Monday, January 20, 2025
Monday, January 20, 2025

ಕುತೂಹಲ ಕೆರಳಿಸಿದ ಮೈಸೂರು ಅರಸರ ಚರಿತ್ರೆ

ಕುತೂಹಲ ಕೆರಳಿಸಿದ ಮೈಸೂರು ಅರಸರ ಚರಿತ್ರೆ

Date:

ವರಾತ್ರಿಯಲ್ಲಿ ನಾಡಹಬ್ಬವಾದ ಮೈಸೂರು ದಸರಾ ದೇಶ ವಿದೇಶದ ಪ್ರವಾಸಿಗರ ಮನ ಸೆಳೆಯುತ್ತದೆ. ದಸರಾ ಸಂದರ್ಭ ಅರಮನೆಯಲ್ಲಿ ನಡೆಯುವ ಪ್ರಖ್ಯಾತ ಕಲಾಕಾರರ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆ, ಪಂಜಿನ ಕವಾಯತು, ವಸ್ತು ಪ್ರದರ್ಶನ, ಸ್ಯಾಂಡ್ ಆರ್ಟ್ ಪ್ರಮುಖ ಆಕರ್ಷಣೆಗಳು. ಚಾಮುಂಡೇಶ್ವರಿಯ ಜಂಬೂ ಸವಾರಿ ಲೋಕವಿಖ್ಯಾತ. ಈ ವರ್ಷ ಅಂದರೆ ಅಕ್ಟೋಬರ್ 2023 ರಲ್ಲಿ ನಮ್ಮ ಸವಾರಿ ಮೈಸೂರು ಮಡಿಕೇರಿಯತ್ತ ಸಾಗಿತು. ಮೊದಲು ಕಾರ್ಕಳದಿಂದ ಮಡಿಕೇರಿಗೆ ತಲುಪಿದೆವು, ಮಡಿಕೇರಿಯಲ್ಲಿ ಒಂದು ದಿನ ಸುತ್ತಾಡಿ ಮರುದಿನ ಮೈಸೂರಿಗೆ ತೆರಳಿದೆವು. ಮೈಸೂರಿನ ಹತ್ತಿರ ರಂಗನತಿಟ್ಟು, ಸೋಮನಾಥಪುರಕ್ಕೆ ಭೇಟಿ ಕೊಟ್ಟು ನಾಲ್ಕು ದಿನ ಮೈಸೂರಿನಲ್ಲಿ ಇದ್ದೆವು. ಇಲ್ಲಿ ಕೆ.ಆರ್.ಎಸ್., ಜಿ.ಆರ್.ಎಸ್ ಫ್ಯಾಂಟಸಿ ಪಾರ್ಕ್, ಸ್ನೋ ವಲ್ಡ್, ವಸ್ತು ಪ್ರದರ್ಶನ, ಲಲಿತ್ ಮಹಲ್ ಪ್ಯಾಲೇಸ್ ನಲ್ಲಿ ರಾಜರ ಕಾಲದ ಪ್ರಖ್ಯಾತ ಕಲಾಕಾರರ ಚಿತ್ರಕಲೆಯನ್ನು ನೋಡಿದೆವು. ಆದರೆ ನಾನು ಹುಡುಕುತ್ತಿದ್ದ ರಾಜವರ್ಮರು ಮಾಡಿರುವಂತಹ ಪೇಂಟಿಂಗ್ಸ್ ಎಲ್ಲಿಯೂ ಕಾಣಸಿಗಲಿಲ್ಲ. ಬೇಸರವಾದದ್ದು ನಿಜ. ಆದರೆ ಅಲ್ಲಿ ಅದ್ಭುತ ಚಿತ್ರಕಲೆಗಳಿದ್ದವು. ವಿವಿಧ ಕಲಾವಿದರಿಂದ ರಚಿತ ಬಹುದೊಡ್ಡ ಚಿತ್ರಕಲೆ ನೋಡಲು ಸಿಕ್ಕಿತು. ಫೋಟೋಗ್ರಫಿ ನಿಷಿದ್ಧವಾಗಿದ್ದರಿಂದ ಕಣ್ಣುಗಳಿಂದಲೇ ತೃಪ್ತಿ ಪಡೆದುಕೊಂಡೆ. ಮೈಸೂರು ಅರಸರ ಚಿತ್ರ ಕಲೆಗಳು, ದಸರಾ ಮೆರವಣಿಗೆ ಎಲ್ಲವೂ ಇತ್ತು.

ಆದರೆ ಒಂದು ಕಡೆ ನನಗೆ ಜಯಚಾಮರಾಜೇಂದ್ರರ ದೊಡ್ಡ ಚಿತ್ರಕಲೆ ಅದರ ಪಕ್ಕದಲ್ಲಿ ಅವರ ಗಡಿಯಾರಗಳ ಕಲೆಕ್ಷನ್ಸ್ ಇಟ್ಟಿದ್ದರು. ಅಲ್ಲೇ ಅವರ ಬಗ್ಗೆ ಬರೆದಿತ್ತು ಕುತೂಹಲದಿಂದ ಓದಿದೆ. ಅಬ್ಬಾ! ಎಂತಹ ಮಹಾನ್ ವ್ಯಕ್ತಿ ಅನಿಸಿತು. ಒಬ್ಬ ಶ್ರೇಷ್ಠ ಕಲಾವಿದ, ಓದುಗಾರ, ಉತ್ತಮ ಸಾಹಿತಿ, ಶಾಸ್ತ್ರಿಯ ಸಂಗೀತ ಹಾಗೂ ವೆಸ್ಟೆರ್ನ್ ಸಂಗೀತದಲ್ಲಿ ಪರಿಣತಿ ಹೊಂದಿದ್ದವರು. ಕರ್ನಾಟಕ ಸಂಗೀತದಲ್ಲಿ ಅನೇಕ ರಾಗ ಸಂಯೋಜನೆಗಳನ್ನು ರಚಿಸಿದ್ದವರು. ಪಿಯಾನೋ, ಪೈಪ್ ಆರ್ಗನ್ ಚೆನ್ನಾಗಿ ನುಡಿಸುತ್ತಿದ್ದರು. ಉತ್ತಮ ಬರಹಗಾರರು ಕೂಡ. ಕನ್ನಡದಲ್ಲಿ ಅನೇಕ ಪುಸ್ತಕಗಳನ್ನು ಪ್ರಕಟಿಸಿದವರು. ಪ್ರಜೆಗಳ ಹಿತಾಸಕ್ತಿಗೆ ಮೊದಲ ಪ್ರಾಮುಖ್ಯತೆಯನ್ನು ನೀಡುತ್ತಿರುವವರು. ರಾಜ್ಯಶಾಸ್ತ್ರ, ಚರಿತ್ರೆ, ಅರ್ಥಶಾಸ್ತ್ರದಲ್ಲಿ ಪರಿಣತಿ ಹೊಂದಿದವರು. ಕುದುರೆ ಸವಾರರು, ನುರಿತ ಬೇಟೆಗಾರರು, ಟೆನ್ನಿಸ್ ಆಟಗಾರರಾಗಿದ್ದರು. ಇದೆಲ್ಲಾ ಓದುತ್ತಿದ್ದಂತೆ ನನಗಾದ ಖುಷಿಯ ಜೊತೆಗೆ ಹೆಮ್ಮೆಯು ಆಯಿತು. ರಾಜರಿದ್ದರೆ ಈ ರೀತಿ ಇರಬೇಕು ಎಂದುಕೊಂಡೆ. ತಾನು ಬಹುಮುಖ ಪ್ರತಿಭೆ ಅಲ್ಲದೆ ಅನೇಕ ವಿಷಯಗಳ ಆಸಕ್ತಿ ಹೊಂದಿದವರು. ಅದಕ್ಕಿಂತ ಮಿಗಿಲಾಗಿ ಪ್ರಜೆಗಳ ಅಭಿವೃದ್ಧಿಯೇ ತಮ್ಮ ಜೀವನದ ಗುರಿಯಾಗಿಟ್ಟುಕೊಂಡವರು. ಜನರ ಸೇವೆಗಾಗಿ ಎಲ್ಲಾ ಕ್ಷೇತ್ರದಲ್ಲೂ ಅನೇಕ ಯೋಜನೆಗಳನ್ನು ಸ್ಥಾಪಿಸಿದವರು. ಸಂಸ್ಕೃತ ಭಾಷೆಯಲ್ಲಿ ಇರುವ ವೇದ, ಶಾಸ್ತ್ರ, ಪುರಾಣ, ಉಪನಿಷತ್ತು ಸಾಮಾನ್ಯ ಜನರಿಗೆ ತಲುಪಬೇಕೆಂದು ಕನ್ನಡಕ್ಕೆ ತುರ್ಜಮೆ ಮಾಡಿಸಿ ಉಚಿತವಾಗಿ ಹಂಚಿದರು. ಶಿಕ್ಷಣದ ಅಗತ್ಯವನ್ನು ಅರಿತು ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ನೀರಾವರಿ ಕಲ್ಪಿಸಲು ಅನೇಕ ಯೋಜನೆಗಳನ್ನು ಪ್ರಾರಂಭಿಸಿದರು. ಜನರ ಆರೋಗ್ಯದ ಹಿತದೃಷ್ಟಿಯಿಂದ ಅನೇಕ ಆಸ್ಪತ್ರೆಗಳನ್ನು ಕಟ್ಟಿದರು. ಅನೇಕ ದೇವಸ್ಥಾನಗಳನ್ನು ಕಟ್ಟಿದರು. ಆ ಜನರು ಎಷ್ಟು ಪುಣ್ಯವಂತರು ಎನಿಸಿತು. ಹಳ್ಳಿಗಳಲ್ಲಿ ರೈಲು ಓಡಾಡುವಂತೆ ಮಾಡಿದರು. ರೈತರಿಗೆ ಉಚಿತ ಪ್ರಯಾಣ ಕಲ್ಪಿಸಿದವರು. ಇವರು ಮಾತ್ರವಲ್ಲ ಇವರ ಹಿಂದಿನ ಮೈಸೂರು ರಾಜರು ಕೂಡ ಜನಹಿತಕ್ಕಾಗಿ ಪರಿಶ್ರಮ ಪಟ್ಟವರೇ.

ಸಂಜೆಯ ವಸ್ತು ಪ್ರದರ್ಶನ ನೋಡಿ ಅಲ್ಲೇ ಹತ್ತಿರದಲ್ಲಿದ್ದ ಅರಮನೆಯಲ್ಲಿ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಹೊರಟೆವು. ದಸರಾ ಸಮಯವಾದ್ದರಿಂದ ಜನಜಂಗುಳಿ ಜಾಸ್ತಿ. ಆದರೆ ಎದುರಿಗೆ ಅರಮನೆಯ ಸುತ್ತು ದೀಪಾಲಂಕಾರ ಪುಷ್ಪಾಲಂಕಾರ ನೋಡಿ ನಾನು ಉದ್ದದ ಕ್ಯೂ ಅಲ್ಲಿ ಇದ್ದದ್ದು ನೆನಪು ಬರಲೇ ಇಲ್ಲ. ಒಳಗೆ ಹೋದೆವು. ಸಂಗೀತ ಹಾಗೂ ನೃತ್ಯದ ಕಾರ್ಯಕ್ರಮ ನಡೆದಿತ್ತು. ಹಿರಿ ವಯಸ್ಸಿನ ಒಬ್ಬರು ನಿರೂಪಣೆ ಮಾಡುತ್ತಿದ್ದರು. ದೂರದಿಂದ ಯಾರು ಎಂದು ತಿಳಿಯಲಾಗಲಿಲ್ಲ. ಆದರೆ ಲೇಖಕರು ಹಾಗೂ ಕವಿ ಎಂದು ಅವರ ಕವಿತೆಗಳನ್ನು ಹೇಳಿದಾಗ ತಿಳಿಯಿತು. ಕಾರ್ಯಕ್ರಮ ಒಳ್ಳೆಯದಿತ್ತು, ಮೈಸೂರಿನ ಹಾಗೂ ಕರ್ನಾಟಕದ ಬಗ್ಗೆ ನೃತ್ಯ ಹಾಗೂ ಸಂಗೀತದ ಜುಗಲ್ ಬಂದಿ ನಡೆಯುತ್ತಿತ್ತು. ಅದಕ್ಕಿಂತ ನನಗೆ ಇಷ್ಟವಾದದ್ದು ನಿರೂಪಕರು ಹೇಳಿದ ಮೈಸೂರು ರಾಜರ ಕಥೆಗಳನ್ನು ಕೇಳಿ. ಮೈಸೂರು ರಾಜರ ಬಗ್ಗೆ ಹೇಳಿದರೆ ಇಡೀ ರಾತ್ರಿ ಹೇಳಬಹುದು ಅಷ್ಟು ಕಥೆಗಳಿವೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು ಆ ನಿರೂಪಕರು.

ಅವರು ಹೇಳಿದ ಕೆಲವು ಕಥೆಗಳು ಹೀಗಿವೆ. ಮೈಸೂರು ರಾಜ ರಾತ್ರಿ ಮಲಗುತ್ತಿರಲಿಲ್ಲವಂತೆ . ಅರಮನೆಯಲ್ಲಿರುವ ಎಲ್ಲಾ ದೀಪವನ್ನು ತಾವೇ ಆರಿಸಿ ನಂತರ ನಿದ್ದೆ ಮಾಡುತ್ತಿದ್ದರಂತೆ. ಒಂದು ದಿನ ಜೋರು ಮಳೆ ಬರುತ್ತಿತ್ತಂತೆ, ನಾಳ್ವಡಿ ಕೃಷ್ಣರಾಜರು ಊರ ಹೊರಗೆ ಗುಡಿಯಲ್ಲಿ ಹೆಣ್ಣು ಮುದುಕಿ ಇದ್ದದ್ದು ತಿಳಿದಿತ್ತು. ರಾಜರಿಗೆ ಆ ಮುದುಕಿಯ ಚಿಂತೆಯಾಗಿ ಅದೇ ಸಮಯದಲ್ಲಿ ಗುಡಿಸಲಿಗೆ ಹೋಗಿ ಅವರಿಗೆ ಜೀವಾವಧಿಗೆ ಬೇಕಾದ ಸಂಪತ್ತನ್ನು ನೀಡಿದ್ದರಂತೆ. ಎಂತಹ! ಕರುಣಾಮಯಿ ರಾಜರು ಅಲ್ಲವೇ? ಇನ್ನೊಂದು ಕಥೆ- ಮುಮ್ಮಡಿ ಕೃಷ್ಣರಾಜರ ಬಗ್ಗೆ ಹೇಳಿದರು. ಅವರು ಪ್ರತಿದಿನ ಮಧ್ಯಾಹ್ನ 3:00 ನಂತರ ಊಟ ಮಾಡುತ್ತಿದ್ದರಂತೆ, ಏಕೆ ಗೊತ್ತೆ? ಮೂರು ಗಂಟೆ ಒಳಗೆ ಎಲ್ಲಾ ಪ್ರಜೆಗಳ ಊಟ ಆಗಿರುತ್ತದೆ, ಪ್ರಜೆಗಳ ಊಟವಾದ ನಂತರ ನಮ್ಮಊಟ, ಪ್ರಜೆಗಳೇ ನಮ್ಮ ದೇವರು ಎಂದು ಹೇಳುತ್ತಿದ್ದರಂತೆ. ಇಂತಹ ರಾಜರು ಕೂಡ ಇದ್ದರೇ?ಎಂದು ನನ್ನ ಕಣ್ಣು ಒದ್ದೆಯಾದವು. ರಾತ್ರಿ 10:00 ಗಂಟೆಯಾದ್ದರಿಂದ ನನಗೆ ಕುರ್ಚಿಯಿಂದ ಏಳಲು ಮನಸ್ಸಿಲ್ಲದಿದ್ದರೂ ಏಳಬೇಕಾಯಿತು. ನಮ್ಮ ಕರ್ನಾಟಕದ ನೆಲದ ಮೇಲೆ ಇಂತಹ ಅನೇಕ ಶ್ರೇಷ್ಠ ಮೈಸೂರು ಅರಸರ ಬಗ್ಗೆ ಕೇಳಿ ಓದಿ ಇನ್ನಷ್ಟು ಚರಿತ್ರೆ ಓದಬೇಕೆನ್ನುವ ಮನಸ್ಸಾಯಿತು.

-ಡಾ. ಹರ್ಷಾ ಕಾಮತ್

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!