Saturday, January 18, 2025
Saturday, January 18, 2025

ವರ್ಣಮಯ ವ್ಯಕ್ತಿತ್ವದ ಮಾಜಿ ಮುಖ್ಯಮಂತ್ರಿ ಸೇೂಮನಹಳ್ಳಿ ಮಲ್ಲಯ್ಯ ಕೃಷ್ಣ

ವರ್ಣಮಯ ವ್ಯಕ್ತಿತ್ವದ ಮಾಜಿ ಮುಖ್ಯಮಂತ್ರಿ ಸೇೂಮನಹಳ್ಳಿ ಮಲ್ಲಯ್ಯ ಕೃಷ್ಣ

Date:

ರ್ನಾಟಕ ರಾಜ್ಯ ಇದುವರೆಗೆ ಹಲವು ಮುಖ್ಯಮಂತ್ರಿಗಳನ್ನು ಕಂಡಿದೆ ಮಾತ್ರವಲ್ಲ ಕಾಣುತ್ತಲೇ ಇದೆ. ಆದರೆ ರಾಜ್ಯದ ಹದಿನಾರನೇ ಮುಖ್ಯಮಂತ್ರಿಯಾಗಿ ಪೀಠವನ್ನು ಅಲಂಕರಿಸಿದ ಎಸ್.ಎಂ.ಕೃಷ್ಣರ ವ್ಯಕ್ತಿತ್ವವೇ ಭಿನ್ನುವಾದದ್ದು. ಇವರಿಂದು ಅಜಾತಶತ್ರುವಾಗಿ ಸರ್ವರ ಪ್ರೀತಿ ಗೌರವಗಳಿಗೆ ಪಾತ್ರರಾಗಿ ನಮ್ಮಿಂದ ದೂರವಾಗಿ ಬಿಟ್ಟರು. ಕರ್ನಾಟಕದ ಯಾವುದೇ ರಾಜಕಾರಣಿಗಳು ಕಾಣದ ರಾಜಕೀಯ ಸ್ಥಾನ ಮಾನಗಳನ್ನು ಸ್ವೀಕರಿಸಿ ಅದನ್ನು ಅಷ್ಟೇ ಗತ್ತುಗಾರಿಕೆಯಿಂದ ನಡೆಸಿಕೊಂಡು ಹೇೂದ ಹೆಗ್ಗಳಿಕೆಗೆ ಎಸ್.ಎಂ.ಕೃಷ್ಣ ಪಾತ್ರರಾಗಿದ್ದಾರೆ ಅನ್ನುವುದು ಅಷ್ಟೇ ಸತ್ಯ.

ಶಾಸಕರಾಗಿ ಸಂಸದರಾಗಿ ಮುಖ್ಯಮಂತ್ರಿಗಳಾಗಿ ರಾಜ್ಯಪಾಲರಾಗಿ ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗಿ ಬಹು ಅಲಂಕೃತವಾದ ಸ್ಥಾನಮಾನವನ್ನು ಪಡೆದು ಅದನ್ನು ಅಷ್ಟೇ ಗೌರವದಿಂದ ನಡೆಸಿಕೊಂಡ ಕೀರ್ತಿ ಎಸ್.ಎಂ.ಕೃಷ್ಣರಿಗೆ ಸಂದಾಯವಾಗಿದೆ. ನಮ್ಮೆಲ್ಲರ ಹೆಮ್ಮೆಯ ಎಸ್.ಎಂ.ಕೃಷ್ಣರದ್ದು ವರ್ಣಮಯ ವ್ಯಕ್ತಿತ್ವ. ಸಮಯ ಸಂದರ್ಭಕ್ಕೆ ತಕ್ಕ ಉಡುಗೆ ತೊಡುಗೆ, ಸೂಟ್ ಬೂಟ್ ಧರಿಸುತ್ತಿದ್ದ ಕೃಷ್ಣರು ಬಹು ಸುಂದರವಾದ ವ್ಯಕ್ತಿತ್ವ. ಕೇಶವಿನ್ಯಾಸವೂ ಅಷ್ಟೇ. ಅವರದ್ದು ತಲೆ ಬೇೂಳಾದರೂ ಅದನ್ನು ಅತ್ಯಂತ ಸ್ವಾಭಾವಿಕವಾದ ಕೇಶಧಾರಿಣಿಯಾಗಿಯೇ ನಮಗೆ ಕಂಡವರು. ಯಾರು ಕೂಡ ಅದನ್ನು ಕೃತಕ ಕೇಶವೆಂದು ಭಾವಿಸುವ ಹಾಗಿರಲಿಲ್ಲ. ಇವರು ವಿದೇಶಾಂಗ ಸಚಿವರಾಗಿದ್ದಾಗಲು ಅಷ್ಟೇ ವಿದೇಶಿ ಮಾತುಕತೆಯಲ್ಲೂ ಅಷ್ಟೇ ಘನ ಗಂಭೀರವಾದ ರೀತಿಯಲ್ಲಿ ಇಂಗ್ಲಿಷ್ ವಾಕ್ಚಾತುರ್ಯದಿಂದ ಮನಗೆದ್ದ ವಿದೇಶಾಂಗ ಸಚಿವರಾಗಿದ್ದ ಹೆಗ್ಗಳಿಕೆಗೆ ಅವರಿಗೆ.

ಮುಖ್ಯಮಂತ್ರಿಗಳಿದ್ದಾಗ ಕರ್ನಾಟಕ ರಾಜ್ಯವನ್ನು ಸಿಂಗಾಪುರವನ್ನಾಗಿ ಮಾಡಬೇಕೆಂಬ ಕನಸು ಕಂಡವರು. ಬೆಂಗಳೂರಿನಲ್ಲಿ ಸ್ವಾಫ್ಟವೇರ್ ಕಂಪನಿಗಳು ಬರಲು ಅದಕ್ಕೆ ಬೇಕಾಗುವ ಪೂರಕವಾದ ಪರಿಸರ ಸೃಷ್ಟಿಸಿಕೊಡುವಲ್ಲಿ ಎಸ್.ಎಂ. ಕೃಷ್ಣ ಪಾತ್ರ ಇಂದಿಗೂ ಜನ ನೆನಪಿಸಿಕೊಳ್ಳುತ್ತಾರೆ. ಬಹುಮುಖ್ಯವಾಗಿ ಅವರು ಎದುರಿಸಿದ ಸಮಸ್ಯೆಗಳಲ್ಲಿ ಡಾ.ರಾಜಕುಮಾರ್ ರನ್ನು ವೀರಪ್ಪನ್ ಮುಷ್ಟಿಯಿಂದ ಬಿಡುಗಡೆ ಮಾಡಿದ ತಂತ್ರಗಾರಿಕೆ ನಿಜಕ್ಕೂ ಕೃಷ್ಣ ಅವರ ಚಾಣಾಕ್ಷತನಕ್ಕೆ ಉತ್ತಮ ಉದಾಹರಣೆಯಾಗಿ ನಿಂತಿದೆ.
ಇಂದು ಎಸ್.ಎಂ.ಕೃಷ್ಣರು ನಮ್ಮ ಮುಂದೆ ಇಲ್ಲ, ಆದರೆ ಅವರ ರಾಜಕೀಯ ಮುತ್ಸದಿತನ ಅವರನ್ನು ರಾಜಕೀಯ ಮೀರಿದ ನಾಯಕನ ಸ್ಥಾನಕ್ಕೆ ಏರಿಸಿದೆ ಮಾತ್ರವಲ್ಲ ಇಂದು ಎಸ್ ಎಂ.ಕೃಷ್ಣರು ಲೇೂಕಾರ್ಪಣೆಗೊಂಡ ಜನನಾಯಕರಾಗಿ ತಮ್ಮ ವ್ಯಕ್ತಿತ್ವದ ಮುದ್ರೆಯನ್ನು ಒತ್ತಿ ನಮ್ಮಿಂದ ದೂರವಾಗಿದ್ದಾರೆ ಅನ್ನುವ ಮೇರು ವ್ಯಕ್ತಿತ್ವದ ಪರಿಚಯ. ಈಗ ನಮಗೆ ಅರಿವಾಗುತ್ತಿದೆ.

ಬಹು ಹಿಂದೆ ಎಸ್.ಎಂ.ಕೃಷ್ಣರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಮಾದೇವಿಯವರು ರಾಜ್ಯದ ರಾಜ್ಯಪಾಲರಾಗಿದ್ದರು. ಈ ಸಂದರ್ಭದಲ್ಲಿ ಧಾರವಾಡ ಕೃಷಿ ವಿ.ವಿ. ಕುಲಪತಿಗಳ ನೇಮಕಾತಿ ಸಂದರ್ಭದಲ್ಲಿ ಇವರಿಬ್ಬರ ನಡುವೆ ನಡೆದ ಜಾಟಾಪಟಿ ಇಂದಿಗೂ ನಮಗೆ ನೆನಪಿಗೆ ಬರುತ್ತಿದೆ. ಎಸ್.ಎಂ.ಕೃಷ್ಣ ಎಂದಿಗೂ ಕಟುವಾದ ಭಾಷೆಯಲ್ಲಿ ಮಾತನಾಡಿದವರಲ್ಕ. ಒಂದು ಅರ್ಥದಲ್ಲಿ ಅವರು ತುಂಬಾ ಮಿತಭಾಷಿಯೂ ಹೌದು. ಅತ್ಯಂತ ಸುಸಂಸ್ಕೃತವಾದ ನಡೆ ನುಡಿಯಲ್ಲಿ ಎದುರಾಳಿಯನ್ನು ತಣ್ಣಗಾಗಿಸುವ ವ್ಯಕ್ತಿತ್ವ ಅವರದ್ದು ಅನ್ನುವುದಕ್ಕೆ ಈ ಸಂದರ್ಭದಲ್ಲಿ ರಾಜ್ಯಪಾಲೆ ರಮಾದೇವಿಯರನ್ನು ಸಮಾಧಾನಿಸಿದ ರೀತಿ ಇಂದಿಗೂ ಜೀವಂತವಾದ ನಿದರ್ಶನವಾಗಿ ನಿಲ್ಲುತ್ತದೆ. ಎಸ್.ಎಂ.ಕೃಷ್ಣರಿಗೆ ನಿಜಕ್ಕೂ ನಾವು ಸಲ್ಲಿಸಬೇಕಾದ ಗೌರವದ ಸಂತಾಪವೆಂದರೆ ಸರಕಾರಿ ಕಛೇರಿಗಳಿಗೆ ಶಾಲಾ ಕಾಲೇಜುಗಳಿಗೆ ಒಂದು ದಿನದ ರಜೆ ಘೇೂಷಿಸುವುದರಿಂದ ಮಾತ್ರ ಅಲ್ಲ. ಅವರ ಸಾಧನೆ ಚಿಂತನ ವ್ಯಕ್ತಿತ್ವವನ್ನು ನಮ್ಮ ಯುವ ಪೀಳಿಗೆಗೆ ಪರಿಚಯಿಸುವುದರ ಮೂಲಕ ನಡೆಸಬೇಕು ಅನ್ನುವುದು ನಮ್ಮೆಲ್ಲರ ಆಶಯವೂ ಹೌದು.

ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಗತ್ಯ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮಂಗಳೂರು, ಜ.17: ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಇರಬೇಕು ಎನ್ನುವುದು ನನ್ನ...

ಕೋಟೆಕಾರ್ ಉಳ್ಳಾಲದ ಸಹಕಾರಿ ಬ್ಯಾಂಕ್ ದರೋಡೆ- ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ತುರ್ತು ಸಭೆ

ಮಂಗಳೂರು, ಜ.17: ಕೋಟೆಕಾರ್ ಉಳ್ಳಾಲದ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ...

ಸಾಲಿಗ್ರಾಮ: ಯುವ ವೇದಿಕೆ 8ನೇ ವಾರ್ಷಿಕೋತ್ಸವ

ಕೋಟ, ಜ.17: ಯುವ ವೇದಿಕೆಯ ಸಮಾಜಮುಖಿ ಕಾರ್ಯಗಳು ಅತ್ಯಂತ ಪ್ರಶಂಸನೀಯ ಎಂದು...

ದೈಹಿಕ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವೀಲ್ ಚೇರ್ ಸೌಲಭ್ಯ: ಅರ್ಜಿ ಆಹ್ವಾನ

ಉಡುಪಿ, ಜ.17: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ...
error: Content is protected !!