Sunday, November 24, 2024
Sunday, November 24, 2024

ಮತದಾನದ ಪ್ರಮಾಣ ಹೆಚ್ಚಿಸಲು ಮಾಡಬೇಕಾದ ಸರಳ ವಿಧಾನ

ಮತದಾನದ ಪ್ರಮಾಣ ಹೆಚ್ಚಿಸಲು ಮಾಡಬೇಕಾದ ಸರಳ ವಿಧಾನ

Date:

ಪ್ರತಿ ಬಾರಿ ಚುನಾವಣೆ ಮುಗಿದ ಅನಂತರ ಬಹುಚರ್ಚೆ ಮಾಡುವ ವಿಷಯವೆಂದರೆ ಮತದಾನದ ಪ್ರಮಾಣ ಯಾಕೆ ಕಡಿಮೆಯಾಯಿತು ಅನ್ನುವುದು. ಇದಕ್ಕೆ ಹಲವು ಕಾರಣಗಳಿವೆ.

1. ಬಹು ಮುಖ್ಯವಾಗಿನಮ್ಮ ಮತದಾರರ ಪಟ್ಟಿ ನಿಖರವಾಗಿಲ್ಲ ಅನ್ನುವುದನ್ನು ನಾವು ಒಪ್ಪಿಕೊಳ್ಳಲೇ ಬೇಕು. ಅದೆಷ್ಟೋ ಮಂದಿ ಸ್ಥಳ ವಿಳಾಸ ಬದಲಾಯಿಸಿರಬಹುದು, ನಿಧನರಾಗಿರಬಹುದು, ಕೆಲವರ ಹೆಸರು ಎರಡು ಕಡೆ ಕಾಣಿಸಿರುವುದು ಇದೆ. ಅಂದರೆ ಮತದಾರರ ಪಟ್ಟಿಯನ್ನು ಅಪ್ ಡೇಟ್ ಮಾಡುವ ವ್ಯವಸ್ಥೆ ನಮ್ಮಿಲಿಲ್ಲ. ಅಂದರೆ ನಮ್ಮ ಮತದಾರರ ಪಟ್ಟಿ ನಿಖರತೆಯಿಂದ ಕೂಡಿಲ್ಲ ಅನ್ನುವುದು ಸ್ವಷ್ಟ.

2. ನಮ್ಮ ಸರ್ಕಾರ ಆಧಾರ್ ಕಾರ್ಡಿಗೆ ಕೊಟ್ಟ ಪ್ರಾಮುಖ್ಯತೆಯನ್ನು ವೇೂಟರ್ ಕಾರ್ಡ್ ಅಂದರೆ ಎಪಿಕ್ ಕಾರ್ಡಿಗೆ ಕೊಟ್ಟಿಲ್ಲ. ಎಲ್ಲಿಯೂ ಎಪಿಕ್ ಕಾರ್ಡನ್ನು ಒಂದು ಕಡ್ಡಾಯ ದಾಖಲೆಯ ಪ್ರಮಾಣವಾಗಿ ಪರಿಗಣಿಸಿಲ್ಲ. ಮತ ಚಲಾಯಿಸುವಾಗ ಕೂಡಾ ಎಪಿಕ್ ಕಾರ್ಡು ಇಲ್ಲದಿದ್ದರೂ ಸಹ ಇನ್ನಿತರ ದಾಖಲಾತಿ ನೀಡಿ ಮತ ಚಲಾಯಿಸುವ ಅವಕಾಶವನ್ನು ನೀಡಿದೆ. ಇದು ಚುನಾವಣಾ ಆಯೇೂಗದ ನಿರ್ಲಕ್ಷತನವೂ ಹೌದು. ಅವರಿಗೂ ಅಷ್ಟೇ ಮತದಾನ ಮುಗಿದರೆ ಸಾಕಪ್ಪ ಅನ್ನುವ ಮನಸ್ಥಿತಿ.

3. ಒಂದು ವೇಳೆ ಯಾವುದೇ ಮತದಾರ ತನ್ನ ಎಪಿಕ್ ಕಾರ್ಡನ್ನು ಕನಿಷ್ಠ ಪಕ್ಷ ಎರಡು ಬಾರಿ ತನ್ನ ಮತದಾನಕ್ಕೆ ಬಳಸದೇ ಹೇೂದರೆ ಅದನ್ನು ಕ್ಯಾನ್ಸಲ್ ಮಾಡುವ ಅಧಿಕಾರ ಚುನಾವಣಾ ಆಯೇೂಗಕ್ಕೆ ನೀಡಬೇಕು.

4. ಇನ್ನೂ ಒಂದು ವಿಶೇಷ ಅಂಶವೆಂದರೆ ನಮ್ಮ ಚುನಾವಣಾ ಆಯೇೂಗಕ್ಕೆ ತನ್ನದೇ ಸಿಬ್ಬಂದಿಗಳಿಲ್ಲ. ಬೇರೆ ಇಲಾಖೆಗಳ ಎರವಲು ಸೇವೆಯಿಂದಲೇ ಚುನಾವಣೆ ನಡೆಸಬೇಕಾದ ಪರಿಸ್ಥಿತಿ. ಇದು ಕೂಡಾ ವಿವಿಧ ಇಲಾಖೆಗಳು ಚುನಾವಣೆ ಶುರುವಾದಾಗ ಚುರುಕುಗೊಳ್ಳಬೇಕಾದ ಸ್ಥಿತಿ.

5. ಇಂದು ವಿದ್ಯಾವಂತ ಮತದಾರರು ಖಂಡಿತವಾಗಿಯೂ ಒಂದೇ ಪ್ರದೇಶದಲ್ಲಿ ನೆಲೆ ನಿಂತಿರುವುದಿಲ್ಲ. ಇಂತಹ ಮತದಾರರ ಹೆಸರು ಅವರ ಊರಿನಲ್ಲಿ ಖಂಡಿತವಾಗಿಯೂ ದಾಖಲೆಯಾಗಿರುತ್ತದೆ. ಆದರೆ ಇವರು ಬೇರೆ ರಾಜ್ಯ, ದೇಶದಲ್ಲಿ ಉದ್ಯೋಗ ನಿಮ್ಮಿತ ನೆಲ ನಿಂತಿರುತ್ತಾರೆ. ಹಾಗಾಗಿ ಇಂತವರಿಗೆ ಆನ್‌ಲೈನ್ ವೇೂಟಿಂಗ್ ಸಿಸ್ಟಮ್‌ ಯಾಕೆ ಅನುಷ್ಠಾನ ಮಾಡಬಾರದು? ಹಣಕಾಸು ವ್ಯವಹಾರಗಳನ್ನು ಅತ್ಯಂತ ವಿಶ್ವಾಸ ಗೌಪ್ಯತೆಯಿಂದ ರವಾನಿಸುವ ವ್ಯವಸ್ಥೆ ನಮ್ಮಲಿದೆ. ಹಾಗೆನ್ನುವಾಗ ಮತದಾನಕ್ಕೆ ಈ ಸಿಸ್ಟಮ್‌ ತರಲು ಚುನಾವಣಾ ಆಯೇೂಗ ಯಾಕೆ ಗಮನ ಹರಿಸಬಾರದು.?

6. ಬೆಂಗಳೂರಿನಲ್ಲಿ ನೊಂದಾಯಿಸಿಕೊಂಡಿರುವ ಮತದಾರ ಉದ್ಯೋಗಿಗಳು ಬೆಂಗಳೂರಿನಲ್ಲಿಯೇ ಮತಗಟ್ಟೆ ಇದ್ದರೂ ಕೂಡಾ ಮತ ಚಲಾಯಿಸಲು ಉದಾಸೀನ ತೇೂರಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಲ್ಲಬೇಕಲ್ಲ ಅನ್ನುವ ಮನಸ್ಥಿತಿ. ಅಂದರೆ ಇಲ್ಲಿ ಅವರಿಗೆ ಉದ್ಯೋಗ ನೀಡಿದ ಸಂಸ್ಥೆಗಳು ವೇತನ ಸಹಿತ ರಜೆ ನೀಡಿದರೆ ಸಾಲದು ಅವರು ಮತದಾನ ಮಾಡಿದ ದಾಖಲಾತಿಯನ್ನು ತಮ್ಮ ಕಚೇರಿಗೆ ಕಡ್ಡಾಯವಾಗಿ ನೀಡಬೇಕು ಅನ್ನುವ ಅಂಶವನ್ನು ಸಂಸ್ಥೆಗಳು ರಜೆ ಕೊಡುವಾಗ ಸೇರಿಸಿ ವೇತನ ಕೊಡುವ ಅಂಶವನ್ನು ಸೇರಿಸಬೇಕು.

ಮಾತ್ರವಲ್ಲ ಚುನಾವಣಾ ಆಯೇೂಗ ಕೂಡಾ ಶುಕ್ರವಾರ ಚುನಾವಣೆ ನಡೆಸಿದರೆ ಇಂತಹ ಬೇಜವಾಬ್ದಾರಿ ನೌಕರರು ಈ ಮೂರು ದಿನಗಳ ರಜೆಯನ್ನು ಇನ್ನಿತರ ಕೆಲಸಗಳಿಗೆ ಬಳಸಿಕೊಳ್ಳುವ ಸಾಧ್ಯತೆಗಳು ಇದೆ. ಕಳೆದ ಬಾರಿ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಇದೇ ಕಾರಣಗೋಸ್ಕರ ವಾರದ ಮಧ್ಯದ ದಿನದಂದು ಚುನಾವಣೆ ನಡೆಸಿದ ಉದಾಹರಣೆ ನಮ್ಮ ಮುಂದಿದೆ.

ಅಂತೂ ಸರಿ ಸುಮಾರು ಶೇ 70ರಷ್ಟು ಮತದಾನ ನಡೆದಿದೆ ಅಂದರೆ ಸ್ವಲ್ಪ ಮಟ್ಟಿಗೆ ನಾವು ತೃಪ್ತಿ ಪಡಬಹುದಾದ ಮತದಾನ ಅನ್ನುವುದನ್ನು ಈ ಎಲ್ಲಾ ಇತಿ ಮಿತಿಗಳ ನಡುವೆ ನಾವು ಖುಷಿ ಪಡಲೇಬೇಕಾದ ಅಂಶ ಅನ್ನುವುದು ನನ್ನ ಅನಿಸಿಕೆ.

– ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...

ವಯನಾಡ್: ಪ್ರಿಯಾಂಕಾ ಗಾಂಧಿಗೆ ಐತಿಹಾಸಿಕ ಗೆಲುವು

ವಯನಾಡ್, ನ.23: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ...

ಉಪಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್- ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.23: ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಮಹಾರಾಷ್ಟ್ರದ ಗೆಲುವು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಗೆಲುವು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ನ.23: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವು ಉತ್ತಮ...
error: Content is protected !!