Monday, January 20, 2025
Monday, January 20, 2025

ಕಾಶ್ಮೀರಕ್ಕೆ ಹೋದವರು ನೋಡಲೇಬೇಕಾದ ಸ್ಥಳ ಸೇೂನ್ ಮಾರ್ಗ

ಕಾಶ್ಮೀರಕ್ಕೆ ಹೋದವರು ನೋಡಲೇಬೇಕಾದ ಸ್ಥಳ ಸೇೂನ್ ಮಾರ್ಗ

Date:

ಕಾಶ್ಮೀರಕ್ಕೆ ಹೇೂದವರು ನೇೂಡಲೇಬೇಕಾದ ಇನ್ನೊಂದು ಸ್ಥಳವೆಂದರೆ ಸೇೂನ್ ಮಾರ್ಗ.ಇದು ಶ್ರೀನಗರದಿಂದ ಸುಮಾರು 80 ಕಿ.ಮೀ.ದೂರದ ಗಂಧರ್ ಬಾಲ್ ಜಿಲ್ಲೆಯಲ್ಲಿದೆ. ಇದರ ವಿಶೇಷತೆ ಏನೆಂದರೆ ಕಡಿದಾದ ಪರ್ವತ ಶ್ರೇಣಿಯಲ್ಲಿ ಹಬ್ಬಿಕೊಂಡಿರುವ ಮರಗಳ ಸಾಲಿನಲ್ಲಿ ಹಿಮದ ಲೇಪನದಿಂದ ಮರಗಳು ಬೆಳ್ಳಿಯ ಝರಿ ಸೀರೆಯನ್ನು ತೊಟ್ಟು ನಿಂತಿರುವ ಸೌಂದರ್ಯದ ರೂಪದರ್ಶಿಯ ಹಾಗೆ ಗೋಚರಿಸುತ್ತವೆ. ಸೇೂನ್ ಮಾರ್ಗದ ಕೊನೆಯಲ್ಲಿ ಸುಮಾರು 6 ಕಿ.ಮಿ ದೂರದಷ್ಟು ಸುರಂಗ ಮಾರ್ಗದಲ್ಲಿ ಕ್ರಮಿಸುವುದೇ ಒಂದು ರೇೂಚಕ ಅನುಭವ. ಈ ಸುರಂಗ ಮಾರ್ಗ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡಿದ್ದು. ಇದನ್ನು ‘Z.Morh tunnel’ ಎಂದು ಹೆಸರಿಸಲಾಗಿದೆ. ಇಲ್ಲಿಂದ ಮುಂದೆ ಹಿಮ ಬೆಟ್ಟದ ಶ್ರೇಣಿ. ಅಲ್ಲಿ ಪ್ರವಾಸಿಗರ ಮನೇೂರಂಜನ ಆಟಗಳಿಗಾಗಿಯೇ ಸ್ಕೇಟಿಂಗ್‌, ಜಾರು ಬಂಡಿ ಆಟಗಳಿಗೂ ಅನುಕೂಲ ಮಾಡಿಕೊಡಲಾಗಿದೆ. ಇಲ್ಲಿಂದ ಕೆಲವೇ ದೂರದಲ್ಲಿ ಕಾಣಬಹುದಾದ ಬಹು ಚಿರಪರಿಚಿತ ಪ್ರದೇಶವೆಂದರೆ ಕಾರ್ಗಿಲ್ ಮಿಲಿಟರಿ ನೆಲೆಯ ತಾಣ. ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಇದೇ ಸೇೂನ್ ಮಾರ್ಗವನ್ನು ನಮ್ಮ ಮಿಲಿಟರಿ ಕಾರ್ಯಚರಣೆಗಾಗಿ ಬಳಸಿಕೊಂಡಿದರಂತೆ. ಈ ತಾಣ ನಮ್ಮ ದೇಶ ರಕ್ಷಣೆ ಹೊತ್ತ ಸೈನಿಕರ ಸ್ಥೈರ್ಯ, ಧೈರ್ಯ ಬಲಿದಾನ ನೆನಪಿಸುತ್ತದೆ. ಸೇೂನ್ ಮಾರ್ಗವನ್ನು ಲಡಾಖ್ ನ ಹೆಬ್ಬಾಗಿಲು ಎಂದೇ ಗುರುತಿಸಲಾಗುತ್ತದೆ.

-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!