13 ತಿಂಗಳಿಗೊಮ್ಮೆ ಗುರು ಗ್ರಹ ಭೂವಿಗೆ ಸಮೀಪ ಬರುವುದಿದೆ. ಈ ಡಿಸೆಂಬರ್ ನಲ್ಲಿ ಈ ಭವ್ಯ ಗ್ರಹ ಭೂಮಿಗೆ ಸಮೀಪವಿರುತ್ತದೆ. ನಾಡಿದ್ದು ಡಿಸೆಂಬರ್ 7 ರಂದು ಗುರುಗ್ರಹದ ಒಪೋಸಿಷನ್. ಸೂರ್ಯ ಹಾಗೂ ಗುರು ಗ್ರಹ ಪೂರ್ವ ಪಶ್ಚಿಮದಲ್ಲಿ ಬಂದು ಸಂಪೂರ್ಣ ಸೂರ್ಯಾಸ್ತವಾದೊಡನೆ ಪೂರ್ವದಲ್ಲಿ ಉದಯಿಸಿ ಇಡೀ ರಾತ್ರಿ ಕಾಣಿಸಿಕೊಳ್ಳಲಿದೆ. ಹೀಗಾದಾಗ ಭೂಮಿಗೆ ಸಮೀಪ ಬಂದು ದೊಡ್ಡದಾಗಿ ಕಂಡು ಹೊಳೆಯಲಿದೆ.
ಸೂರ್ಯನಿಂದ ಸರಾಸರಿ ಸುಮಾರು 78 ಕೋಟಿ ಕಿಮೀ ದೂರದಲ್ಲಿರುವ ಗುರುಗ್ರಹ ಈಗ ಭೂಮಿಯಿಂದ ಬರೇ 61 ಕೋಟಿ ಕಿಮೀ ದೂರದಲ್ಲಿದ್ದು ವರ್ಷದಲ್ಲೇ ಸಮೀಪ ಬಂದಿದೆ. ಈಗ ಗುರು ಗ್ರಹ ಸುಂದರವಾಗಿ ಹೊಳೆದು ಎಲ್ಲರನ್ನೂ ಆಕರ್ಷಿಸುತ್ತಿದೆ. ದೂರದರ್ಶಕ ಹಾಗೂ ಬೈನಾಕ್ಯುಲರ್ಗಳಲ್ಲಿ ಗುರುಗ್ರಹದ ಪಟ್ಟಿ ಚಂದ್ರರು ಸೊಗಸಾಗಿ ಕಾಣಲಿವೆ. ಸೌರವ್ಯೂಹಗಳಲ್ಲೇ ಬೃಹದಾಕಾರದ ಗ್ರಹ ಗುರು.
ಸೂರ್ಯನಿಂದ ಸುಮಾರು 65 ಜ್ಯೋತಿ ವರ್ಷ ದೂರದಲ್ಲಿರುವ ರೋಹಿಣಿ ನಕ್ಷತ್ರ ಹಳದಿ ಬಣ್ಣದ ಹೊಳೆವ ನಕ್ಷತ್ರ. ಹೊಳೆವ ರೋಹಿಣಿ ಪಕ್ಕದಲ್ಲಿ ನಮ್ಮ ಗುರುಗ್ರಹವನ್ನು ನೋಡಿ ಆನಂದಿಸಿ.
–ಡಾ. ಎ.ಪಿ ಭಟ್ ಉಡುಪಿ.
ಖಗೋಳಶಾಸ್ತ್ರಜ್ಞರು