ ಯಡ್ತಾಡಿ ಕಂಬಳದಲ್ಲಿ ಸ್ವಚ್ಛತೆಗೆ ಮಹತ್ವ ಸಾರುವ ನಿಟ್ಟಿನಲ್ಲಿ ಅಲ್ಲಲ್ಲಿ ಕಸದ ಬುಟ್ಟಿ ಇಟ್ಟು ಸ್ವಚ್ಛ ಕಂಬಳದತ್ತ ಒಂದು ಹೆಜ್ಜೆ, ಸ್ಮಶಾನದ ಸ್ವಚ್ಚತೆ, ಹೊಳೆಯ ನೀರನ್ನು ಕೃಷಿಗೆ ಉಪಯೋಗಿಸಲು ಡ್ಯಾಂಬ್‌ಗೆ ಕಟ್ಟೆ ಕಟ್ಟುವ ಕಾಯಕ, ಶಾಲೆಯಲ್ಲಿ ನಡೆಯುವ ಕಾರ್ಯದಲ್ಲಿ ಸಹಭಾಗಿತ್ವ ಹೀಗೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಯಡ್ತಾಡಿ ಪರಿಸರದಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆಯನ್ನಿಡುತ್ತಿದೆ.

ಯುವಜನತೆಗೆ ಹಳೆ ಸಂಪ್ರದಾಯದ ಅರಿವು: ಯುವ ಜನಾಂಗ ನಮ್ಮ ಭವ್ಯ ಭಾರತದ ಪ್ರಜೆಗಳು ಎನ್ನುವ ದೃಷ್ಟಿಯಿಂದ ನಮ್ಮ ಪೂರ್ವಜರು ಆಚರಣೆ ಆಚರಿಸಿ ಸಂಭ್ರಮಿಸದ ಹಳೆಯ ಆರೋಗ್ಯಕರ ತಿನಿಸುಗಳನ್ನು ಇಂದಿನ ಜನಾಂಗಕ್ಕೆ ತಲುಪಿಸುವ ಉದ್ದೇಶದಿಂದ ‘ಹಳೆ ಹಂಬ್ಲು’ ಎನ್ನುವ ಎನ್ನುವ ವಿನೂತನ ಕಾರ್ಯಕ್ರಮ ಆಯೋಜಿಸಿ 60 ಕ್ಕೂ ಹೆಚ್ಚಿನ ತಿಂಡಿ ತಿನಿಸುಗಳ ರುಚಿಯನ್ನು ಉಣಬಡಿಸಿದ ಹೆಗ್ಗಳಿಗೆಯಿದೆ. ಜೊತೆಗೆ ಹಳೆಯ ವಸ್ತುಗಳ ಸಂಗ್ರಹದ ಪ್ರದರ್ಶನ
ಮನಸೂರೆಗೊಂಡಿದೆ. ಸಂಘಟನೆ ಉದ್ದೇಶ ಸಮಾಜಕ್ಕೆ ನಾವೆನಾದರೂ ನೀಡಬೇಕು ಎನ್ನುವ ಅಭಿಲಾಷೆಯನ್ನು ಇಟ್ಟುಕೊಂಡು ಸ್ಥಾಪನೆಯಾಗಿ ಅದಕ್ಕೆ ಜೀವ ತುಂಬಿದ ಸಂಘಟನೆಯಾಗಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಅವರ ಪ್ರತಿಭೆಯ ದಿಬ್ಬಣಕ್ಕೆ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮ ಹಲವು ಆಯೋಜಿಸಕೊಂಡು ಬರುತ್ತಿದೆ.ಅಶಕ್ತರ ಕಣ್ಣೀರ ಧ್ವನಿಗೆ ಕಿವಿಯಾಗಿ ಹಲವು ನೆರವು ನೀಡುಲಾಗುತ್ತಿದೆ. ರಕ್ತದಾನದಂತ ಸೇವೆಗೂ ಸದಸ್ಯರು ಜೊತೆಯಾಗುತ್ತಿದ್ದಾರೆ.

ದಶಮ ಸಂಭ್ರಮ: ಪ್ರಸ್ತುತ ದಶಮ ಸಂಭ್ರಮದಲ್ಲಿರುವ ಯುವವಾಹಿನಿ(ರಿ) ಯಡ್ತಾಡಿ ಘಟಕ, ರಮೇಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಹಲವಾರು ಜನಪರ ಕೆಲಸಗಳನ್ನು ಮಾಡಿ ಯಶಸ್ವಿಯಾಗಿದೆ. ಅಶಕ್ತರಿಗೆ ಸಹಾಯಧನ ವಿತರಣೆ, ರಕ್ತದಾನ ಶಿಬಿರ, ವ್ಯಕ್ತಿತ್ವ ವಿಕಸನ, ಸುರಕ್ಷಿತ ಚಾಲನೆ, ಮಾರಕ ವ್ಯಸನಗಳ ಕುರಿತು ಮಾಹಿತಿ, ಸಾಧಕ ಹಿರಿಯರ ಗುರುತಿಸುವಿಕೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮತದಾನ ಜಾಗೃತಿ ಮಾತ್ರವಲ್ಲದೇ ಅಂತರ್ ಘಟಕದ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿ ಮಾದರಿ ಘಟಕವಾಗಿ ಮೂಡಿ ಬಂದಿದೆ. ಸಂಘಟನೆ ಎಷ್ಟು ವರುಷಗಳಿಂದ ಸಮಾಜದಲ್ಲಿ ಇದೆ ಎನ್ನುವುದು ಮುಖ್ಯವಾಗಿದೆ ಸಮಾಜಕ್ಕೆ ಏನು ನೀಡಿದೆ ಎನ್ನುವುದು ಪ್ರತಿ ಸಂಘಟನೆ ಧ್ಯೇಯ ವಾಕ್ಯ ವಾಗಿರಬೇಕು ಈ ನಿಟ್ಟಿನಲ್ಲಿ ಯುವವಾಹಿನಿ ಯಡ್ತಾಡಿ ಘಟಕ ಸಮಾಜಮುಖಿ ಚಿಂತೆನೆ ಮೊದಲು ಪ್ರಾಮುಖ್ಯತೆ ನೀಡಿ ಗುರುತಿಸಿಕೊಂಡು. ಒಂದು ಸಮಾನಮನಸ್ಕರ ತಂಡ ಇನ್ನಷ್ಟು ನೂರಾರು ಕನಸನ್ನು ಇಟ್ಟುಕೊಂಡು ನನಸಿನ ಗಳಿಗೆಗೆ ಕಾಯುತ್ತಾ ಇದೆ. ಹತ್ತು ಹೆಜ್ಜೆಯ ಸಂವತ್ಸರವ ಸವೆದರು ನಡೆದ ಬಂದ ದಾರಿ ಬೆರಗು ಮೂಡಿಸುವಂತಿದೆ. ಇನ್ನಷ್ಟು ಕೆಲಸ ನಿಸ್ವಾರ್ಥದ ಮೂಲಕ ಸಮಾಜಕ್ಕೆ ಮಾದರಿಯಾಗಲಿ ಅನ್ನುವ ಅಭಿಲಾಷೆ ನಮ್ಮದು.

ಯುವವಾಹಿನಿ (ರಿ.) ಯಡ್ತಾಡಿ ಘಟಕ ಅಧ್ಯಕ್ಷ ರಮೇಶ್ ಪೂಜಾರಿ

ಸಂಘಟನೆ ಎಂಬುವುದು ನಿಂತ ನೀರಾಗದೇ ಏನಾದರೂ ಸಮಾಜಮುಖಿ ಚಿಂತನೆಗಳ ಮೂಲಕ ಸಮಾಜಕ್ಕೆ ನೆರವಾಗುವ ಸಂಕಲ್ಪ ನಮ್ಮದಾಗಬೇಕು. ಸಮಾನ ಮನಸ್ಕಾರ ನಮ್ಮ ಯುವವಾಹಿನಿ ತಂಡ ಹಲವಾರು ಕಾರ್ಯಕ್ರಮಗಳ ಮೂಲಕ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಚಟುವಟಿಕೆಯಿಂದ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟೂ ವಿಶಿಷ್ಠ ಕಾರ್ಯಕ್ರಮಗಳ ಜನರನ್ನು ತಲುಪುವ ಕೆಲಸ ಮಾಡುವ ಗುರಿ ಹೊಂದಿದ್ದೇವೆ ಎಂದು ಯುವವಾಹಿನಿ (ರಿ.) ಯಡ್ತಾಡಿ ಘಟಕ ಅಧ್ಯಕ್ಷರಾದ ರಮೇಶ್ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

-ಪ್ರಶಾಂತ್ ಸೂರ್ಯ, ಸಾಯ್ಬ್ರಕಟ್ಟೆ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!