Sunday, January 19, 2025
Sunday, January 19, 2025

ಅಸೂಯೆಯ ಬೇರನ್ನು ಕಿತ್ತು ಹಾಕಿ

ಅಸೂಯೆಯ ಬೇರನ್ನು ಕಿತ್ತು ಹಾಕಿ

Date:

ಶೀಶನು ಇಚ್ಚಿಸಿದ ಕೆಲಸ ತನ್ನ ಗೆಳೆಯನಿಗೆ ಸಿಕ್ಕಾಗ ಅವನಿಗೆ ಸಹಿಸಲಾಗಲಿಲ್ಲ. ಸುಲತಾಗೆ ತನ್ನ ಮಗಳಿಗೆ ಸಿಗಬೇಕಾದಂತಹ ಪ್ರೈಸ್ ಇನ್ನೊಬ್ಬ ಹುಡುಗಿಗೆ ಸಿಕ್ಕಾಗ ಹೊಟ್ಟೆಕಿಚ್ಚು ಬಂದಿತು. ಸುಮಿತನಿಗೆ ಇಷ್ಟವಾದ ಕಾರ್ ತನ್ನ ಸಂಬಂಧಿಕ ಅದೇ ಕಾರ್ ಅನ್ನು ತಕ್ಕೊಂಡದ್ದು ಬೇಸರವಾಯಿತು. ಜೀವನದಲ್ಲಿ ನಾವು ಇತರರ ಏಳಿಗೆಗೆ ಖುಷಿ ಪಡುತ್ತೇವೆ ನಿಜ, ಆದರೆ ನಮಗೆ ಬೇಕಾದದ್ದು ಅವರಿಗೆ ಸಿಕ್ಕಾಗ ಮಾತ್ರ ಅಸೂಯೆ ಪಡುತ್ತೇವೆ. ಈ ಜೀವನಚಕ್ರದಲ್ಲಿ ಕೆಲವೊಮ್ಮೆ ಸುಖ ನೆಮ್ಮದಿ ಖುಷಿಯಾದರೆ ಇನ್ನು ಕೆಲವೊಮ್ಮೆ ಸಂತಾಪ ಬೇಜಾರು ಸಹಿಸಬೇಕಾಗುತ್ತದೆ. ನಾವು ಇಚ್ಛಿಸಿದ್ದು ಸಿಕ್ಕರೆ ಖುಷಿ ಪಡುತ್ತೇವೆ. ಆಗ ನಮ್ಮ ಸುತ್ತಲಿನ ವಾತಾವರಣವನ್ನು ಹರ್ಷದಿಂದ ತುಂಬುತ್ತೇವೆ. ಅದೇ ಪರಿಸ್ಥಿತಿ ಸರಿಯಾಗಿಲ್ಲದಿದ್ದರೆ ನಮ್ಮ ಸುತ್ತಲಿನ ಪರಿಸರವನ್ನು ಕೂಡ ಹಾಳು ಮಾಡುತ್ತೇವೆ. ಇದು ನಮ್ಮ ವೈಯಕ್ತಿಕ ವಿಷಯ ಆಯ್ತು.

ಇದನ್ನು ಇನ್ನೊಂದು ರೀತಿಯಲ್ಲಿ ನೋಡೋಣ. ನಮ್ಮ ಖುಷಿಯಲ್ಲಿ ಖುಷಿ ಪಡುತ್ತೇವೆ ಅದೇ ಖುಷಿ ನಮ್ಮ ಗೆಳೆಯರಿಗೂ ಅಥವಾ ಸಂಬಂಧಿಕರಿಗೂ ಸಿಕ್ಕಾಗ ಅಸೂಯೆ ಪಡುವುದು ಸಹಜ. ಅವರ ಖುಷಿಯಲ್ಲಿ ನಾವು ಭಾಗಿಯಾಗಿದ್ದೆವೆಯೇ ಯೋಚಿಸಿ ನೋಡಿ. ಇತರರ ಏಳಿಗೆಯಲ್ಲಿ ಅವರ ಸ್ಥಾನಮಾನಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಿದ್ದೆವೆ ಯೋಚಿಸಿ. ನಮಗೆ ಸಿಗಲಿಲ್ಲವೆಂದು ಬೇಸರದಲ್ಲಿ ಇರುತ್ತೇವೆ. ನಮಗೆ ಸಿಗಬೇಕಾದದ್ದು ಅವರಿಗೆ ಸಿಕ್ಕಿದೆ ಎಂದು ಅಸೂಯೆ ಪಡುತ್ತೇವೆ. ಒಂದು ಕ್ಷಣ ನಮ್ಮ ಬಗ್ಗೆ ಆಲೋಚನೆ ಮಾಡುವುದನ್ನು ನಿಲ್ಲಿಸಿ ಬೇರೆಯವರಿಗೆ ಆದ ಖುಷಿಯನ್ನು ಅನುಭವಿಸಿ ನೋಡಿ. ನಮಗೆ ಸಿಗದಿದ್ದರೂ ಪರವಾಗಿಲ್ಲ ಇತರರಿಗೆ ಸಿಕ್ಕ ಸಂತೋಷವನ್ನು ಸ್ವೀಕರಿಸಿ ನೋಡಿ. ಅವರ ಆನಂದದಲ್ಲಿ ಭಾಗಿಯಾಗಿ.

ಬದುಕಿನಲ್ಲಿ ಅಸೂಯೆ ಬರಲು ಮೊದಲ ಕಾರಣ ನಾವು ಅವರಷ್ಟು ಸಾಧಿಸಿಲ್ಲವೆಂಬುದು. ಇದರಲ್ಲಿ ಗಮನಿಸಬೇಕಾದ ಮುಖ್ಯ ಅಂಶವೇನೆಂದರೆ ಅಸೂಯೆ ಬರಲು ಒಳಗಿನ ಪ್ರಮುಖ ಕಾರಣ ನಾವು ನಮ್ಮನ್ನು ಪ್ರೀತಿಸುತ್ತಿಲ್ಲವೆಂಬುದು. ನಮಗೆ ನಮ್ಮ ಬಗ್ಗೆ ಕೀಳರಿಮೆ ಇರುವುದರಿಂದ. ನಮಗೆ ನಮ್ಮ ಕೀಳರಿಮೆಯ ಅರಿವಿಲ್ಲ. ನಮ್ಮ ಅಂತಃಶಕ್ತಿಯ ಬಗ್ಗೆ, ಒಳ್ಳೆತನದ ಬಗ್ಗೆ ಅರಿವಿಲ್ಲ. ಹೊರಗಿನಿಂದ ಇದು ನಿಜವಲ್ಲವೆಂದು ಅನಿಸಬಹುದು. ಆದರೆ ಇದು ನಿಜವಾದ ಕಾರಣ. ಸ್ವಂತ ಮೌಲ್ಯಗಳನ್ನು ಗ್ರಹಿಸಿದಾಗ ನಮ್ಮ ಬಗ್ಗೆ ಜ್ಞಾನ ಬಂದಾಗ ನಮ್ಮ ಬೆಲೆಯನ್ನು ಅರಿತುಕೊಂಡಾಗ ತೃಪ್ತಿ ಎಂಬುದು ಆಗುವುದು. ಆಗ ನಮಗೆ ಇತರರ ಮೇಲೆ ಅಸೂಯೆ ಬರುವುದು ನಿಲ್ಲುತ್ತದೆ. ಇತರರ ಸಂತೋಷವೂ ನಮ್ಮ ಸಂತೋಷವಾಗಿ ಬಿಡುತ್ತದೆ.

ಯೋಗದಲ್ಲಿ ಹೇಳಿರುವಂತಹ ಯಮ ನಿಯಮದ ಪಾಲನೆ ಧ್ಯಾನದ ಮೂಲಕ ಇದನ್ನು ಸಾಧಿಸಬಹುದು. ಯಮ ಎಂದರೆ ಅಹಿಂಸೆ, ಪರಧನ ಆಸೆಪಡದಿರುವುದು, ಪರನಿಂದೆ ಮಾಡದೆ ಇರುವುದು. ನಿಯಮವೆಂದರೆ ಇಂದ್ರಿಯ ನಿಗ್ರಹ. ಇದರಿಂದ ನಮ್ಮ ಭಾವನೆಗಳು ಹಿಡಿತದಲ್ಲಿರುತ್ತದೆ. ಧ್ಯಾನದಿಂದ ಮನಸ್ಸು ಸತ್ಯದ ಕಡೆ ತಿರುಗುತ್ತದೆ. ಎಲ್ಲಾ ಜೀವಿಗಳ ಮೇಲೆ ಪ್ರೀತಿ ಹುಟ್ಟುತ್ತದೆ. ಆಗ ಅಸೂಯೆ ಹುಟ್ಟುವುದಿಲ್ಲ. ಇನ್ನೊಬ್ಬರ ಏಳಿಗೆ ಕಂಡು ಅಸೂಯೆ ಪಡೋ ಜನಗಳು ಯಾವತ್ತೂ ತಮ್ಮ ಜೀವನದಲ್ಲಿ ಏಳಿಗೆ ಆಗೋಕೆ ಸಾಧ್ಯನೇ ಇಲ್ಲ.

ಡಾ. ಹರ್ಷಾ ಕಾಮತ್

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!