Sunday, January 19, 2025
Sunday, January 19, 2025

ಸ್ಪೀಕರ್‌ ಆ ’ಸ್ಥಾನದ’ ಬಗ್ಗೆ ಒಂದಿಷ್ಟು ಜಿಜ್ಞಾಸೆ?

ಸ್ಪೀಕರ್‌ ಆ ’ಸ್ಥಾನದ’ ಬಗ್ಗೆ ಒಂದಿಷ್ಟು ಜಿಜ್ಞಾಸೆ?

Date:

ನಿನ್ನೆ ತಾನೇ ಕರ್ನಾಟಕ ವಿಧಾನ ಮಂಡಲದಲ್ಲಿ ಲೋಕಸಭಾಧ್ಯಕ್ಷರ ವಿಶೇಷ ಉಪನ್ಯಾಸದ ಬಗ್ಗೆ ಒಂದಿಷ್ಟು ಬರೆದಿದ್ದೆ. ಅದರಲ್ಲಿ ಕೂಡಾ ಒಂದು ವಿಷಯವನ್ನು ಸ್ವಷ್ಟವಾಗಿ ಹೇಳಿದ್ದೆ. ಸದನದ ಅಧ್ಯಕ್ಷತೆಯನ್ನು ಸಂಬಂಧಪಟ್ಟ ಸದನದ ಅಧ್ಯಕ್ಷರೇ ವಹಿಸಬೇಕು. ವಿಶೇಷ ಅತಿಥಿಯಾಗಿ ಬಂದವರಿಗೆ ಉಪನ್ಯಾಸ ಮಾಡಲು ಅವಕಾಶ ಕೊಡೋಣ ಜೊತೆಗೆ ಬೇರೊಂದು ಆಸನವನ್ನು ಏರ್ಪಡಿಸಬೇಕೆಂಬುವುದು ನನ್ನ ಲೇಖನದ ಆಶಯವಾಗಿತ್ತು. ಆದರೆ ಮುಖ್ಯ ಅತಿಥಿಯಾಗಿ ಅಭ್ಯಾಗತರಾದ ಲೋಕಸಭಾ ಸ್ಪೀಕರ್‌ ಆಸೆಂಬ್ಲಿ ಸ್ಪೀಕರ್‌ ರ ಆ ಸ್ಥಾನದ ಕುರ್ಚಿಯಲ್ಲಿ ಕೂತು ಸಭೆಯನ್ನು ನಡೆಸಿರುವುದು ಸದನದ ಘನತೆಗೆ ಚ್ಯುತಿ ಬಂದಿದೆ ಅನ್ನುವುದು ನನ್ನ ಖಚಿತ ಅಭಿಪ್ರಾಯ. ಇದು ಸದನದ ಶಿಷ್ಟಾಚಾರಕ್ಕೆ ಹೊಂದುವ ಆಸನದ ವ್ಯವಸ್ಥೆ ಅಲ್ಲ. (ಅದಕ್ಕಾಗಿ ಚಿತ್ರ ಲಗತ್ತೀಕರಿಸಿದ್ದೇನೆ)

ಇದಕ್ಕೆ ನಾನು ಕೊಡುವ ಕಾರಣಗಳೆಂದರೆ-

ಸದನದ ಅಧ್ಯಕ್ಷರು ಅಂದರೆ ಅವರು ಸದನದ ಸದಸ್ಯರಿಂದ ಚುನಾಯಿತರಾದ ಅಧ್ಯಕ್ಷರಾದ ಸಭೆಯ ಅಧ್ಯಕ್ಷತೆಯನ್ನು ಅವರೇ ವಹಿಸಬೇಕು. ಅವರ ಕುರ್ಚಿಯಲ್ಲಿ ಅವರೇ ಕುಳಿತುಕೊಳ್ಳಬೇಕು. ಇದು ಉತ್ತಮ ಶಿಷ್ಟಾಚಾರವೂ ಹೌದು. ಅದು ಲೋಕಸಭೆ ಇರಬಹುದು ರಾಜ್ಯ ಅಸೆಂಬ್ಲಿಯೇ ಇರಬಹುದು. ಅದರಲ್ಲಿ ದೊಡ್ಢದು ಚಿಕ್ಕದ್ದು ಅನ್ನುವ ಪ್ರಶ್ನೆಯೇ ಇಲ್ಲ. ಸರಕಾರದ ಕೆಲವೊಂದು ಕಾರ್ಯಕ್ರಮ ಮಾಡುವಾಗ ಕೆಲವೊಂದು ಪ್ರೊಟೊಕಾಲ್ ಅಥವಾ ಶಿಷ್ಟಾಚಾರ ಪಾಲಿಸುತ್ತೇವೆ. ಉದಾ: ಒಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಆಗುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳೇ ಮುಖ್ಯ ಅತಿಥಿಯಾಗಿ ಬಂದಾಗ ಕೂಡಾ ಸ್ಥಳೀಯ ಪಂಚಾಯತ್ ಅಧ್ಯಕ್ಷರೇ ಸಭೆಯ ಅಧ್ಯಕ್ಷತೆ ವಹಿಸಬೇಕು.

ಅಂದರೆ ಇದರ ಅರ್ಥ ಮುಖ್ಯಮಂತ್ರಿಗಳಿಗೆ ಅವಮಾನವೆಂದರ್ಥವಲ್ಲ. ಅದೇ ರೀತಿಯಲ್ಲಿ ಸದನದ ಒಳಗೆ ಸಭಾಧ್ಯಕ್ಷರೇ ಮೊದಲ ವ್ಯಕ್ತಿ. ಅವರ ನಿರ್ಧಾರವೇ ಅಂತಿಮ ಅನ್ನುವುದು ಸುಪ್ರೀಂ ಕೋರ್ಟು ನೀಡಿದ ತೀರ್ಪು ಕೂಡಾ. ಆದುದರಿಂದ ಸದನದ ಘನತೆಗೆ ಚ್ಯುತಿ ಬಾರದ ಹಾಗೆ ಇಂತಹ ಕಾರ್ಯಕ್ರಮಗಳನ್ನು ಸಂಯೋಜಿಸಬೇಕಾದದ್ದು ಸಭಾಧ್ಯಕ್ಷರ ಕಛೇರಿಯ ಹಿರಿಯ ಅಧಿಕಾರಿಗಳ ಕರ್ತವ್ಯ ಕೂಡಾ.

ಹಾಗಾದರೆ ರಾಷ್ಟ್ರಪತಿಗಳು / ರಾಜ್ಯಪಾಲರು ಅಂದಾಗ ಅಲ್ಲಿ ಒಂದು ಸಾಂವಿಧಾನಿಕವಾದ ಅಂಶವಿದೆ. ರಾಷ್ಟ್ರಪತಿಗಳು / ರಾಜ್ಯಪಾಲರು ಸಂಸತ್ತಿನ / ಅಸೆಂಬ್ಲಿಯ ಭಾಗವೇ ಆಗಿರುತ್ತೆ. ಉದಾ: ಸಂವಿಧಾನದಲ್ಲಿಯೆ ವ್ಯಾಖ್ಯಾನಿಸಿದಂತೆ “ಸಂಸತ್ತು ಅಂದರೆ ರಾಷ್ಟ್ರಪತಿಗಳು ಮತ್ತು ಎರಡೂ ಸದನಗಳ ಅಂಗ”. ಹಾಗೆನ್ನುವಾಗ ಸದನದ ಅಧ್ಯಕ್ಷತೆಯನ್ನು ಎಲ್ಲಾ ಸಂದರ್ಭದಲ್ಲಿ ಆಯಾಯ ಸದನದ ಅಧ್ಯಕ್ಷರೇ ವಹಿಸುವುದು ಉತ್ತಮ ಶಿಷ್ಟಾಚಾರ ಅನ್ನಿಸಿಕೊಳ್ಳುತ್ತದೆ.

ಈ ಕುರಿತಾಗಿ ನಮ್ಮ ಸಂವಿಧಾನದಲ್ಲಿ ಯಾವುದೇ ಉಲ್ಲೇಖವಿಲ್ಲ ಆದರೆ ಕೆಲವೊಂದು ಆರೋಗ್ಯಪೂರ್ಣವಾದ ನಡವಳಿಕೆಗಳನ್ನು ಪಾಲಿಸುವುದು ಸಂಸದೀಯ ಮೌಲ್ಯ ಹಿತದೃಷ್ಟಿಯಿಂದ ಅಗತ್ಯ ಅನ್ನುವುದು ನನ್ನ ಖಚಿತ ಅಭಿಪ್ರಾಯ.

ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!