Sunday, January 19, 2025
Sunday, January 19, 2025

ಸೂರ್ಯನ ಸನ್ ಸ್ಪೋಟ್ ಸೈಕಲ್- ಆಕಾಶದಲ್ಲಿ ಬಣ್ಣದೋಕುಳಿ

ಸೂರ್ಯನ ಸನ್ ಸ್ಪೋಟ್ ಸೈಕಲ್- ಆಕಾಶದಲ್ಲಿ ಬಣ್ಣದೋಕುಳಿ

Date:

ಗ ನಮ್ಮ ಭೂಮಿಯ ಧ್ರುವ ಪ್ರದೇಶಗಳಲ್ಲಿ ಆಕಾಶ ಅತಿ ಸುಂದರ, ಧ್ರುವ ಪ್ರಭೆಗಳ ತಾಂಡವ ನರ್ತನ.. ಪ್ರವಾಸಿಗಳಿಗಂತೂ ಸುಗ್ಗಿ. ಉತ್ತರ ಅಮೆರಿಕ, ಕೆನಡಾ, ಇಂಗ್ಲೆಂಡ್, ಯುರೋಪಿನ ಎಲ್ಲಾ ರಸಿಕರೂ ಗ್ರೀನ್ ಲ್ಯಾಂಡ್, ನಾರ್ವೆ, ಸ್ವೀಡನ್ ಕಡೆಗೆ ನುಗ್ಗುತ್ತಿದ್ದಾರೆ.

ಉತ್ತರ ಧ್ರುವಪ್ರದೇಶದ ಸಮೀಪದ ಆರ್ಕಟಿಕ್ ಸರ್ಕಲ್ ನ ಪ್ರದೇಶಗಳಲ್ಲಿ ಆಕಾಶದಲ್ಲಿ ಬಣ್ಣದೋಕುಳಿ. ಸುಮಾರು 15 ರಿಂದ 20 ನಿಮಿಷಗಳ ಕಾಲ ಇಡೀ ಆಕಾಶದ ಸುತ್ತಲೂ ಕುಣಿ ಕಣಿತದ ಬಣ್ಣ ಬಣ್ಣದ ಪ್ರಭೆ. ಹಸಿರು, ಕೆಂಪು, ನೀಲಿ, ಹಳದಿ ಹಾಗೂ ಸಮ್ಮಿಶ್ರ ಬಣ್ಣಗಳ ಹೊಗೆಯೋ ಎನ್ನುವಂತಹ ಬೆಳಕಿನ ನರ್ತನ. ಇದಕ್ಕೆ ಧ್ರುವ ಪ್ರಭೆ “ಅರೋರೆ” ಎನ್ನುತ್ತಾರೆ. ದಕ್ಷಿಣ ಧ್ರುವ ಅಂಟಾರ್ಟಿಕಾದಲ್ಲೂ ಕಾಣುತ್ತದೆ.

ಇದೇನು ಈಗ ವಿಶೇಷವೆನ್ನುವಿರಾ? ಹೌದು. ಈಗ ಇದು ಅತ್ಯದ್ಭುತವಾಗಿ ಸೃಷ್ಟಿಯಾಗುತ್ತಿದೆ. ಯಾವಾಗಲೂ ಕಾಣಸಿಗುವುದಿಲ್ಲ ಇದು. ಕೆಲ ಕಾಲ ಇರುವುದೇ ಇಲ್ಲ. 11 ವರ್ಷಕ್ಕೊಮ್ಮೆ ಕೆಲ ಸಮಯ ಭಾರೀ ವಿಶೇಷವಾಗಿ ಕಂಡುಬರುತ್ತದೆ. ಈಗ ಕಾಣುವ ಪ್ರಭೆ ಇನ್ನೊಂದು ಆರು ತಿಂಗಳು ಈ ಸಂಭ್ರಮವಿರುತ್ತದೆ. ಈ ಧ್ರುವ ಪ್ರಭೆಗಳಿಗೂ ನಮ್ಮ ಸೂರ್ಯನಿಗೂ ಭಾರೀ ನಂಟು. ನಮ್ಮ ಸೂರ್ಯನೋ ಅದೇನೇನು ವಿಸ್ಮಯಗಳನ್ನು ಸೃಷ್ಟಿಸುವನೋ?

ಈ ತಿಂಗಳಲ್ಲೇ ನಮ್ಮ ಸೂರ್ಯ ಕೆಂಡಾಮಂಡಲವಾಗಿ ವಿಶೇಷ ಶಕ್ತಿಯನ್ನು ಉಗುಳುತ್ತಿದ್ದಾನೆ. ಸಪ್ಟಂಬರ್ 26, 27ರಂದು ಉಗುಳಿದ ಜ್ವಾಲೆ, ಭೂ ಕಾಂತೀಯ ವಾತಾವರಣವನ್ನು ಹಾಗೂ ನಮ್ಮ ಆಧುನಿಕ ಸಂಪರ್ಕಗಳನ್ನು ಕೆಲ ನಿಮಿಷ ವ್ಯತ್ಯಾಸಗೊಳಿಸಿರಬಹುದೆಂದು ವಿಜ್ನಾನಿಗಳು ಅಂದಾಜಿಸಿದ್ದಾರೆ. ಇವುಗಳಿಗೆ ಸೋಲಾರ್ ಸ್ಟಾರ್ಮ್ ಅಥವಾ ಕೊರೋನಲ್ ಮಾಸ್ ಇಜೆಕ್ಷನ್ ‘ಸಿ ಎಮ್ ಇ’ ಎನ್ನುತ್ತಾರೆ. ಇದು ಸೂರ್ಯನಲ್ಲಿ ಯಾವಾಗಲೂ ನಡೆಯುವ ಪ್ರಕಿೃಯೆಯಾದರೂ ಈಗ ಬಹಳ ಹೆಚ್ಚಾಗುತ್ತಿದೆ. ಇದಕ್ಕೆ ಸೂರ್ಯನ ವಿಚಿತ್ರ ಅಯಸ್ಕಾಂತೀಯ ಚಲನೆಗಳು ಕಾರಣ.

ಸುಮಾರು 11 ವರ್ಷಕ್ಕೊಮ್ಮೆ ಸೂರ್ಯನ ಧ್ರುವಗಳ ಅಯಸ್ಕಾಂತೀಯ ಪರಿವರ್ತನೆ ನಡೆಯುತ್ತದೆ. ಈ ಪ್ರಕಿೃಯೆ ನಡೆದ ನಂತರ ಸೂರ್ಯ ಜ್ವಾಲೆಗಳು ಹೆಚ್ಚು. ಈಗ 2021ರಲ್ಲಿ ಇದು ಸೂರ್ಯನಲ್ಲಿ ನಡೆಯುತ್ತಿದೆ. 2019ರಲ್ಲಿ ಸೂರ್ಯನ ಕಲೆಗಳು ಇಲ್ಲವೆಂಬಷ್ಟು ವಿರಳವಾಗಿತ್ತು. ಈ ವಿದ್ಯಾದಾನವನ್ನು ನಿತ್ಯದ, ವರ್ಷದ ಸೂರ್ಯನ ಕಲೆಗಳಿಂದ ತಿಳಿಯಬಹುದು. ಸೂರ್ಯನ ಪ್ರತಿಬಿಂಬವನ್ನು ನೋಡಿದಾಗ ಸೂರ್ಯನ ಮೈಯಲ್ಲಿ ಹೆಚ್ಚಿನ ಕಪ್ಪು ಕಲೆಗಳನ್ನು ನೋಡಬಹುದು. ಇವನ್ನು ಸೂರ್ಯನ ಕಲೆಗಳು “ಸನ್ ಸ್ಪೋಟ್ಸ್ ” ಎನ್ನುತ್ತೇವೆ.

ಸೂರ್ಯನ ಕಲೆಗಳು:
ಸೂರ್ಯನಲ್ಲಿ 11 ವರ್ಷಕ್ಕೊಮ್ಮೆ ಅತೀ ಹೆಚ್ಚು ಕಲೆಗಳನ್ನು ಗುರುತಿಸಬಹುದು. ಇದಕ್ಕೆ ಸೂರ್ಯನ ಸನ್ ಸ್ಪೋಟ್ ಸೈಕಲ್ ಎನ್ನುತ್ತಾರೆ. ಗೆಲಿಲೀಯೊ ದೂರದರ್ಶಕದಿಂದ 1610 ರಲ್ಲಿ ಪ್ರಥಮವಾಗಿ ಗುರುತಿಸಿದ ನಂತರ, ನೋಡುತ್ತಲೇ ಬಂದಿದ್ದಾರೆ. ಈ ಪ್ರಕ್ರಿಯೆಯನ್ನು ಇನ್ನೊಂದು ರೀತಿಯಲ್ಲಿ ಗಮನಿಸಬಹುದು. ‘

ಸೂರ್ಯನ ಕಲೆಗಳು ಹೆಚ್ಚಿರುವ ಸಮಯದಲ್ಲೇ ಭೂಮಿಯ ದ್ರುವ ಪ್ರದೇಶಗಳಲ್ಲಿ ಬಣ್ಣದೋಕುಳಿ ದ್ರುವ ಪ್ರಭೆ. ಬಹಳ ಹಿಂದಿನಿಂದ ಇದನ್ನು ಗುರುತಿಸಿದ್ದಾರೆ. ಹಾಗಾಗಿ ಸೂರ್ಯನ ಕಾಂತೀಯ ವ್ಯತ್ಯಾಸ ಹಾಗೂ ವಿಶೇಷ ಶಕ್ತಿ ಉತ್ಸರ್ಜನದ ಕಾಲದಲ್ಲೇ ಸೂರ್ಯನ ಕಲೆಗಳು ಹಾಗೂ ದ್ರುವ ಪ್ರಭೆ ಹೆಚ್ಚು.

ಒಂದು ಪ್ರಶ್ನೆ ಮೂಡುವುದು ಸಹಜ. ಈ ಕಾಲದಲ್ಲಿ ದ್ರುವ ಪ್ರದೇಶದಲ್ಲಿ ಮಾತ್ರ ವಿಶೇಷ ಪ್ರಭೆ ಎಕೆ? ಎಂದು. ಇದಕ್ಕೆ ಕಾರಣ ನಮ್ಮ ಭೂಮಿಯ ಸುತ್ತ ಇರುವ ಭೂ ಕಾಂತೀಯ ವಲಯಗಳು. ಇವು ಸೂರ್ಯನಿಂದ ಬರುವ ವಿಶೇಷ ಶಕ್ತಿಯ ಕಣಗಳನ್ನು ನಮ್ಮ ಸಮಭಾಜಕ ವೃತ್ತದ ಆಸುಪಾಸು ಸಂಪೂರ್ಣ ತಡೆಯಬಲ್ಲವು. ಆದರೆ ದ್ರುವಗಳಲ್ಲಿ ಅವುಗಳಿಗೆ ಸಾಧ್ಯವಾಗುವುದಿಲ್ಲ. ಅಲ್ಲಿ ಆ ಶಕ್ತಿಯುತ ಕಣಗಳು ವಾತಾವರಣದ ಒಳ ನುಗ್ಗಿ ಅಲ್ಲಿರುವ ಅಣು, ಪರಮಾಣುಗಳೊಂದಿಗೆ ಘರ್ಷಿಸಿ ಬೆಳಕನ್ನು ಬಿಡುಗಡೆ ಮಾಡುತ್ತವೆ. ಅದೇ ಧ್ರುವ ಪ್ರಭೆ.

-ಡಾ. ಎ.ಪಿ ಭಟ್, ಉಡುಪಿ
ಖಗೋಳ ತಜ್ಞ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!