Sunday, January 19, 2025
Sunday, January 19, 2025

ತಾಲಿಬಾನ್ ವಶಕ್ಕೆ ಅಫ್ಘಾನ್; ಭವಿಷ್ಯದಲ್ಲಿ ಭಾರತಕ್ಕೆ ಕಾದಿದೆಯಾ ಅಪಾಯ?

ತಾಲಿಬಾನ್ ವಶಕ್ಕೆ ಅಫ್ಘಾನ್; ಭವಿಷ್ಯದಲ್ಲಿ ಭಾರತಕ್ಕೆ ಕಾದಿದೆಯಾ ಅಪಾಯ?

Date:

ಅರಾಜಕತೆಯ ಬೆಳವಣಿಗೆ ಏಷ್ಯಾ ಖಂಡಕ್ಕೆ ಅತ್ಯಂತ ಅಪಾಯಕಾರಿ. ಅದರಲ್ಲೂ ಭಾರತಕ್ಕೆ ಈಗಾಗಲೇ ಅಫ್ಘಾನಿಸ್ತಾನದಿಂದ ಸಂಭಾವಿತರ ಮುಖವಾಡ ಹಾಕಿ ಜೀವ ಉಳಿಸಿ ಅನ್ನುವ ಕೂಗಿನೊಂದಿಗೆ ಭಾರತಕ್ಕೆ ಪ್ರವೇಶಿಸುವ ಅಪಾಯವೂ ಇದೆ. ಬರುವಾಗ ನಿರಾಶ್ರಿತರು ವಲಸಿಗರು ಕೊನೆಗೆ ನಮ್ಮನ್ನೇ ಅಲುಗಾಡಿಸುವ ವಿದ್ವಂಸಕ ಶಕ್ತಿಯಾಗಿ ಬೆಳೆಯುತ್ತಾರೆ. ಈ ಹಿಂದೆ ಬಾಂಗ್ಲಾದೇಶದಿಂದ ಬಂದ ಅದೇ ನಿರಾಶ್ರಿತರು ಗಟ್ಟಿಯಾಗಿ ತಳವೂರಿದ ಜೀವಂತ ಉದಾಹರಣೆ ನಮ್ಮ ಮುಂದಿದೆ. ಈಗ ಭಾರತೀಯರಾದ ನಮಗೆ ಸಮಾನ ಪೌರತ್ವ ಕಾಯಿದೆಯ (CCA) ಮಹತ್ವ ಅರಿವಾಗುತ್ತಿದೆ.

ಮುಂದೆ ಇದೇ ಪಾಕಿಸ್ತಾನ ಕೂಡ ಇದೇ ತಾಲಿಬಾನ್ ಭಯೋತ್ಪಾದಕರ ವಶವಾದರೂ ಆಶ್ಚರ್ಯ ಪಡಬೇಕಾಗಿಲ್ಲ. ಈ ಭಯೋತ್ಪಾದಕರನ್ನು ಕೈಯಲ್ಲಿ ಹಿಡಿದು ಆಡಿಸುವ ಕೆಲಸ ಇದೇ ಚೀನಾ ಮಾಡುವುದು ಕೂಡ ಭಾರತಕ್ಕೆ ಅಷ್ಟೇ ಅಪಾಯಕಾರಿ. ಏಷ್ಯಾ ಭಾಗದಲ್ಲಿ ಭಯೋತ್ಪಾದಕ ಶಕ್ತಿಯ ಅಘೋಷಿತ ರಾಷ್ಟ್ರ ಹುಟ್ಟಿ ಬರಲು ಪ್ರಮುಖ್ಯ ಕಾರಣ ಅಮೆರಿಕಾ ಮತ್ತು ರಷ್ಯಾ. ಇವೆರಡರ ಹಿತಾಸಕ್ತಿಯ ಪೈಪೋಟಿಯ ಫಲವಾಗಿ ಭಯೋತ್ಪಾದಕರ ಅರಾಜಕ ಶಕ್ತಿ ಹುಟ್ಟಿ ಏಷ್ಯಾದ ಅಫ್ಘಾನಿಸ್ತಾನದಲ್ಲಿ ತಲೆ ಎತ್ತಿ ಬರಲು ಸಾಧ್ಯವಾಗಿದೆ.

ಏಷ್ಯಾ ಖಂಡದ ಈ ಹೊಸ ಬೆಳವಣಿಗೆಯಲ್ಲಿ ಭಾರತ ಅತ್ಯಂತ ಜಾಗರೂಕತೆಯಿಂದ ಹೆಜ್ಜೆ ಇಡಬೇಕಾಗಿದೆ. ಈ ಹಿಂದೆ ಭಾರತ ಕೂಡ ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹುಟ್ಟಿ ಬರಬೇಕು ಜೊತೆಗೆ ಭಯೋತ್ಪಾದನೆ ಅಲ್ಲಿ ತಲೆ ಎತ್ತಬಾರದು ಅನ್ನುವ ದೃಷ್ಟಿಯಿಂದ ಅಫ್ಘಾನಿಸ್ತಾನಿ ಸಂಸದೀಯ ಸರಕಾರಕ್ಕೆ ಸಂಸತ್ತು ಕಟ್ಟಿಸಿಕೊಡುವುದರಿಂದ ಹಿಡಿದು ಅಭಿವೃದ್ಧಿ ನಕ್ಷೆ ತಯಾರಿಕೆಗೆ ಕೂಡ ಸಾಕಷ್ಟು ಸಹಾಯ ಹಸ್ತ ನೀಡಲು ಮುಂದಾಗಿದ್ದು. ಆದರೆ ಅದೆಲ್ಲವೂ ಕ್ಷಣಾರ್ಧದಲ್ಲಿ ನೀರ ಮೇಲಿನ ಹೋಮದಂತಾಗಿದೆ.

ಭಾರತಕ್ಕೆ ಈಗ ಬೇಕಾಗಿರುವುದು ಇಂತಹ ಭಯೋತ್ಪಾದಕ ಶಕ್ತಿಗಳನ್ನು ಸಮರ್ಥವಾಗಿ ಎದುರಿಸುವ ಪ್ರಧಾನಿ ಮತ್ತು ಬಲಿಷ್ಠ ಕೇಂದ್ರ ಸರಕಾರ. ಇಂತಹ ರಾಜಕೀಯ ಇಚ್ಛಾ ಶಕ್ತಿ ಇರದ ಸರ್ಕಾರ ಕೇಂದ್ರದಲ್ಲಿ ಮುಂದಿನ ದಿನಗಳಲ್ಲಿ ಬಾರದೇ ಹೋದರೆ ಭಾರತವನ್ನು ಕೂಡ ಇಂತಹ ಭಯೋತ್ಪಾದನಾ ಕ್ರಿಮಿಗಳು ನಮಗೆ ಮುಂದೆ ಅತಿ ದೊಡ್ಡ ಸವಾಲಾಗಿ ಪರಿಣಮಿಸುವ ಅಪಾಯವಿದೆ.

ಅಂತರರಾಷ್ಟ್ರೀಯ ಶಾಸ್ತ್ರದ ವ್ಯಾಖ್ಯಾನದ ಪ್ರಕಾರ ಒಂದು ದೇಶ ದೇಶ ಅನ್ನಿಸಿಕೊಳ್ಳಬೇಕಾದರೆ ಜನಸಂಖ್ಯೆ, ಭೌಗೋಳಿಕತೆ, ಸರಕಾರ ಪರಮಾಧಿಕಾರವಿದ್ದರೆ ಮಾತ್ರ ಸಾಕಾಗುವುದಿಲ್ಲ. ಇದರ ಜೊತೆಗೆ ಅಂತರರಾಷ್ಟ್ರೀಯ ಮಾನ್ಯತೆಯೂ ಬೇಕು. ಇನ್ನಿತರ ದೇಶಗಳು ಅಂದರೆ ವಿಶ್ವ ಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಈ ಅಫ್ಘಾನಿಸ್ತಾನದಲ್ಲಿ ಉಗ್ರ ಭಯೋತ್ಪಾದಕ ಸರಕಾರಿ ವ್ಯವಸ್ಥೆಗೆ ಮಾನ್ಯತೆ ಕೊಡಬಹುದೇ? ಮಾತ್ರವಲ್ಲ ಇಂದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ಇರುವುದು ಭಾರತದ ಪ್ರಧಾನಿ ಮೋಯ ಕೈಯಲ್ಲಿ. ಹಾಗಾಗಿ ಇರಬೇಕು ಇಂದಿನ ಅಫ್ಘಾನಿಸ್ತಾನದ ಉಗ್ರಗಾಮಿಗಳು ಕೂಡ ಮೋದಿಯವರನ್ನು ಹೊಗಳಲು ಶುರುಮಾಡಿದ್ದಾವೆ.

ವಿಶ್ವ ಸಂಸ್ಥೆಯ ಶಾಶ್ವತ ಐದು ರಾಷ್ಟ್ರಗಳು ಮತ್ತು ಇತರ ಸದಸ್ಯ ದೇಶಗಳ ಒಟ್ಟು ನಿಲುವು ಏನು ಅನ್ನುವುದು ಕೂಡ ಅಫ್ಘಾನಿಸ್ತಾನದ ಮುಂದಿನ ಭವಿಷ್ಯ ನಿರ್ಧರಿಸುವ ಪ್ರಮುಖ ಅಂಶಗಳು ಅನ್ನುವುದರಲ್ಲಿ ಎರಡು ಮಾತಿಲ್ಲ.

ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!