Monday, February 24, 2025
Monday, February 24, 2025

ಗ್ರಹಗಳ ಮೆರವಣಿಗೆ

ಗ್ರಹಗಳ ಮೆರವಣಿಗೆ

Date:

ಜೂನ್ ಮೊದಲ ವಾರ ಪೂರ್ವ ಆಕಾಶದಲ್ಲಿ ಬೆಳಗಿನ ಸೂರ್ಯೋದಯಕ್ಕೆ ಮುನ್ನ ಆರು ಗ್ರಹಗಳನ್ನು ನೋಡಬಹುದು. ಬರಿಗಣ್ಣಿಗೆ ಕಾಣುವ ಶನಿ, ಮಂಗಳ, ಗುರು ಹಾಗೂ ಬುಧನ ಜೊತೆ ಬೈನಾಕುಲರ್ ನಲ್ಲಿ ನೋಡಬಹುದಾದ ನೆಪ್ಚೂನ್ ಹಾಗೂ ಯುರೇನಸ್ ಗಳೂ, ಗ್ರಹಗಳ ಮೆರವಣಿಗೆಯೋ ಎನ್ನುವ ರೀತಿಯಲ್ಲಿ ಕಾಣಿಸಲಿವೆ. ಕೆಲ ವಾರಗಳಿಂದ ಸೂರ್ಯನ ನೇರ ಬಂದು ಅಸ್ತವಾಗಿದ್ದ ಗುರು ಗ್ರಹ, ಜೂನ್ ಒಂದರಿಂದ ಪೂರ್ವ ಆಕಾಶದಲ್ಲಿ ಕಾಣಿಸಲಿದೆ. ಗುರು ಗ್ರಹದ ಜೊತೆ ಜೊತೆಯಾಗಿ ಅಪರೂಪದ ಬುಧಗ್ರಹವೂ ಗೋಚರಿಸಲಿದೆ. ಬುಧ ಯಾವಾಗಲೂ ಬರಿಗಣ್ಣಿಗೆ ಕಾಣಿಸುವುದಿಲ್ಲ, ವರ್ಷದಲ್ಲಿ ಬರೇ ಆರು ಬಾರಿ ಕೆಲ ದಿನಗಳು ಕೆಲ ನಿಮಿಷಗಳು ಮಾತ್ರ.

ಸೂರ್ಯೋದಯಕ್ಕೆ 20 ನಿಮಿಷ ಮುಂಚಿತವಾಗಿ ಪೂರ್ವ ಆಕಾಶದಲ್ಲಿ ದಿಗಂತದಿಂದ ಗುರು, ಬುಧ, ಯರೇನಸ್, ಮಂಗಳ, ನೆಪ್ಚೂನ್ ನ ನಂತರ ಶನಿ ಗ್ರಹಗಳು ಗೋಚರಿಸಲಿವೆ.
ಇವನ್ನೆಲ್ಲಾ ಪರಿಚಯಿಸಲೋ ಎನ್ನುವಂತೆ ಅಮವಾಸ್ಯೆಗೆ ಸೂರ್ಯನನ್ನ ಸಮೀಪಿಸುವ ಚಂದ್ರ ಈ ಎಲ್ಲಾ ಗ್ರಹಗಳ ಸಮೀಪ ಹಾದು ದಿಗಂತದೆಡೆಗೆ ಸರಿಯುತ್ತಿರುತ್ತದೆ.

ಜೂನ್ ಒಂದರಂದು ಶನಿಗ್ರಹದ ಸಮೀಪ, ಜೂನ್ 2 ರಂದು ನೆಪ್ಚೂನ ಮಂಗಳಗಳ ಸಮೀಪ , ಜೂನ್ 3 ರಂದು ಯರೇನಸ್ ಸಮೀಪ ಸರಿದು ಜೂನ್ 4ರಂದು ಗುರು ಬುಧರ ಸಮೀಪ ಕಾಣಲಿದೆ. ಈ ಆಕಾಶದ ಭವ್ಯತೆಗೆ ಹಣತೆಯಂತೆ (crescent moon) ಕಾಣುವ ಬೆಳಗಿನ ಚಂದ್ರ ಎಲ್ಲರನ್ನೂ ಆಕರ್ಷಿಸಲಿದೆ.

ಆಶ್ಚರ್ಯವೆಂದರೆ ಈಗ ಸುಮಾರು 3 ಲಕ್ಷದ 70 ಸಾವಿರ ಕಿಮೀ ದೂರದ ಚಂದ್ರ ಕೋಟಿ ಕೋಟಿ ಕಿಮೀ ದೂರದ ಗ್ರಹಗಳ ಜೊತೆ (ಇಂದು ಬುಧ ಗ್ರಹ 17.5 ಕೋಟಿ ಕಿಮೀ , ಮಂಗಳ 27.8 ಕೋಟಿ ಕಿಮೀ, ಗುರು ಗ್ರಹ 90 ಕೋಟಿ ಕಿಮೀ, ಶನಿಗ್ರಹ146.5 ಕೋಟಿ ಕಿಮೀ) ಒಂದೇ ದೂರದಲ್ಲಿರುವಂತೆ ಕಾಣುವುದು. ನೋಡಿ ಆನಂದಿಸಿ.

-ಡಾ. ಎ. ಪಿ. ಭಟ್ ಉಡುಪಿ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ- ಶ್ರೀಕೃಷ್ಣ ಮಠದ ವತಿಯಿಂದ ಹೊರೆಕಾಣಿಕೆ

ಉಡುಪಿ, ಫೆ.23: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾಪು ಅಮ್ಮನ ಪ್ರತಿಷ್ಠಾ...

ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಕುಕ್ಕಿಕಟ್ಟೆ, ಫೆ.23: ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್ ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ...

ಕೊಹ್ಲಿ ಶತಕ; ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ

ಯು.ಬಿ.ಎನ್.ಡಿ., ಫೆ.23: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ...

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....
error: Content is protected !!