Wednesday, January 22, 2025
Wednesday, January 22, 2025

ಸಭಾಧ್ಯಕ್ಷರ ಪೀಠದ ಮೇಲೆ ಕಾಗದ ಹರಿದು ಬಿಸಾಡುವುದು ಅಸಂಸದೀಯ ನಡೆ

ಸಭಾಧ್ಯಕ್ಷರ ಪೀಠದ ಮೇಲೆ ಕಾಗದ ಹರಿದು ಬಿಸಾಡುವುದು ಅಸಂಸದೀಯ ನಡೆ

Date:

ಶಾಸನ ಸಭೆಯಲ್ಲಿ ಸಭಾಧ್ಯಕ್ಷರದ್ದೇ ಸರ್ವಶ್ರೇಷ್ಠ ಸ್ಥಾನ. ಮಾತ್ರವಲ್ಲ, ಸದನದ ಒಳಗೆ ಅವರು ಮೂರು ‘ಡಿ’ ಗಳನ್ನು ಕಾಪಾಡಿಕೊಳ್ಳಬೇಕಾದದ್ದು ಅವರ ಆದ್ಯ ಕರ್ತವ್ಯವೂ ಹೌದು. ಮೂರು ‘ಡಿ’ಗಳೆಂದರೆ ‘ಡಿಸ್ಸಿಪ್ಲೀನ್’ ‘ಡಿಗ್ನೀಟಿ’ ಮತ್ತು ‘ಡಿಕೇೂರಮ್’ ಈ ಮೂರುಗಳನ್ನು ಕಾಪಾಡಿಕೊಂಡಾಗ ಮಾತ್ರ ಸದನದ ಒಳಗೆ ಆರೇೂಗ್ಯಪೂರ್ಣ ವಾದ ಸಂವಾದ ಚರ್ಚೆ ನಡೆಯಲು ಸಾಧ್ಯ. ಆ ಕಾರಣದಿಂದಲೇ ಸದನದ ಅಧ್ಯಕ್ಷರಿಗೆ ವಿಶೇಷ ಸ್ಥಾನಮಾನ ಅಧಿಕಾರ ನೀಡಿರುವುದು. ಸರ್ಕಾರ ಮತ್ತು ವಿಪಕ್ಷಗಳ ನಡುವೆ ಎಷ್ಟೇ ಗಂಭೀರವಾದ ವಿಚಾರಗಳಿರಬಹುದು ಅದನ್ನು ರಾಜಕೀಯ ಆಸ್ತ್ರವಾಗಿ ಸ್ಪೀಕರ್‌ನ್ನೆ ಅವಮಾನ ಮಾಡುವುದು ಸದಸ್ಯರ ಅಕ್ಷಮ್ಯ ಅಪರಾಧ. ಇಂತಹ ಸಂದರ್ಭದಲ್ಲಿ ಸ್ಪೀಕರ್‌ ರವರ ಸ್ಥಾನಮಾನ ಉಳಿಯಬೇಕಾದರೆ ಸ್ಪೀಕರ್‌ ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಬೇಕಾದದ್ದು ಅವರ ಅಧಿಕಾರ ಕೂಡ. ಈ ಮಾತು ಎಲ್ಲಾ ಪಕ್ಷಗಳಿಗೂ ಸರಿಸಮಾನವಾಗಿ ಅನ್ವಯಿಸುತ್ತದೆ.

ಸಭಾಧ್ಯಕ್ಷರು ಸದನಕ್ಕೆ ಪ್ರವೇಶ ಮಾಡುವಾಗ ಎಲ್ಲಾ ಸಚಿವರು ಸದಸ್ಯರು ಎದ್ದು ನಿಂತು ಗೌರವಿಸುವುದು ಎಲ್ಲರ ಸಭಾ ನಡಾವಳಿಯೂ ಹೌದು. ಸದನದಲ್ಲಿ ಮಾತನಾಡುವಾಗ ಸ್ಪೀಕರ್‌ ಸರ್ ಎಂದೇ ಗೌರವಿಸಿ ಮಾತನಾಡಬೇಕು ಅನ್ನುವುದನ್ನು ಸಂಸದೀಯ ಸಭ್ಯತೆಯು ಆಗಿದೆ. ಸ್ಪೀಕರ್‌ ನಿಂತಾಗ ಮಾತನಾಡುವ ಸದಸ್ಯರಾಗಲಿ ಸಚಿವರಾಗಲಿ ಅಲ್ಲಿಯೇ ಕುಳಿತುಕೊಳ್ಳಬೇಕು ಅನ್ನುವ ಸನ್ನಡತೆಯೂ ಇದೆ. ಆದರೆ ಈಗ ನಮ್ಮ ಸದನಗಳ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂದರೆ ಸ್ಪೀಕರ್‌ ನಿಂತರೆ ಸದಸ್ಯರು ಡೆಸ್ಕ್ ಹತ್ತಿ ನಿಲುವ ಮಟ್ಟಕ್ಕೆ ಬೆಳೆದಿದ್ದಾರೆ. ವಿಪಕ್ಷಗಳಿಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಹಲವಾರು ಅಸ್ತ್ರಗಳಿವೆ. ಪ್ರಶ್ನಾವಳಿ, ಸದನ ಮುಂದೂಡುವಿಕೆ, ಅವಿಶ್ವಾಸ ಗೊತ್ತುವಳಿ. ಸದನದ ಎದುರುಗಡೆ ಬಾವಿ ಇದೆ, ಅಲ್ಲಿಗೂ ಹಾರಬಹುದು. ಇಷ್ಟೆಲ್ಲಾ ದಾರಿಗಳಿರುವಾಗ ಸದನದ ಬಾವಿಯಲ್ಲಿ ನಿಂತು ಸ್ಪೀಕರ್‌ ಟೇಬಲ್ ಮುಖಕ್ಕೆ ಕಾಗದ ಹರಿದು ಬಿಸಾಡುವ ಶಾಸಕರುಗಳನ್ನು ನಾವು ಆಯ್ಕೆ ಮಾಡಿ ಕಳಿಸುತ್ತೇವೆ ಅಂದರೆ ಇದು ನಿಜಕ್ಕೂ ಪ್ರಜಾಪ್ರಭುತ್ವದ ಅವನತಿ ಎಂದೇ ಪರಿಗಣಿಸಬೇಕಾಗುತ್ತದೆ.

ಈ ಕಾರಣಕ್ಕಾಗಿಯೇ ಇರಬೇಕು ದೆಹಲಿಯ ನವ ಸಂಸತ್ತಿನ ಭವನದ ಒಳಗೆ ಬಾವಿಯನ್ನು ತುಂಬಾ ಆಳವಾಗಿ ತೇೂಡಿದ್ದಾರೆ. ಇದರ ಅರ್ಥ ಸ್ಪೀಕರ್‌ಗೆ ಅಷ್ಟಾದರು ರಕ್ಷಣೆ ಕೊಡಬಹುದು ಅನ್ನುವ ಯೇೂಚನೆ ಮೋದಿ ಅವರದ್ದು ಇರಬಹುದು. ಹಾಗಾಗಿ ನಮ್ಮ ರಾಜ್ಯದ ಸದನದ ಒಳಗೂ ಬಾವಿಯ ಜಾಗವನ್ನು ಇನ್ನಷ್ಟು ಆಳವಾಗಿ ತೇೂಡಿ ಸ್ಪೀಕರ್‌ ಆಸನದ ಸುತ್ತ ಬೇಲಿ ಹಾಕುವುದು ಉತ್ತಮ ಅನ್ನುವುದು ನನ್ನ ಅಭಿಪ್ರಾಯ. ಒಬ್ಬ ರಾಜಕೀಯಶಾಸ್ತ್ರ ಓದಿದ ವಿದ್ಯಾರ್ಥಿಯಾಗಿ ನಮ್ಮೆಲ್ಲ ಜನಪ್ರತಿನಿಧಿಗಳಲ್ಲಿ ನಾನು ಕೇಳುವುದು ಇಷ್ಟೇ, ಒಂದು ಕ್ಲಾಸ್ ನಲ್ಲಿ ವಿದ್ಯಾರ್ಥಿಗಳೇ ಶಿಕ್ಷಕನ ಮುಖಕ್ಕೆ ಪುಸ್ತಕ ಹರಿದು ಬಿಸಾಡಿದ್ದರೆ ಆ ಮೇಷ್ಟ್ರ ಪರಿಸ್ಥಿತಿ ಏನಾಗಬಹುದು ? ನೀವು ಒಬ್ಬ ಹೆತ್ತವರ ಸ್ಥಾನದಲ್ಲಿ ನಿಂತು ಯಾರನ್ನು ಬೆಂಬಲಿಸುತ್ತೀರಿ ಅನ್ನುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಿ ಅಷ್ಟೇ ಸಾಕು. ಅಂತೂ ಇಂದು ವಿಧಾನಸಭೆಯಲ್ಲಿ ನಡೆದ ಕದನ ಅತ್ಯಂತ ಕಟು ಮಾತನಿಂದ ಅಸಂಸದೀಯ ಬೆಳವಣಿಗೆ ಎಂದೇ ಅಭಿಪ್ರಾಯಿಸಬೇಕಾಗಿದೆ.

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಮೆರಿಕದಲ್ಲಿ H-1B ವೀಸಾ ಹೊಂದಿರುವವರ ಮಕ್ಕಳಿಗೆ ಹುಟ್ಟಿನಿಂದಲೇ ಪೌರತ್ವವಿಲ್ಲ: ಟ್ರಂಪ್ ಹೊಸ ಆದೇಶ

ನ್ಯೂಯಾರ್ಕ್, ಜ.22: ಅಮೆರಿಕದಲ್ಲಿ ನವಜಾತ ಶಿಶುವಿನ ಕನಿಷ್ಠ ಒಬ್ಬ ಪೋಷಕ ಅಮೆರಿಕನ್...

ಉಪ್ಪೂರು: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ತ್ಯಾಜ್ಯದ ರಾಶಿ; ಉಡುಪಿ ಜಿಲ್ಲೆಯ ಸ್ವಚ್ಛತೆಗೆ ಇದೊಂದು ದೊಡ್ಡ ಕಪ್ಪುಚುಕ್ಕೆ

ಉಪ್ಪೂರು, ಜ.21: ಒಂದೆಡೆ ದೇಶಾದ್ಯಂತ ಸ್ವಚ್ಛತೆಯ ಕಾಳಜಿಯ ಬಗ್ಗೆ ಸರಣಿ ಕಾರ್ಯಕ್ರಮಗಳು...

ಪಾಳೆಕಟ್ಟೆ: ನೂತನ ಬಸ್ಸು ತಂಗುದಾಣಕ್ಕೆ ಭೂಮಿ ಪೂಜೆ

ಕೊಡವೂರು, ಜ.21: ಕೊಡವೂರು ವಾರ್ಡಿನ ಪಾಳೆಕಟ್ಟೆಯಲ್ಲಿ ಬಸ್ಸು ತಂಗುದಾಣಕ್ಕೆ ನಗರಸಭಾ ಸದಸ್ಯರಾದ...

ಸಂಚಾರ ಪ್ರಜ್ಞೆಯು ಜೀವನದ ಭಾಗವಾಗಬೇಕು: ಮನೋಹರ್ ಹೆಚ್ ಕೆ

ಮಣಿಪಾಲ, ಜ.21: ಮಾಹೆಯ ಎಂಐಟಿ, ಎನ್‌ಎಸ್‌ಎಸ್ ಘಟಕಗಳು, ಉಡುಪಿ ಜಿಲ್ಲಾ ಪೊಲೀಸ್​...
error: Content is protected !!