ಉಡುಪಿ, ಫೆ.27: ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ವಿಭಾಗಕ್ಕೆ ಅಧ್ಯಕ್ಷರಾಗಿ ಉದಯ ನಾಯ್ಕ್ ಆಯ್ಕೆಯಾಗಿದ್ದಾರೆ. ಕೇಂದ್ರೀಯ ಮಂಡಳಿ ಕಾರ್ಯಕಾರಿಣಿ ಸಭೆಯಲ್ಲಿ ಸ್ಥಾಪಕ ಬಾಲಕೃಷ್ಣ ರೈ ಕೆ., ಜನರಲ್ ಸೆಕ್ರೆಟರಿ ಡಾ. ಕೇಶವ್ಎಸ್., ಸಿಇಓ ಶಿವರಾಜು ಬಿ ಐಯಾರ್ ಇವರ ಉಪಸ್ಥಿತಿಯಲ್ಲಿ ಮಂಗಳೂರಿನ ಕೆನರಾ ಕ್ಲಬ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ಉದಯ ನಾಯ್ಕ್ ಇವರು ಜೆಸಿಐ ಇಂಡಿಯಾದ ವಲಯ ತರಬೇತುದರಾಗಿ, ಎಚ್. ಆರ್. ಎಫ್. ಐ ನಲ್ಲಿ ನಿರ್ದೇಶಕ, ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಕಳೆದ ವರ್ಷ ಉಪಾಧ್ಯಕ್ಷರಾಗಿ 13 ವರ್ಷಗಳ ಅನುಭವದಿಂದ ಹಲವಾರು ಮಾನವ ಹಕ್ಕುಗಳ ಕ್ಷೇತ್ರದಲ್ಲಿ, ಸಾಮಾಜಿಕ ಕಾರ್ಯಕ್ರಮಗಳು, ಶಾಲಾ- ಕಾಲೇಜು ಹಾಗೂ ಹಲವಾರು ಸಂಸ್ಥೆಗಳಲ್ಲಿ ಸಾಮಾಜಿಕ ಅರಿವು ಮೂಡಿಸುವ ತರಬೇತಿಗಳು, ಸ್ವಚ್ಛತಾ ಅಭಿಯಾನ, ರಕ್ತದಾನ ದ ಅರಿವು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಂಘಟಿಸಿದ್ದಾರೆ. ಇವರು ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ನ ಉಡುಪಿ ವಲಯದ ಛಾಯಾಗ್ರಾಹಕರು. ಇವರಿಗೆ 2014ರಲ್ಲಿ ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ನ್ಯಾಯಾಧೀಶ ಸಿ. ಜೆ ಹುನಗುಂದ ಹಾಗೂ ವಿಲೇಖಾನಾಧಿಕಾರಿಯವರು ಹ್ಯೂಮನ್ ರೈಟ್ಸ್ ಅವಾರ್ಡ್ ನೀಡಿ ಗೌರವಿಸಿದ್ದಾರೆ. ಉಡುಪಿಯ ನಿಕಟಪೂರ್ವ ಹೆಚ್ ಆರ್ ಎಫ್ ಐ ಅಧ್ಯಕ್ಷರಾದ ಅಡ್ವಕೇಟ್ ಪ್ರೀತಿ ವೈ, ಮತ್ತು ವಿವಿಧ ಜಿಲ್ಲೆಗಳ ನಿರ್ದೇಶಕರು ಉಪಸ್ಥಿತರಿದ್ದರು.