Home ಅಂಕಣ ನಾವು ಹೀಗೇಕೆ ಆಲೋಚನೆ ಮಾಡುತ್ತೇವೆ

ನಾವು ಹೀಗೇಕೆ ಆಲೋಚನೆ ಮಾಡುತ್ತೇವೆ

338
0

ಮಗೆ ಏನಾದರೂ ಕೆಟ್ಟದಾಯಿತೆಂದರೆ ಬೇರೆಯವರ ಕೆಟ್ಟ ದೃಷ್ಟಿ ಬಿದ್ದಿದ್ದರಿಂದ ಹೀಗಾಯ್ತು ಎಂದು ನಂಬುತ್ತೇವೆ. “ಅವರು ಹಾಗೆ ಹೇಳಿದರೆ ನನಗೆ ದೃಷ್ಟಿ ಬೀಳುತ್ತೆ. ಅವರು ನೋಡಿದರೆ ದೃಷ್ಟಿ ಬೀಳುತ್ತೆ” ಹೀಗೆ ಏನಾದರೂ ಕೆಟ್ಟದ್ದು ಆದರೆ ಬೇರೆಯವರ ಕೆಟ್ಟ ದೃಷ್ಟಿಯಿಂದಲೇ ಆದದ್ದು ಎಂಬ ನಂಬಿಕೆ ನಮ್ಮದು. ಇದು ನಿಜವೇ ನೋಡೋಣ. ಹಿಂದಿನ ಕಾಲದಲ್ಲಿ ಮಗುವಿಗೆ ದೃಷ್ಟಿ ತೆಗೆಯುವ ಪದ್ಧತಿಯಿತ್ತು. ಎಲ್ಲರ ಹೆಸರು ಹೇಳಿ ದೃಷ್ಟಿ ತೆಗೆಯುತ್ತಿದ್ದರು. ಅದು ನಿಜವೋ ಸುಳ್ಳೋ ಅದರ ಬಗ್ಗೆ ನಾನು ಪ್ರಶ್ನಿಸುವುದಿಲ್ಲ. ನಾನು ನನ್ನ ಮಕ್ಕಳಿಗೆ ದೃಷ್ಟಿ ಬೀಳುತ್ತೆ ಎಂದು ದೃಷ್ಟಿ ತೆಗೆಯಲಿಲ್ಲ. ಆದರೆ ಇತರರ ವತ್ತಾಯದ ಮೇಲೆ ನನಲ್ಲಿ ಭಯ ಉಂಟಾಗಿ ಒಂದು ಅಥವಾ ಎರಡು ಬಾರಿ ದೃಷ್ಟಿ ತೆಗೆದದ್ದು ಉಂಟು. ನನ್ನ ನೆಮ್ಮದಿಗೋಸ್ಕರ ಅಷ್ಟೇ. ದೃಷ್ಟಿ ತೆಗೆದ ಮೇಲೆ ಆ ಹೆದರಿಕೆ ಹೋಗುತ್ತಿತ್ತು. ಆದರೆ ಇದರ ಬಗ್ಗೆ ದೀರ್ಘವಾಗಿ ಈಗ ಆಲೋಚನೆ ಮಾಡಿದರೆ ಇಲ್ಲಿ ಆಗುತ್ತಿರುವುದೇನು ಎಂದು ಯೋಚಿಸೋಣ.

ನಾನು ದೃಷ್ಟಿ ಬೀಳುತ್ತೆ ಎಂದು ನಂಬಿದವಳಲ್ಲ. ಆದರೆ ಕೆಲವರು ಇದನ್ನು ಎಷ್ಟು ನಂಬುತ್ತಾರೆ ಎಂದರೆ ಏನೇ ಕೆಟ್ಟದ್ದಾಗಲಿ ಅದು ಬೇರೆಯವರ ದೃಷ್ಟಿಯಿಂದಲೇ ಎಂಬ ನಂಬಿಕೆ. ಇದು ಎಷ್ಟು ಸರಿ ನನಗೆ ಗೊತ್ತಿಲ್ಲ ಆದರೆ ಜೀವನ ಎಂದರೆ ಸುಖ-ದುಃಖಗಳ ಸಮ್ಮಿಶ್ರಣ. ಆದ್ದರಿಂದ ಏರುಪೇರು ಆಗುವುದು ಸಹಜ. ಅದನ್ನು ಒಪ್ಪಿಕೊಂಡು ನಿಭಾಯಿಸುವುದು ಜೀವನ. ಅದನ್ನು ಬಿಟ್ಟು ಅವರ ಇವರ ದೃಷ್ಟಿಯಿಂದಲೇ ಕೆಟ್ಟದಾಯಿತು ಎಂಬ ನಂಬಿಕೆ ಸುಳ್ಳು ಎಂಬುದು ನನ್ನ ಅನಿಸಿಕೆ. ಇದರ ಪರಿಣಾಮ ಅವರ ದೃಷ್ಟಿಯಿಂದ ಕೆಟ್ಟದಾಯಿತು ಎಂದು ನಂಬಿ ಆ ವ್ಯಕ್ತಿಯನ್ನು ದ್ವೇಷಿಸಲು ಆರಂಭಿಸುತ್ತೇವೆ. ಆ ವ್ಯಕ್ತಿಯ ಜೊತೆ ಇರುವ ಸಂಬಂಧ ಕೆಡುವುದು ಮಾತ್ರವಲ್ಲ, ಅವರು ಎದುರಿಗೆ ಬಂದರೆ ಹೆದರಲು ಶುರು ಮಾಡುತ್ತೇವೆ. ಹೀಗೆ ಜೀವನವಿಡೀ ಹೆದರಿಕೆಯೇ ಜೀವನವಾಗಿಬಿಡುತ್ತದೆ. ಇನ್ನೊಂದು ವಿಷಯ ಏನೆಂದರೆ, ನಾವು ಏನನ್ನು ನಂಬುತ್ತೇವೆ ಅದು ನಿಜ ಆಗುವುದು. ಅಂದರೆ ಅವರು ನೋಡಿದ ತಕ್ಷಣ ನನ್ನ ಮಗುವಿಗೆ ಜ್ವರ ಬರುತ್ತದೆ ಎಂದು ನಂಬಿದ ತಾಯಿ ತನ್ನ ಮನಸ್ಸಿನಲ್ಲಿ ಅವಳು ನೋಡಿದರೆ ಜ್ವರ ಬರುತ್ತದೆ ಎಂದು ಪದೇಪದೇ ಹೇಳಿದಾಗ ಅದು ನಿಜವಾಗುತ್ತದೆ. ಮಗುವಿಗೆ ಇಲ್ಲಿ ತಾಯಿಯ ನಂಬಿಕೆ ನಿಜವಾಗುವುದು ಅಷ್ಟೇ. ಇಲ್ಲಿ ಕೆಟ್ಟ ದೃಷ್ಟಿ ಬಿದ್ದಿದ್ದರಿಂದ ಜ್ವರ ಬಂದಿದ್ದಲ್ಲ ಈ ತಾಯಿ ನಂಬಿದ ವಿಷಯ ಸತ್ಯವಾಗುತ್ತದೆ ಅಷ್ಟೇ. ಆದ್ದರಿಂದ ನಾವು ಯಾವಾಗಲೂ ಒಳ್ಳೆಯದರ ಬಗ್ಗೆ ಆಲೋಚನೆ ಮಾಡಬೇಕು. ಆಗ ಒಳ್ಳೆಯದೇ ಆಗುತ್ತದೆ.

ಕೆಟ್ಟ ದೃಷ್ಟಿ ಇದೆ ಅಂತನೆ ನಂಬಿಗೆ ಇದ್ದರೆ, ಒಳ್ಳೆಯ ದೃಷ್ಟಿ ಕೂಡ ಇರಬೇಕು ಅಲ್ಲವೇ? ಕೆಟ್ಟ ದೃಷ್ಟಿಯನ್ನು ಹೊಡೆದು ಹಾಕಲು ನಮ್ಮೊಳಗೆ ಒಳ್ಳೆಯ ದೃಷ್ಟಿಯನ್ನು ಬೇಳೆಸೋಣ. ನಮಗೆ ಒಳ್ಳೆಯದಾದರೆ ಅದು ನಮ್ಮ ಒಳ್ಳೆಯ ಕರ್ಮದಿಂದ ಆದರೆ ಕೆಟ್ಟದ್ದಾದರೆ ಬೇರೆಯವರ ದೃಷ್ಟಿಯಿಂದ ಎಂದು ಅದರ ಹೊಣೆ ಬೇರೆಯವರ ಮೇಲೆ ಹಾಕುತ್ತೇವೆ. ಕೆಟ್ಟದ್ದು ಕೂಡ ನಮ್ಮ ಕರ್ಮಫಲವೆ ಅಲ್ಲವೇ. ಜೀವನದಲ್ಲಿ ಏನೇ ಆಗಲಿ ಅದರ ಜವಾಬ್ದಾರಿ ಸ್ವೀಕಾರ ಮಾಡಬೇಕಾದದ್ದು ನಾವೇ. ನಮ್ಮ ಬದುಕಿಗೆ ನಾವೇ ಹೊಣೆ ಬೇರೆಯವರ ಮೇಲೆ ತಪ್ಪು ಹಾಕಿದ ತಕ್ಷಣ ನಾವು ಒಳ್ಳೆಯವರು ಆಗುವುದಿಲ್ಲ. ಒಳ್ಳೆಯದು ಅಥವಾ ಕೆಟ್ಟದು ನಾವೇ ಮಾಡಿದ್ದು ಎಂದು ಒಪ್ಪಿಕೊಳ್ಳಬೇಕು ಅಷ್ಟೇ.

-ಡಾ. ಹರ್ಷಾ ಕಾಮತ್

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.