Sunday, February 23, 2025
Sunday, February 23, 2025

ನಿಮಗೆ ಪ್ಯಾಷನ್ ಇದೆಯೇ?

ನಿಮಗೆ ಪ್ಯಾಷನ್ ಇದೆಯೇ?

Date:

ಸುಬ್ಬನಿಗೆ ಗಾಯಕನಾಗುವ ಆಸೆ. ಸುಬ್ಬಿಗೆ ನರ್ತಕಿಯಾಗುವ ಆಸೆ. ಆದರೆ ಇಬ್ಬರಲ್ಲಿ ವ್ಯತ್ಯಾಸವಿದೆ. ಸುಬ್ಬ ಸಮಯವನ್ನು ಪೋಲು ಮಾಡಿ ತನ್ನ ಕನಸಿನತ್ತ ಪ್ರಯತ್ನ ಕೂಡ ಮಾಡಲಿಲ್ಲ. ಗಾಯಕನಾಗಲು ಶ್ರಮ ಪಡಬೇಕು, ಪ್ರತಿನಿತ್ಯ ಅಭ್ಯಾಸ ಮಾಡಲೇಬೇಕು ಅದಕ್ಕೋಸ್ಕರ ಕೆಲವು ಮೋಜನ್ನು ಬಿಡಬೇಕು. ಇದು ಯಾವುದೂ ಬಿಡದೆ ಗಾಯಕನಾಗಲು ಸಾಧ್ಯವಿಲ್ಲ. ಆದರೆ ಸುಬ್ಬಿಗೆ ನೃತ್ಯ ಅಂದರೆ ಜೀವ. ಎಲ್ಲಿಗೆ ಹೋದರು ನೃತ್ಯ ನೋಡುತ್ತಾಳೆ ನೃತ್ಯದ ಬಗ್ಗೆ ಲೇಖನ, ಪುಸ್ತಕ, ವೀಡಿಯೋಸ್ ನೋಡಿ ಸಮಯ ಕಳೆಯುತ್ತಾಳೆ. ಪ್ರತಿನಿತ್ಯ ತನ್ನ ಕೆಲಸದ ಮಧ್ಯೆ ಕನಿಷ್ಠ ಒಂದು ಎರಡು ಗಂಟೆಯಾದರೂ ನೃತ್ಯ ಅಭ್ಯಾಸ ಮಾಡುತ್ತಾಳೆ. ಹೀಗೆ ಅನೇಕ ವರ್ಷ ಕಳೆದ ನಂತರ ಪ್ರಖ್ಯಾತ ನೃತ್ಯಗಾರ್ತಿಯಾಗುತ್ತಾಳೆ. ಬೇರೆಯವರನ್ನು ಕಲಿಸುತ್ತಿದ್ದಾಳೆ. ಈ ಎರಡು ವ್ಯಕ್ತಿಗಳಲ್ಲಿ ವ್ಯತ್ಯಾಸವೇನಂದರೆ ಸುಬ್ಬನಿಗೆ ಆಸೆ ಮಾತ್ರ ಛಲವಿಲ್ಲ. ಯಾರೋ ಪ್ರಖ್ಯಾತ ಗಾಯಕನನ್ನು ನೋಡಿ ಹಾಗೆ ಆಗಬೇಕು ಅನ್ನುವ ಆಸೆ ಅಷ್ಟೇ. ಪ್ಯಾಷನ್ ಅಲ್ಲ. ಆದರೆ ಸುಬ್ಬಿಗೆ ನೃತ್ಯವೆಂಬುದು ಪ್ಯಾಷನ್. ಆಸೆ ಅನೇಕರು ಪಡುತ್ತಾರೆ, ಆದರೆ ಕೆಲವರಿಗೆ ಮಾತ್ರ ಪ್ಯಾಶನ್ ವಿರುತ್ತದೆ. ಅದೇ ಜೀವ ಎಂದು ಹೇಳುತ್ತೇವೆ ಅಲ್ಲವೇ. ಅದೇ ಪ್ಯಾಶನ್. ಬರಿ ಆಸೆಗೆ ಶಕ್ತಿ ಇಲ್ಲ. ಅದಕ್ಕೆ ಛಲ, ನಿರಂತರ ಸ್ಪೂರ್ತಿ, ಎಡಬಿಡದ ಶ್ರಮ, ತ್ಯಾಗ ಅಗತ್ಯ.

ಪ್ಯಾಷನ್ ಎಂದರೇನು?: ನಮಗೆ ಯಾವ ಕೆಲಸ ಮಾಡಲು ಬಲು ಪ್ರೀತಿ. ಯಾವ ಕೆಲಸದಲ್ಲಿ ಬೇರೆಯವರು ಹೊಗಳಬೇಕು ಎಂದು ಅಪೇಕ್ಷಿಸುವುದಿಲ್ಲವೋ ಯಾವುದು ನಿರಂತರವಾಗಿ ಮಾಡಬಹುದೋ ಅದೇ ಪ್ಯಾಷನ್. ಬೇರೆಯವರು ಹೊಗಳಬೇಕು ಎನ್ನುವ ಆಸೆ ಅದು ಪ್ಯಾಶನ್ ಅಲ್ಲವೇ ಅಲ್ಲ. ಅದು ಬರೀ ಪ್ರಖ್ಯಾತವಾಗುವ ಆಸೆ ಅಷ್ಟೇ. ಯಾರು ನೋಡದಿದ್ದರೂ ಹೊಗಳದಿದ್ದರೂ ಮಾಡುತ್ತೀರಿ ಯಾವ ಕೆಲಸ ಗಂಟೆಗಟ್ಟಲೆ ಬೇಸರವಿಲ್ಲದೆ ಮಾಡಬಲ್ಲರಿ ಅದೇ ನಿಮ್ಮ ಪ್ಯಾಶನ್ ಎಂದು ತಿಳಿಯಿರಿ. ಅದರ ಬಗ್ಗೆ ಪ್ರೀತಿ ಇರುತ್ತದೆ ಅದರಲ್ಲಿ ಆನಂದವನ್ನು ಹೊಂದುತ್ತೀರಿ.

ನಿಮ್ಮ ಪ್ಯಾಶನ್ ನಿಮ್ಮನ್ನು ಇತರರಿಂದ ಪ್ರತ್ಯೇಕಗೊಳಿಸುತ್ತದೆ. ನಾವು ಅನೇಕ ಕಲಾವಿದರನ್ನು ಅನೇಕ ಕ್ಷೇತ್ರಗಳಲ್ಲಿ ನೋಡುತ್ತೇವೆ ಅವರು ಪ್ರಖ್ಯಾತರಾಗಲು ಅದನ್ನು ಮಾಡಿದ್ದಲ್ಲ ಅವರಿಗೆ ಆ ವಿಷಯದಲ್ಲಿ ಪ್ಯಾಶನ್ ಇದ್ದಿದ್ದರಿಂದ ಮುಂದೆ ಅವರು ಪ್ರಖ್ಯಾತರಾದವರು. ಆದ್ದರಿಂದ ನಿಮಗೆ ಪ್ಯಾಷನ್ ಇರುವ ವಿಷಯದಲ್ಲಿ ಸಮಯವನ್ನು ಕಳೆಯಿರಿ ಮುಂದೆ ನೀವು ಅದನ್ನೇ ವೃತ್ತಿಯಾಗಿ ಪರಿವರ್ತಿಸಬಹುದು.

ನಿಮ್ಮ ಕೆಲಸದ ಮೇಲೆ ನಿಮಗೆ ಪ್ರೀತಿ ಗೌರವವಿದ್ದರೆ ಯಶಸ್ಸು ನಿಮ್ಮ ಕೈಯಲ್ಲಿದ್ದ ಹಾಗೆ. ಇನ್ನು ಆಸೆಯ ವಿಷಯಕ್ಕೆ ಬಂದರೆ ಅದೊಂದು ರಂದ್ರವಿರುವ ದೋಣಿ ಇದ್ದಂತೆ. ದೋಣಿಯಲ್ಲಿ ನೀರು ತುಂಬಿ ದೋಣಿ ಮುಳುಗುತ್ತದೆ ದಡ ಸೇರುವುದಿಲ್ಲ. ಆಸೆಯೂ ಹಾಗೆಯೇ. ನಮ್ಮ ಭವಿಷ್ಯ ಸುಧಾರಿಸಬೇಕಾದರೆ ಯಶಸ್ಸು ಗಳಿಸಬೇಕಾದರೆ ಪ್ಯಾಷನ್ ಇರಲೇಬೇಕು. ನಮ್ಮ ಮನಸ್ಸಿಗೆ ಅನೇಕ ರೀತಿಯ ಗೊಂದಲವಿರುತ್ತದೆ. ಯಾವುದು ಮಾಡಬೇಕು ಯಾವುದು ಮಾಡಬಾರದು ಎನ್ನುವ ಚಿಂತೆಯಲ್ಲಿ ಇರುತ್ತೇವೆ. ಜೀವನದಲ್ಲಿ ಸ್ಪಷ್ಟತೆ ಮುಖ್ಯ. ಮನಸ್ಸಿಗೆ ತರಬೇತಿ ನೀಡಬೇಕು. ಸಾಮಾನ್ಯಕ್ಕಿಂತ ಎತ್ತರಕ್ಕೆ ಏರಲು ಸಾಮಾನ್ಯ ಆಲೋಚನೆ ಸಾಮಾನ್ಯ ಕೆಲಸ ಸಾಕಾಗುವುದಿಲ್ಲ. ಅದಕ್ಕೆ ಅಸಾಧಾರಣ ಆಲೋಚನೆ ಅಸಾಧಾರಣವಾದ ಕಾರ್ಯ ಅಗತ್ಯ. ಫ್ಯಾಶನ್ ಇದ್ದರೆ ಅದೇ ನಿಮಗೆ ದಾರಿ ತೋರಿಸುತ್ತದೆ. ಹೊಸ ಅವಕಾಶಗಳು ತೆರೆದುಕೊಳ್ಳುತ್ತದೆ. ಜೀವನದಲ್ಲಿ ಪ್ಯಾಶನ್ ಇದ್ದರೆ ಎಲ್ಲವೂ ಸಾಧ್ಯ. ನಿಮಗೆ ಎಲ್ಲಿಲ್ಲದ ಆನಂದ ಸಿಗುವುದರಿಂದ ಅದು ನಿಮಗೆ ಮಾತ್ರವಲ್ಲದೆ ಇತರರಿಗೂ ಕಾಣುತ್ತದೆ. ಅದೇ ನಿಮ್ಮ ಲೈಫ್ ಅನಿಸುತ್ತದೆ, ಅದೇ ಪ್ಯಾಷನ್.

-ಡಾ. ಹರ್ಷಾ ಕಾಮತ್

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇಮಕ

ನವದೆಹಲಿ, ಫೆ.22: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್...

ಕಾರ್ಕಳ ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಗಣಿತನಗರ, ಫೆ.22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ...

ಸುರಂಗದ ಛಾವಣಿ ಕುಸಿತ; ಸಿಲುಕಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ

ಯು.ಬಿ.ಎನ್.ಡಿ., ಫೆ.22: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ)...
error: Content is protected !!