ಕನಸುಗಳತ್ತ ಪಯಣಿಸುವುದು ನಮ್ಮ ಆಸೆ. ಪ್ರಯತ್ನಪಟ್ಟು ಸಿಗದಿದ್ದರೆ ಬೇಸರ. ಅನೇಕ ಅಡಚಣೆಗಳು ನಮ್ಮತ್ತ ಧಾವಿಸುತ್ತದೆ. ಅದನ್ನು ಬಿಟ್ಟು ಮುಂದೆ ಸಾಗುವುದು ನಮ್ಮ ನಿರ್ಧಾರ. ಆದರೆ ಇಲ್ಲಿ ಕೆಲವೊಮ್ಮೆ ಘಟನೆಗಳು ನಮ್ಮ ವಿರುದ್ಧ ಸಾಗುತ್ತವೆ. ಏನು ಮಾಡಲು ಸಾಧ್ಯವಿಲ್ಲವೆನ್ನುವ ಪರಿಸ್ಥಿತಿ ಎದುರಿಸುತ್ತೇವೆ. ಆಗ ಏನು ಮಾಡುವುದು? ಸೋಲನ್ನು ಒಪ್ಪಿ ಸುಮ್ಮನೆ ಕುಳಿತುಕೊಳ್ಳುವುದೇ? ಅಥವಾ ನಾವು ಹಿಡಿದ ದಾರಿಯಲ್ಲೇ ಫಲ ಸಿಗದಿದ್ದರೂ ಲೆಕ್ಕಿಸದೆ ಮುನ್ನುಗುವುದೇ? ನಿರೀಕ್ಷಿತ ಫಲ ಸಿಗದೆ ಹತಾಶರಾಗುತ್ತೇವೆ. ಆಗೇನು ಮಾಡುವುದು? ಆಗ ಬೇರೆ ದಾರಿಯನ್ನು ಹುಡುಕುವುದೇ ಜಾಣತನ.
ಅಬ್ದುಲ್ ಕಲಾಂ ಅವರಿಗೆ ಪೈಲೆಟ್ ಆಗಲೇಬೇಕೆನ್ನುವ ಆಸೆ ಇತ್ತು. ಆದರೆ ಏರೋನಾಟಿಕಲ್ ಇಂಜಿನಿಯರ್ ಅಲ್ಲಿ ಒಂಬತ್ತನೇ ಸ್ಥಾನ ಪಡೆದರು. ಆದರೆ ಅಲ್ಲಿ ಬರಿ ಎಂಟು ಸೀಟ್ ಗಳಿದ್ದವು. ದೇವರಿಗೆ ಬೇರೆ ಇಚ್ಛೆ ಇರಬೇಕು ಎಂದು ಆ ಆಸೆಯನ್ನು ಬಿಟ್ಟು ಬೇರೆ ದಾರಿ ಹಿಡಿದರು. ಮುಂದೆ ಅವರಿಗೆ ಪೈಲೆಟ್ ಆಗುವ ಅವಕಾಶ ಸಿಕ್ಕಿತು. ಅವರ ಕನಸು ನನಸಾಯಿತು. ಮುಂದೆ ಅವರು ವಿಜ್ಞಾನಿ ಆಗಿ ಅವರು ಸುಖೋಯ್ 30 ಎಂ.ಕೆ.ಐ ವಿಮಾನವನ್ನು ಹಾರಿಸಿದರು. ಫಸ್ಟ್ ಹೆಡ್ ಆಫ್ ಸ್ಟೇಟ್ ಟು ಫ್ಲೈ ಅ ಫೈಟರ್ ಪ್ಲೇನ್ ಎನ್ನುವಂತಹ ಕೀರ್ತಿ ದೊರೆಕಿತು. ಫೈಟರ್ ಪ್ಲೇನನ್ನು ಮೊದಲು ಹಾರಿಸಿದವರು ಇವರಾಗಿದ್ದರು.
ಅಡಚಣೆಗಳನ್ನು ಪಾರು ಮಾಡಿ ತಮ್ಮ ಕನಸಿನತ್ತ ಧಾವಿಸುವುದು ಒಳ್ಳೆಯದು. ಆದರೆ ಕೆಲವೊಮ್ಮೆ ಎಷ್ಟು ಪ್ರಯತ್ನಪಟ್ಟರು ಸಫಲನಾಗದಿದ್ದಾಗ ಬೇರೆ ದಾರಿ ಹಿಡಿಯುವುದು ವಾಸಿ. ಒಂದೇ ದಾರಿ ಹಿಡಿದುಕೊಂಡು ಹೋಗುತ್ತೇನೆ ಎನ್ನುವ ಹಠ ಬೇಡ. ಆ ದಾರಿಯಲ್ಲಿ ಹತಾಶರಾಗುವ ಮೊದಲು ದಾರಿಯನ್ನು ಬದಲಿಸಿ. ಹಿಡಿದ ದಾರಿಯಲ್ಲಿ ಉತ್ಸಾಹ ಉಳಿದರೆ ಮುಂದೆ ಸಾಗಿ ಇಲ್ಲದಿದ್ದರೆ ಆ ದಾರಿಯನ್ನು ಬಿಡಿ. ಯಾವ ದಾರಿಯನ್ನು ಹಿಡಿಯಬೇಕೆಂದು ನಾವು ನಿರ್ಧರಿಸಬೇಕು ಅಷ್ಟೇ. ಈ ದಾರಿಯಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆ ಒಂದು ಕಡೆ ಇದ್ದರೆ, ಹಿಡಿದ ದಾರಿಯಲ್ಲಿ ನಿರಂತರ ಸೋಲು ಅನುಭವಿಸಿದರೆ ಬೇರೆ ಎಷ್ಟೋ ದಾರಿಗಳಿವೆ ಅಲ್ಲವೇ?
ಮಂಗಳೂರಿಗೆ ಹೋಗಲು ಮೂಡಬಿದ್ರೆಯಿಂದಲೂ ಹೋಗಬಹುದು ಪಡುಬಿದ್ರಿಯಿಂದಲೂ ಹೋಗಬಹುದು ಅಲ್ಲವೇ. ಆದರೆ ಕೆಲವೊಮ್ಮೆ ಮಂಗಳೂರಿಗೆ ಹೋಗಲಿಕ್ಕೆ ಆಗುವುದೇ ಇಲ್ಲ, ಆಗ ಮೈಸೂರಿಗೆ ಹೊಗಬಹುದು. ಅಲ್ಲಿ ಯಶಸ್ಸು ಕೂಡ ಕಾಣಬಹುದು. ಇದುವೇ ಜೀವನ.
-ಡಾ. ಹರ್ಷಾ ಕಾಮತ್