Sunday, January 19, 2025
Sunday, January 19, 2025

‘ಕುದ್ರು ನೆಸ್ಟ್’ ದ್ವೀಪದಲ್ಲಿ ರಮೇಶ್ ಅರವಿಂದ್ ಯಕ್ಷಾವತಾರ

‘ಕುದ್ರು ನೆಸ್ಟ್’ ದ್ವೀಪದಲ್ಲಿ ರಮೇಶ್ ಅರವಿಂದ್ ಯಕ್ಷಾವತಾರ

Date:

ತ್ತೀಚೆಗೆ ಉಡುಪಿಯ ಕಾರ್ಯಕ್ರಮ ಒಂದಕ್ಕೆ ಅತಿಥಿಯಾಗಿ ಆಗಮಿಸಿದ್ದ ಜಗ ಮೆಚ್ಚಿದ ನಟ, ಸಂವೇದನಾಶೀಲ ನಿರ್ದೇಶಕ, ಸೃಜನಶೀಲ ಬರಹಗಾರ, ಸ್ಫೂರ್ತಿ ತುಂಬುವ ಭಾಷಣಕಾರ, ಸಾಧಕ, ನಿರೂಪಕ, ಬಹುಮುಖ ಪ್ರತಿಭೆಯ ರಮೇಶ್ ಅರವಿಂದ್ ಉಡುಪಿಯ ಖ್ಯಾತ ಮನೋವೈದ್ಯ ಡಾ. ವಿರೂಪಾಕ್ಷ ದೇವರುಮನೆಯವರೊಂದಿಗೆ ನನ್ನ ‘ಕುದ್ರು ನೆಸ್ಟ್’ ಹೋಮ್ ಸ್ಟೇಗೆ ಭೇಟಿ ನೀಡಿದ್ದರು.

ಪರಿಸರ, ನದಿ, ಮನೆ, ಕ್ರಿಯಾಶೀಲ ವಿನ್ಯಾಸವನ್ನು ಕಂಡು ಮೆಚ್ಚುಗೆ ಸೂಚಿಸಿದ್ದ ಅವರು ನನ್ನ ಛಾಯಾಚಿತ್ರಗಳನ್ನು ಕಂಡು ಬೆರಗು ವ್ಯಕ್ತಪಡಿಸಿ ತನಗೂ ಫೋಟೋ ಶೂಟ್ ಮಾಡ್ತೀರಾ ಎಂದು ಕೇಳಿದಾಗ ಆದ ಆನಂದಕ್ಕೆ ಅಂತ್ಯವೇ ಇರಲಿಲ್ಲ.‌

“ನಾನೊಂದು ದಿನ ಬಂದು ಇಲ್ಲಿರುತ್ತೇನೆ. ಕಾನ್ಸೆಪ್ಟ್ ಎಲ್ಲವೂ ನಿಮ್ಮದೇ” ಎಂದು ಹೇಳಿದವರು ವಾರ ಕಳೆಯುವುದರಲ್ಲೇ ಬಂದದ್ದು ನಿಜಕ್ಕೂ ಅಚ್ಚರಿ.

ಬಹು ಬೇಡಿಕೆಯ, ಹೊಸತು ಮತ್ತು ಹಳೆಯ ಎರಡೂ ತಲೆಮಾರುಗಳನ್ನು ಪ್ರಭಾವಿಸುತ್ತಿರುವ ನಟ, ನಿರೂಪಕ, ಕರ್ನಾಟಕದ ಕಣ್ಮಣಿ ರಮೇಶ್ ಅರವಿಂದ್ ನನ್ನ ಕೆಲಸಗಳನ್ನು ಮೆಚ್ಚಿ, ಕೊಟ್ಟ ಮಾತಿನಂತೆಯೇ ಕುದ್ರು ನೆಸ್ಟ್ ಗೆ ಬಂದಿದ್ದು ಅಚ್ಚರಿಯಲ್ಲೇ ಅಚ್ಚರಿ.

ರಮೇಶ್ ಅರವಿಂದ್ ಜೊತೆ ಫೋಕಸ್ ರಘು

ಕರಾವಳಿಯ ಶೈಲಿಯಲ್ಲೇ ಫೋಟೋ ಶೂಟ್ ಪ್ಲ್ಯಾನ್ ಮಾಡಿದ್ದೆ. ಫೋನಲ್ಲಿ ಎಲ್ಲವನ್ನೂ ತಿಳಿಸಿದ್ದೆ. ನೀವೇನು ಮಾಡಿಸ್ತೀರೋ ನಾನದಕ್ಕೆ ರೆಡಿ ಎಂದವರ ಉತ್ಸಾಹ ಇವತ್ತು ನೋಡಬೇಕು! ಅದೆಂತಹ ಎನರ್ಜಿ ಅವರೊಳಗಿದೆ. ಊಟ ಮಾಡಿದ್ದು ಮೂರು ಗಂಟೆಗೆ ಎಂಬುದು ಈಗ ನೆನಪಾಗುತ್ತಿದೆಯಷ್ಟೆ. ರಮೇಶ್ ಅರವಿಂದ್ ಯಕ್ಷಗಾನದ ಬಣ್ಣ ಹಚ್ಚಿ, ಗೆಜ್ಜೆ ತೊಟ್ಟು, ಹೆಜ್ಜೆ ಹಾಕಿದ ಪರಿಯಂತೂ ರೋಮಾಂಚನ.

“ಯಕ್ಷಗಾನದ ವೇಷ ತೊಟ್ಟ ನನ್ನಲ್ಲೀಗ ದಿವ್ಯತೆಯ ಭಾವ ಬೆಳೆದಿದೆ. ಎಂಟಡಿ, ನೂರೈವತ್ತು ಕೆ.ಜಿ ಬೆಳೆದವನಂತೆ ಅನಿಸುತ್ತಿದೆ. ನಾನಿವತ್ತು ಬಹಳವೇ ಶಕ್ತಿ ಶಾಲಿ, ಎದುರಿಗೇನಾದರೂ ರಾಕ್ಷಸರು ಬಂದರೆ ಹೊಡೆದುರುಳಿಸಿ ಬಿಡುತ್ತೇನೆ” ಎಂದಾಗ ನಮ್ಮಲ್ಲಂತೂ ವಿದ್ಯುತ್ ಸಂಚಾರ.

ರಮೇಶ್ ಅರವಿಂದ್ ಲವಲವಿಕೆ, ಶಿಸ್ತು, ಸಮಯಪ್ರಜ್ಞೆ, ಕಲಾರಾಧನೆ, ಕಮಿಟ್ಮೆಂಟಿಗೆ ಈ ವೀಡಿಯೋ ಸಾಕ್ಷಿ. ಯಕ್ಷಗಾನದ ವೇಷ ಭೂಷಣ ಹಾಗೂ ಹೆಜ್ಜೆ ಕಲಿಸಿದ ಶೈಲೇಶ್ ತೀರ್ಥಹಳ್ಳಿಯವರಿಗೆ ವಿಶೇಷ ಕೃತಜ್ಞತೆಗಳು.

-ಫೋಕಸ್ ರಘು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!