Monday, January 20, 2025
Monday, January 20, 2025

ಸೆಲ್ಫ್ ಡೌಟ್ ಬಿಟ್ಟು ಬಿಡಿ

ಸೆಲ್ಫ್ ಡೌಟ್ ಬಿಟ್ಟು ಬಿಡಿ

Date:

ದೊಡ್ಡ ದೊಡ್ಡ ಕನಸುಗಳನ್ನು ಹೊತ್ತುಕೊಂಡು.. ‘ನನ್ನಿಂದ ಇದು ಸಾಧ್ಯವಿಲ್ಲ, ನನ್ನ ಹಣೆಬರಹ ನನ್ನ ಜೊತೆಗಿರೋದಿಲ್ಲ’ ವೆಂದು ಯೋಚಿಸುತ್ತಿದ್ದರೆ ನಮ್ಮ ಕನಸುಗಳು ನನಸಾಗುವುದಾದರೂ ಹೇಗೆ ಹೇಳಿ? ಕನಸೇನೋ ಕಟ್ಟುತ್ತೀರಿ ಆದರೆ ಅದಕ್ಕೆ ಮುಖ್ಯವಾದ ಆತ್ಮಸ್ಥೈರ್ಯ ಬೇಕಲ್ಲವೇ? ಈ ಸೆಲ್ಫ್ ಡೌಟ್ (self doubt) ಎಂಬುದು ನಮ್ಮ ಜೀವನದಲ್ಲಿ ನಮ್ಮನ್ನು ಗುರಿಯಿಂದ ವಿಚಲಿತಗೊಳಿಸುತ್ತದೆ. ನಮ್ಮ ಮೇಲೆಯೇ ನಮಗೆ ನಂಬಿಕೆ ಇಲ್ಲದ ಮೇಲೆ ಇತರರು ನಮ್ಮ ಮೇಲೆ ಯಾವ ಆಧಾರದ ಮೇಲೆ ನಂಬಿಕೆ ಇಟ್ಟಾರು? ಜೀವನದಲ್ಲಿ ನಾವು ಅನೇಕ ವ್ಯಕ್ತಿಗಳನ್ನು ನೋಡುತ್ತೇವೆ, ಆದರೆ ನಾವು ಕೂಡ ಹಾಗೆ ಆಗಬಹುದೆಂದು ಯೋಚಿಸುವುದು ಕಡಿಮೆ. ಅವರ ಅದೃಷ್ಟ ಚೆನ್ನಾಗಿತ್ತು ಎಂದು ಹೇಳಿಬಿಟ್ಟು ನಮ್ಮ ಪ್ರಯತ್ನ ನಾವು ಮಾಡುವುದೇ ಇಲ್ಲ. ನಮಗೆ ಸಾಧ್ಯವೇ ಇಲ್ಲವೆಂದು ಕೂತುಬಿಡುತ್ತೇವೆ.

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಮ್ ಅವರು ಹೀಗೆ ಹೇಳಿದ್ದಾರೆ, ‘ಕೇವಲ ಯಶಸ್ಸಿನ ಕಥೆಗಳನ್ನೇ ಹೆಚ್ಚು ಓದಬೇಡಿ ಏಕೆಂದರೆ ಯಶಸ್ಸಿನ ಕಥೆಗಳಲ್ಲಿ ನಿಮಗೆ ಸಂದೇಶಗಳಷ್ಟೇ ಸಿಗುತ್ತದೆ. ಸೋಲಿನ ಕಥೆಗಳನ್ನು ಓದಿ, ನೀವು ಯಶಸ್ವಿಯಾಗಲು ಉತ್ತಮ ಚಿಂತನೆಗಳ ಕುಡಿಯೊಡೆಯುತ್ತದೆ’ ಎಂದು. ನಮ್ಮ ಜೀವನವನ್ನು ನಾವೇ ರೂಪಿಸಬೇಕು. ಇತರರಿಂದ ಸ್ಪೂರ್ತಿ ಪಡೆದು ನಮ್ಮ ಶಕ್ತಿಯನ್ನೆಲ್ಲ ನಮ್ಮ ಕನಸಿನೆಡೆಗೆ ಹಾಕಬೇಕು. ನಮ್ಮ ಮೇಲೆ ನಮಗೆ ನಂಬಿಕೆ ಬರಲು, ಮೊದಲು ಚಿಕ್ಕಪುಟ್ಟ ಗುರಿಗಳನ್ನು ಇಟ್ಟುಕೊಳ್ಳಬೇಕು. ಅದನ್ನು ಪೂರ್ತಿ ಮಾಡಲು ಪ್ರಯತ್ನಿಸಿ. ಚಿಕ್ಕ ಚಿಕ್ಕ ಯಶಸ್ಸು ಮುಂದೆ ದೊಡ್ಡ ಯಶಸ್ಸಿಗೆ ಪೂರಕವಾಗುತ್ತದೆ. ಚಿಕ್ಕ ಯಶಸ್ಸು ನಮಗೆ ನಮ್ಮ ಮೇಲೆ ನಂಬಿಕೆಯ ಬೀಜವನ್ನು ಬಿತ್ತುತ್ತದೆ. ಅದೇ ಭವಿಷ್ಯದಲ್ಲಿ ಹೆಮ್ಮರವಾಗಿ ಬೆಳೆಯುತ್ತದೆ. ಅಸಾಧ್ಯವಾದುದು ಯಾವುದೂ ಇಲ್ಲ. ಋಣಾತ್ಮಕ ಭಾವನೆಯನ್ನು ತಳ್ಳಿ ನಮ್ಮ ಕೆಲಸದ ಮೇಲೆ ಪ್ರೀತಿ ಬೆಳೆಯಲಿ. ‘ನಾನು ಮಾಡಿಯೇ ಮಾಡುತ್ತೇನೆ’ ಎಂಬ ಭರವಸೆ ಇಟ್ಟುಕೊಳ್ಳಿ.

ಇನ್ನೊಂದು ವಿಷಯ, ನಾವು ಪದೇ ಪದೇ ನಮ್ಮ ಬಗ್ಗೆ ನಾವು ಹೇಳುವ ಪದಗಳು, ಆಲೋಚಿಸುವ ಬಗೆ, ನನ್ನ ಕೈಯಲ್ಲಿ ಆಗುವುದಿಲ್ಲ, ನನ್ನ ಹಣೆಬರಹ ಚೆನ್ನಾಗಿಲ್ಲ, ಈ ರೀತಿಯ ಋಣಾತ್ಮಕ ಚಿಂತನೆ ನಮಗೆ ಕುಗ್ಗಿಸುತ್ತದೆ. ಈ ಆಲೋಚನೆಗಳನ್ನು ಹಂತ ಹಂತವಾಗಿ ದೂರ ತಳ್ಳಲು ಪ್ರಯತ್ನಿಸಿ. ಈ ರೀತಿಯ ಮಾತು ಅಥವಾ ಆಲೋಚನೆ ಬಂದ ತಕ್ಷಣ ಅದನ್ನು ತಡೆದು ನಮ್ಮ ಆಲೋಚನೆಯ ವಿರುದ್ಧ ದಿಕ್ಕಿನಲ್ಲಿ ಚಲಿಸಲು ಪ್ರಯತ್ನಿಸಬೇಕು. ಉದಾಹರಣೆಗೆ ನನ್ನ ಹಣೆಬರಹ ಚೆನ್ನಾಗಿಲ್ಲ ಎಂದು ಹೇಳಲು ಹೋದಾಗ ಅದರ ಬದಲು, ನನ್ನ ಹಣೆಬರಹ ಚೆನ್ನಾಗಿದೆ ಅಥವಾ ನನ್ನ ಹಣೆಬರಹವನ್ನು ನಾನೇ ಬದಲಿಸುತ್ತೇನೆ ಎಂಬ ಧೈರ್ಯದ ಮಾತನ್ನು ಹೇಳುತ್ತಾ ಮುನ್ನುಗ್ಗಿದರೆ ನಮ್ಮ ಆತ್ಮವಿಶ್ವಾಸ ಬೆಳೆಯುತ್ತದೆ. ತಕ್ಷಣಕ್ಕೆ ಯಾರು ಬದಲಾಗಲು ಸಾಧ್ಯವಿಲ್ಲ. ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಮ್ಮ ಕನಸಿನ ಪಯಣಕ್ಕೆ ಬೇಕಾದ ಧೈರ್ಯ, ಆತ್ಮವಿಶ್ವಾಸ, ನಿರಂತರತೆಯನ್ನು ಕಾಪಾಡಿ ಮುಂದುವರೆದರೆ ನಮ್ಮ ಜೀವನ ಸಫಲವಾಗುವುದು ಖಂಡಿತ.

-ಡಾ. ಹರ್ಷಾ ಕಾಮತ್

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!