Monday, January 20, 2025
Monday, January 20, 2025

ವಿಶ್ವಮಾನ್ಯರಾದ ವಿಶ್ವಕರ್ಮ ಅರುಣ ಯೇೂಗಿರಾಜ್

ವಿಶ್ವಮಾನ್ಯರಾದ ವಿಶ್ವಕರ್ಮ ಅರುಣ ಯೇೂಗಿರಾಜ್

Date:

ಶಿಲೆ ಕಲೆ ಅಂದಾಗ ನಮಗೆ ನೆನಪಾಗುವುದು ನಮ್ಮ ಪ್ರಾಚೀನ ಶಿಲ್ಪಿ ಜಕಣಾಚಾರಿಗಳು. ಈಗ ಮತ್ತೊಮ್ಮೆ ಜಕಣಾಚಾರಿಗಳ ಹೆಸರನ್ನು ನೆನಪಿಸುವಂತಹ ಹೆಸರು ರಾರಾಜಿಸುತ್ತಿರುವುದು ನಮ್ಮ ಕನ್ನಡ ನಾಡಿನ ಶಿಲ್ಪಿ ಅರುಣ ಯೇೂಗಿರಾಜ್ ಅಂದರೂ ತಪ್ಪಾಗಲಾರದು. ಅಯೇೂದ್ಯದಲ್ಲಿ ಶ್ರೀರಾಮಚಂದ್ರ ನೆಲೆನಿಂತ ಮೇಲಂತೂ ಯೇೂಗಿರಾಜ್ ರ ಹೆಸರು ಜಗದಗಲಕ್ಕೆ ಪಸರಿಸಿಬಿಟ್ಟಿದೆ. ಅವರ ಕೀರ್ತಿ ಉತ್ತುಂಗಕ್ಕೆ ಏರಿದಾಗಲೂ ಕೂಡ ಅತ್ಯಂತ ಭಕ್ತಿ ವಿನಯಪೂರ್ವಕವಾಗಿ ತಮ್ಮ ಕಲಾ ಪ್ರತಿಭೆಯನ್ನು ಅಭಿವ್ಯಕ್ತಿಪಡಿಸಿರುವುದು ಅವರ ವ್ಯಕ್ತಿತ್ವಕ್ಕೆ ‘ಚಿನ್ನಕ್ಕೆ ಪರಿಮಳ ಬಂದಂತಾಗಿದೆ’. ಸಾಧಾರಣವಾಗಿ ನಾವು ಕಲಾಕರರನ್ನು ಅವರ ಕೆಲಸ ಮುಗಿದ ಅನಂತರ ಗುರುತಿಸುವುದು ತೀರ ಅಪರೂಪ. ಅಂದು ಇಂದು ಕೂಡಾ ಅದೆಷ್ಟೋ ದೇವಾಲಯಗಳಲ್ಲಿ ಪ್ರತಿಮೆಗಳನ್ನು ರೂಪಿಸಿ ಕೊಟ್ಟವರು ಸಾಕಷ್ಟು ಕಲಾಪುರುಷರಿದ್ದಾರೆ. ನಾವು ಯಾರು ಕೂಡಾ ಆ ಕಲಾ ಪುರುಷರ ಹೆಸರನ್ನು ಕೇಳುವ ಸೌಜನ್ಯ ಕೂಡಾ ತೇೂರಿಸುವುದಿಲ್ಲ.

ದೇವಾಲಯಗಳಲ್ಲಿ ಬಿಂಬ ಸ್ಥಾಪನೆಯ ಅನಂತರ ಕಲಾಗಾರರಿಗೆ ಶಾಲು ಹೊದಿಸಿ ಗುರುತಿಸುವುದೇ ಅತೀ ದೊಡ್ಡ ಸಂಮಾನವೆಂದು ಭಾವಿಸಿಕೊಂಡು ಬಂದಿದ್ದೇವೆ. ಆದರೆ ಅಯೇೂಧ್ಯ ಶ್ರೀರಾಮಚಂದ್ರನ ಪೀಠಾವರೇೂಹಣ ಸಂದರ್ಭದಲ್ಲಿ ಮಾತ್ರ ಇದೊಂದು ಪವಾಡಸದ್ರಶ ಎಂಬಂತೆ ಶ್ರೀಬಾಲರಾಮನಿಗೆ ಕೃಷ್ಣ ಶಿಲೆಯಲ್ಲಿ ದೇವತಾ ತೇಜಸ್ಸು ತುಂಬಿದ ಯೇೂಗಿರಾಜ್ ನಿಜಕ್ಕೂ ಶ್ರೀರಾಮಚಂದ್ರನ ದಿವ್ಯ ಮೂರ್ತಿಯನ್ನು ತಮ್ಮ ಹೃದಯದಲ್ಲಿ ತುಂಬಿಸಿಕೊಂಡಿದ್ದರಿಂದಲೇ ಅವರ ಪರಿಶ್ರಮ ಸಾರ್ಥಕವಾಯಿತು ಅನ್ನುವ ಸತ್ಯ ಅವರ ಮಾತಿನಲ್ಲಿಯೇ ಸ್ಪುಟವಾಗಿ ಮೂಡಿಬಂದಿದೆ.

ಟಿ.ವಿ.ವಾಹಿನಿ ಸಂದರ್ಶಕಿಯೊಬ್ಬರು ಕೊನೆಯಲ್ಲಿ ಅರುಣ ಯೇೂಗಿರಾಜ್ ರಲ್ಲಿ ವಿನಂತಿಸಿಕೊಂಡ ಮಾತೆಂದರೆ ‘ಒಮ್ಮೆ ನಿಮ್ಮ ಕೈಯನ್ನು ನಾನು ಸ್ಪರ್ಶಿಸಬಹುದೇ? ಇದರ ಅರ್ಥ ಅಯೇೂಧ್ಯೆಯ ಭವ್ಯ ದಿವ್ಯ ನವ್ಯ ಮಂದಿರದಲ್ಲಿ ವಿರಾಜಮಾನರಾಗಿರುವ ಶ್ರೀರಾಮಚಂದ್ರನನ್ನು ಮುಟ್ಟಲು ಇನ್ನು ಸಾಧ್ಯವಿಲ್ಲ. ಆದರೆ ಆ ಮೂರ್ತಿಯನ್ನು ಸೃಷ್ಟಿಸಿ ರೂಪ ಕೊಡುವಾಗ ಕೈಯಲ್ಲಿ ಎತ್ತಿ ಮುದ್ದಾಡಿದ ನಿಮ್ಮ ಕರವನ್ನಾದರೂ ಮುಟ್ಟುವ ಸೌಭಾಗ್ಯ ನನ್ನದಾಗಲಿ ಅನ್ನುವ ನಿರೂಪಕಿಯ ಮಾತು ನಿಜಕ್ಕೂ ರೇೂಮಾಂಚನವಾಗಿತ್ತು. ಕಲೆಯೊಳಗೆ ಶಿಲೆಯೊಳಗೆ ದೇವತಾ ಶಕ್ತಿ ಇದೆಯಲ್ಲವೇ.

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ. ಉಡುಪಿ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!