Wednesday, January 22, 2025
Wednesday, January 22, 2025

ಪುರಿ ಶ್ರೀ ಜಗನ್ನಾಥ ದರ್ಶನ

ಪುರಿ ಶ್ರೀ ಜಗನ್ನಾಥ ದರ್ಶನ

Date:

ಚಾರ್ ಧಾಮದಲ್ಲಿ ಒಂದಾಗಿದ್ದ ಜಗತ್ಪ್ರಸಿದ್ಧ ಜಗನ್ನಾಥ್ ಪುರಿದ ದರ್ಶನ ಈ ವರ್ಷ ಮೇಯಲ್ಲಿ ದೊರೆಯಿತು. ಅತ್ಯುತ್ಸಾಹದಿಂದ ನಾವು ನಾಲ್ಕು ಮಂದಿ ಹೊರಟೆವು. ಮಂಗಳೂರಿನಿಂದ ಹೈದರಾಬಾದ್ ಆಗಿ ಭುವನೇಶ್ವರ್ ಫ್ಲೈಟ್ ನಲ್ಲಿ ಪ್ರಯಾಣ ಮಾಡಿ ತಲುಪಿದೆವು. ಕಾರ್ಕಳದಿಂದ ಬೆಳಿಗ್ಗೆ 5 ಹೊರಟ ನಾವು ಪುರಿಗೆ ತಲುಪಿದಾಗ ರಾತ್ರಿ ಒಂಬತ್ತು. ಕಾರ್ಕಳದಿಂದ ಬಜ್ಪೆ ಏರ್ಪೋರ್ಟ್ ಗೆ ಬೆಳಿಗ್ಗೆ 4.45 ಗೆ ಹೊರಟೆವು. ಮಂಗಳೂರಿನಿಂದ ನಮಗೆ 6.45 ಗೆ ಫ್ಲೈಟ್ ಹೈದ್ರಾಬಾದಿಗೆ. ಹೈದರಾಬಾದ್ ಗೆ ಬೆಳಿಗ್ಗೆ 9:30 ಗಂಟೆಗೆ ತಲುಪಿದೆವು. ನಂತರ ಮಧ್ಯಾಹ್ನ 3:30ಗೆ ಹೈದರಾಬಾದ್ ನಿಂದ ಭುವನೇಶ್ವರಕ್ಕೆ ಫ್ಲೈಟ್ ಇದ್ದದ್ದು. ಭುವನೇಶ್ವರ ತಲುಪುವಾಗ ರಾತ್ರಿ ಏಳು. ಏಳು ಗಂಟೆಗೆ ಟ್ಯಾಕ್ಸಿ ಹಿಡಿದು ಪುರಿಗೆ ತಲುಪಿದಾಗ ರಾತ್ರಿ 9 ಆಗಿತ್ತು. ಹೀಗೆ ಕಾರ್ಕಳದಿಂದ ಭುವನೇಶ್ವರ ತಲುಪಲು ಒಂದು ಇಡೀ ದಿನ ಬೇಕಾಯಿತು.

ನಾವು ಬುಕ್ ಮಾಡಿದ ಲಾಡ್ಜ್ ಸ್ವಲ್ಪವೂ ಚೆನ್ನಾಗಿರದ ಕಾರಣ ಪಕ್ಕದಲ್ಲಿದ್ದ ಇನ್ನೊಂದು ಲಾಡ್ಜ್ ಗೆ ಹೋದೆವು. ಬುಕ್ ಮಾಡಿದ ಹೊಟೇಲಿನ ಫೋಟೋ ಹಾಗೂ ನಿಜವಾಗಿ ಅಲ್ಲಿರುವ ರೂಮ್ ಗೆ ಅಜಗಜಾಂತರ ವ್ಯತ್ಯಾಸವಿತ್ತು. ಬುಕ್ ಮಾಡಿದ ಹಣ ವಾಪಸ್ ಅವರು ನೀಡಲಿಲ್ಲ. ಆಯ್ತು ಬೇಡವೆಂದು ನಿಮಗೆ ದೇವರು ಒಳ್ಳೆಯದು ಮಾಡಲಿ ಎಂದು ನಾವು ಹೊರಟೆವು. ಆದರೆ ಅವರು ಪದೇ ಪದೇ ಕಾಲ್ ಮಾಡಿ ನನ್ನ ಯಜಮಾನರಿಗೆ ಕಿರಿಕಿರಿ ಮಾಡ್ತಾ ಇದ್ರು. ನಾನು ಫೋನ್ ರಿಸೀವ್ ಮಾಡೋದು ಬೇಡ ಸೈಲೆಂಟ್ ನಲ್ಲಿ ಇಡಿ ಎಂದು ಹೇಳಿದೆ ಹಾಗೆ ಮಾಡಿದರು.

ಒಡಿಶಾಗೆ ಬಂದ ಮೊದಲ ದಿನದ ಅನುಭವ ಕಹಿಯಾಗಿತ್ತು. ಇರಲಿ ಜೀವನದಲ್ಲಿ ಇದು ಇದ್ದದ್ದೇ ಎಂದು ನಮ್ಮ ಊಟ ಮುಗಿಸಿ ನಮ್ಮ ಮುಂದಿನ ಪ್ಲಾನ್ ಮಾಡಿದೆವು. ಜಗನ್ನಾಥ ದರ್ಶನಕ್ಕೆ ಬೆಳಿಗ್ಗೆ 6 ಗಂಟೆಗೆ ಹೋದರೆ ಕ್ಯೂ ಕಮ್ಮಿ ಇರುವುದೆಂದು ನಾವು ಬೇಗ ಎದ್ದು ಸ್ನಾನ ಮಾಡಿ ಹೊರಟೆವು. ಒಂದು ಗಂಟೆ ಕ್ಯೂನಲ್ಲಿ ನಿಂತು ಏಳು ಗಂಟೆಗೆ ದೇವರ ದರ್ಶನ ಮಾಡಿದೆವು. ಒಳಗೆ ಹೋದಾಗ ಎಷ್ಟು ರಷ್ ಅಂದರೆ ಉಸಿರಾಡಲು ಕಷ್ಟವಾಗುತ್ತಿತ್ತು. ಭಿನ್ನ ರೂಪದ ಜಗನ್ನಾಥ ಬಲರಾಮ ಹಾಗೂ ಸುಭದ್ರಾ ದೇವರ ದೊಡ್ಡ ಮೂರ್ತಿಯನ್ನು ಕಂಡು ಧನ್ಯನಾದೆ. ಕಷ್ಟಪಟ್ಟು ನಮಸ್ಕರಿಸಿದೆ ಕೈ ಎತ್ತಲು ಆಗದ ಪರಿಸ್ಥಿತಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬೇಡಿದೆ. ಇಲ್ಲಿನ ದೇವರ ರೂಪವೇ ಅನನ್ಯ ಹೀಗೆ ಯಾಕೆ ಆಯಿತು. ಈ ಕತೆಯನ್ನು ನಮಗೆ ಕೋನಾರ್ಕನಲ್ಲಿ ಆ ಗೈಡ್ ಹೇಳಿದ್ದು. ಪ್ರತಿ ವರ್ಷ ರಥಯಾತ್ರೆ ನಡೆಯುತ್ತದೆ. ಪ್ರತಿ ಸಲವೂ ಯಾತ್ರೆಗೆ ಬಳಸುವಂತಹ ರಥವನ್ನು ಹೊಸದಾಗಿ ಮಾಡುತ್ತಾರೆ. ನಾವು ಹೋದಾಗ ರಥಯಾತ್ರೆಗೆ ರಥವನ್ನು ತಯಾರಿಸುತ್ತಿದ್ದರು. ರಥಯಾತ್ರೆಯ ಬಳಿಕ ಆ ರಥವನ್ನು ರಥದ ಕಟ್ಟಿಗೆಯನ್ನು ದೇವಸ್ಥಾನದ ಅಡಿಗೆಗೆ ಬಳಸುತ್ತಾರೆ. ರಥ ಯಾತ್ರೆಗೆ ಲಕ್ಷಗಟ್ಟಲೆ ಜನ ಸೇರುತ್ತಾರೆ.

ಇದರ ಕಥೆ ಹೀಗಿದೆ. ರಾಜ ಇಂದ್ರದ್ಯುಮ್ನ ಮಹಾನ್ ವಿಷ್ಣು ಭಕ್ತನಾಗಿದ್ದ. ಮರಕತದಿಂದ ನೀಲ ಮಾದವ ನೀಲಗಿರಿಯ ಅರಸನಾದ ವಿಶ್ವವಸು ಅರ್ಜಿಸುತ್ತಿದ್ದ. ಅದೇ ರೀತಿಯ ನೀಲ ಮಾಧವ ವಿಗ್ರಹವನ್ನು ಹೇಗಾದರೂ ಪಡೆಯಬೇಕೆಂದು ಆ ವಿಗ್ರಹವಿರುವ ಸ್ಥಳಕ್ಕೆ ಬಂದು ನೋಡಿದಾಗ ಆ ವಿಗ್ರಹವೇ ಕಣ್ಮರೆಯಾಯಿತು. ಬೇಸರಗೊಂಡು ಸಾಯಲು ಹೊರಟ ರಾಜನಿಗೆ ಅಶರೀರವಾಣಿಯೊಂದು ಕೇಳಿಸಿ ಅದರ ಆಜ್ಞೆಯಂತೆ ವಿಷ್ಣು ದೇವಾಲಯ ನಿರ್ಮಾಣ ಮಾಡಿದನು. ನಾರದರು ಅದರಲ್ಲಿ ನರಸಿಂಹ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದರು. ಒಂದು ರಾತ್ರಿ ರಾಜನಿಗೆ ಸ್ವಪ್ನ ಬಂದಿತು. ಸಮುದ್ರದಲ್ಲಿ ತೇಲಿ ಬರುವ ಮರದ ದಿಮ್ಮಿ ಯಿಂದ ವಿಷ್ಣು ಬಲರಾಮ ಸುಭದ್ರಯ್ಯ ಮೂರ್ತಿಯನ್ನು ನಿರ್ಮಿಸುವಂತೆ ನಿರ್ದೇಶಿಸಿದನು. ರಾಜ ಹಾಗೆಯೇ ಮಾಡಿದನು. ಆಗ ಬಡಗಿಯ ವೇಷದಲ್ಲಿ ಬಂದ ದೇವಶಿಲ್ಪಿ ವಿಶ್ವಕರ್ಮನು ತಾನೇ ವಿಗ್ರಹವನ್ನು ನಿರ್ಮಾಣ ಮಾಡುತ್ತೇನೆ. ಆದರೆ ಪೂರ್ಣವಾಗುವವರೆಗೆ ಯಾರೂ ಕೋಣೆಯ ಒಳಗೆ ಬರಬಾರದೆಂದು ಸ್ಪಷ್ಟವಾಗಿ ಅಪ್ಪಣೆ ಮಾಡಿದನು.

ದಿನಾಲು ಕೆಲಸದ ಶಬ್ದ ಕೇಳುತ್ತಿತ್ತು. ಆದರೆ ಕೆಲವು ದಿನಗಳ ಬಳಿಕ ಸದ್ಯ ಕೇಳದ ಕಾರಣ ಮಹಾರಾಜನು ಬಾಗಿಲನ್ನು ತೆರೆದಸಿದನು. ಆಗ ಅಲ್ಲಿ ವಿಶ್ವಕರ್ಮನು ಅದೃಶ್ಯನಾಗಿದ್ದನು. ಪ್ರತಿಮೆಗಳು ಅಪೂರ್ಣಗೊಂಡಿದ್ದವು. ಅದೇ ಸಮಯದಲ್ಲಿ ಅದೇ ಅಪೂರ್ಣಗೊಂಡ ವಿಗ್ರಹಗಳನ್ನು ಪ್ರತಿಷ್ಠಾಪ ಮಾಡಲು ದೈವದ ಅಪ್ಪಣೆಯಾಯಿತು. ಇದೇ ಕಾರಣದಿಂದ ಜಗನ್ನಾಥ್ ದೇವರಿಗೆ ದಾರು ಬ್ರಹ್ಮ ಎಂದು ಹೆಸರು ಬಂತು. ಹೀಗೆ ಈಗಲೂ ಕೂಡ ಅಪೂರ್ಣಗೊಂಡ ವಿಗ್ರಹವನ್ನು ಪೂಜಿಸುತ್ತಾರೆ. ಪ್ರತಿ 12 ವರ್ಷಗಳಿಗೊಮ್ಮೆ ಮೂರ್ತಿಯನ್ನು ಬದಲಿಸುತ್ತಾರೆ. ಮಧ್ಯರಾತ್ರಿ 12 ಗಂಟೆಗೆ 76ರ ವರ್ಷದ ಹರೆಯದ ವ್ಯಕ್ತಿಯು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ದೇವರ ಹೃದಯವನ್ನು ಬದಲಿಸಿ ಇನ್ನೊಂದು ಮೂರ್ತಿಯಲ್ಲಿ ಸ್ಥಾಪಿಸುತ್ತಾನೆ. ಆ ವ್ಯಕ್ತಿಯು ಮುಂದಿನ ನಾಲ್ಕು ವರ್ಷಗಳಲ್ಲಿ ಅಸು ನೀಗುವ ಕಾರಣದಿಂದಾಗಿ 76 ವರ್ಷದ ವ್ಯಕ್ತಿಯನ್ನು ಹುಡುಕಿ ಆ ಕೆಲಸವನ್ನು ಮಾಡಿಸುತ್ತಾರೆ. ಈ ಕಥೆಯನ್ನು ಕೇಳಿ ನಾನು ಧನ್ಯನಾದೆ. ದರುಶನ ಮಾಡಿ ಪ್ರಸಾಸದವನ್ನು ಖರೀದಿಸಿ ನಮ್ಮ ಲಾಡ್ಜಿಗೆ ತೆರಳಿದೆವು.

-ಡಾ. ಹರ್ಷಾ ಕಾಮತ್

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಪ್ಪೂರು: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ತ್ಯಾಜ್ಯದ ರಾಶಿ; ಉಡುಪಿ ಜಿಲ್ಲೆಯ ಸ್ವಚ್ಛತೆಗೆ ಇದೊಂದು ದೊಡ್ಡ ಕಪ್ಪುಚುಕ್ಕೆ

ಉಪ್ಪೂರು, ಜ.21: ಒಂದೆಡೆ ದೇಶಾದ್ಯಂತ ಸ್ವಚ್ಛತೆಯ ಕಾಳಜಿಯ ಬಗ್ಗೆ ಸರಣಿ ಕಾರ್ಯಕ್ರಮಗಳು...

ಪಾಳೆಕಟ್ಟೆ: ನೂತನ ಬಸ್ಸು ತಂಗುದಾಣಕ್ಕೆ ಭೂಮಿ ಪೂಜೆ

ಕೊಡವೂರು, ಜ.21: ಕೊಡವೂರು ವಾರ್ಡಿನ ಪಾಳೆಕಟ್ಟೆಯಲ್ಲಿ ಬಸ್ಸು ತಂಗುದಾಣಕ್ಕೆ ನಗರಸಭಾ ಸದಸ್ಯರಾದ...

ಸಂಚಾರ ಪ್ರಜ್ಞೆಯು ಜೀವನದ ಭಾಗವಾಗಬೇಕು: ಮನೋಹರ್ ಹೆಚ್ ಕೆ

ಮಣಿಪಾಲ, ಜ.21: ಮಾಹೆಯ ಎಂಐಟಿ, ಎನ್‌ಎಸ್‌ಎಸ್ ಘಟಕಗಳು, ಉಡುಪಿ ಜಿಲ್ಲಾ ಪೊಲೀಸ್​...
error: Content is protected !!