ಪರ್ಕಳ, ಫೆ.27: ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ ಇದರ ವತಿಯಿಂದ 21ವರ್ಷಾಚರಣೆ ಸಂಭ್ರಮದ ಅಂಗವಾಗಿ ಕಲಾಸಂಗಮ 2025 ಎಂಬ ವಿನೂತನ ಕಾರ್ಯಕ್ರಮ ಪರ್ಕಳ ವಿಘ್ನೇಶ್ವರ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪದ್ಮಶ್ರೀ ಪುರಸ್ಕೃತ ಆಧುನಿಕ ಭಗೀರಥ ಎಂದು ಹೆಸರು ಪಡೆದಿರುವ ಅಮೈ ಮಹಾಲಿಂಗ ನಾಯ್ಕ್, ತುಳು ರಂಗ ನಟ ಭೋಜರಾಜ್ ವಾಮಂಜೂರು, ಆಕಾಶವಾಣಿ ಮಂಗಳೂರು ನಿವೃತ್ತ ನಿರ್ದೇಶಕ ಡಾ. ವಸಂತ್ ಕುಮಾರ್ ಪೆರ್ಲ, ಚಲನಚಿತ್ರ ನಟ ಯೋಗೇಶ್ ಶೆಟ್ಟಿ, ಧರ್ಮೆಮಾರ್, ಅಧ್ಯಕ್ಷ ಸಂದೀಪ್ ನಾಯ್ಕ್, ಕಬ್ಯಾಡಿ, ಮಂಜುನಾಥ್ ಉಪಾಧ್ಯ, ಶ್ರೀನಿವಾಸ್ ಉಪಾಧ್ಯ, ಭುವನಪ್ರಸಾದ್ ಹೆಗ್ಡೆ, ಶ್ರೀಧರ ಭಟ್, ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಾಜದಲ್ಲಿ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಕೇಶವ ಕೋಟ್ಯಾನ್, ಆರ್ ಮನೋಹರ್ ಪರ್ಕಳ, ರಾಘವೇಂದ್ರ ಪ್ರಭು ಕರ್ವಾಲು, ಮಹೇಶ್ ಮರ್ಣೆ ಮುಂತಾದವರನ್ನು ಸನ್ಮಾನಿಸಲಾಯಿತು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಪರ್ಕಳ: ಕಲಾ ಸಂಗಮ

ಪರ್ಕಳ: ಕಲಾ ಸಂಗಮ
Date: