Saturday, January 18, 2025
Saturday, January 18, 2025

ಯೋಚನೆಗಳ ಪುನರಾವರ್ತನೆ 

ಯೋಚನೆಗಳ ಪುನರಾವರ್ತನೆ 

Date:

ಬ್ಬ ಹುಡುಗ ಹುಡುಗಿಯನ್ನು ನೋಡಿ ಇಷ್ಟಪಡುತ್ತಾನೆ. ಆದರೆ ಮೊದಲನೆಯ ದಿನ ಜೀವ ಕೊಡುವಷ್ಟು ಪ್ರೀತಿಸುವುದಿಲ್ಲ. ಆದರೆ ಆ ಹುಡುಗ ದಿನಾಲು ಬೆಳಿಗ್ಗೆಯಿಂದ ಸಂಜೆಯವರೆಗೆ ಅವಳ ಬಗ್ಗೆನೇ ಯೋಚಿಸುತ್ತಿದ್ದರೆ ಇದೇ ಪ್ರೀತಿ ಎಂದು ನಂಬಿಬಿಡುತ್ತಾನೆ. ನಂತರದ ದಿನಗಳಲ್ಲಿ ಅವಳೇ ಜೀವ ಎನ್ನುವಷ್ಟು ಲಗವು ಹುಟ್ಟಿಬಿಡುತ್ತದೆ. ಇದೇ ಪುನಹ ಪುನಹ ಆಲೋಚನೆಯಿಂದಾಗುವ ಪ್ರಭಾವ. ಇನ್ನೊಂದು ಉದಾಹರಣೆ -ಪೂಜೆ ಮಾಡದ ಮಹಿಳೆಯೊಬ್ಬಳು ದಿನಾಲು ತನ್ನ ನೆಚ್ಚಿನ ಯೂಟ್ಯೂಬ್ ವಿಡಿಯೋಸ್ ಅನೇಕ ಬಾರಿ ನೋಡಿ ಪೂಜೆ ಮಾಡುವ ಆಸೆ ಚಿಗುರಿ ಈಗ ದಿನಾಲು ಪೂಜೆ ಮಾಡುತ್ತಾಳೆ. ಇದೆಲ್ಲಾ ಪದೇ ಪದೇ ಪೂಜೆ ವಿಡಿಯೋ ನೋಡಿ ಅದನ್ನೇ ಯೋಚಿಸಿದ ಫಲವಾಗಿದೆ.

ಇದರ ಅರ್ಥ ನಾವು ಯಾವ ಯಾವ ವಿಷಯವನ್ನು ಪದೇಪದೇ ಮಾಡುತ್ತೇವೆ ನೋಡುತ್ತೇವೆ ಕೇಳುತ್ತೇವೆ ಅದೇ ಆಲೋಚನೆಯಲ್ಲಿ ಮುಳುಗಿ ನಂತರ ಅದರ ಬಗ್ಗೆ ಆಸೆ ಹುಟ್ಟಿ, ಅದರ ಬಯಕೆ ಹುಟ್ಟುತ್ತದೆ. ಇದರ ಪರಿಣಾಮ ಒಳ್ಳೆಯದು ಇರಬಹುದು. ಕೆಟ್ಟದ್ದು ಇರಬಹುದು ಸಕಾರಾತ್ಮಕ ಆಲೋಚನೆಗಳಿದ್ದರೆ ಲಾಭದ ಜೊತೆ ಸಂತೋಷವಾಗಿರಬಹುದು. ಆದರೆ ನಕಾರಾತ್ಮಕ ಪುನರಾವರ್ತನೆಗೊಂಡರೆ ಕಷ್ಟ. ಆದ್ದರಿಂದ ನಮ್ಮ ಆಲೋಚನೆಗಳಿಗೆ ನಾವು ಜವಾಬ್ದಾರಿ ಆಗಿ ತಗೊಳ್ಳಬೇಕು. ಅದನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಬೇಕು.

ಪುನರಾವರ್ತನೆಯಿಂದ ಬಯಕೆ ಹುಟ್ಟುತ್ತದೆ. ಬಯಕೆಯಿಂದ ಲಗಾವು. ಬಯಸಿದ್ದು ಸಿಗದಿದ್ದರೆ ಹತಾಶೆ, ಹತಾಶೆಯಿಂದ ಕೋಪ, ಕೋಪದಿಂದ ದುಃಖ ಸಂಭವಿಸುತ್ತದೆ. ಇವೆಲ್ಲವೂ ಸರಪಳಿಯ ಹಾಗೆ ಒಂದಕ್ಕೊಂದು ಕೂಡಿರುತ್ತದೆ. ಮೊದಲನೆಯ ಕೊಂಡಿ ಅಂದರೆ ಪುನರಾವರ್ತನೆ ಸ್ಥಗಿತಗೊಂಡರೆ ಅದು ಮುಂದಿನದ ಭಾವನೆಗಳಿಗೆ ಎಡೆ ಮಾಡಿಕೊಡುವುದಿಲ್ಲ. ಆದ್ದರಿಂದ ನಾವು ಜಾಗರೂಕರಾಗಿ ನಮ್ಮ ನಕಾರಾತ್ಮಕ ಆಲೋಚನೆಗಳನ್ನು ತಳ್ಳಬಹುದು. ಸಕಾರಾತ್ಮಕವಾದರೆ ಈ ಅಭ್ಯಾಸಗಳನ್ನು ಮುಂದುವರಿಸಿ ನಾವು ಯಶಸ್ವಿಯಾಗಬಹುದು ಆದರೆ ಅದೇ ನಕಾರಾತ್ಮಕವಾಗಿ ಬಳಸಿದರೆ ಹಳ್ಳಕ್ಕೆ ಬೀಳುವುದು ಖಚಿತ. ಇಲ್ಲಿ ಗಾಂಧೀಜಿಯ ಮೂರು ಮಂಗಗಳ ನೆನಪು ಬರುತ್ತದೆ. ಕೆಟ್ಟದ್ದನ್ನ ಕೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದ್ದನ್ನ ಮಾತನಾಡಬೇಡಿ. ಯಾವಾಗ ನಾವು ಇದನ್ನೆಲ್ಲಾ ಮಾಡುವುದಿಲ್ಲವೋ ಆಗ ಮಾತ್ರ ಸಫಲರಾಗಲು ಸಾಧ್ಯ. ಪುನರಾವರ್ತನೆಯಾಗುವುದಕ್ಕೆ ಬಳಸಬೇಕೆಂದು ನಾವು ನಿರ್ಧರಿಸಬೇಕಾಗಿದೆ. ಪುನರಾವರ್ತನೆ ಯೋಚನೆಗೆ ಎಲ್ಲಿಗೆ ಫುಲ್ ಸ್ಟಾಪ್ ಹಾಕಬೇಕು ಹಾಗೂ ಎಲ್ಲಿ ಅದನ್ನ ಮುಂದುವರಿಸಬೇಕು ಎಂಬುದನ್ನು ನಾವು ಅರಿಯಬೇಕು. ಬದುಕನ್ನು ಸಾರ್ಥಕಗೊಳಿಸಬೇಕು.

ಡಾ. ಹರ್ಷಾ ಕಾಮತ್

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!