Thursday, February 27, 2025
Thursday, February 27, 2025

51 ವಯಸ್ಸಿನಲ್ಲೂ ಸ್ಪೋಟಕ ಆಟ; ಗತ ವೈಭವ ನೆನಪಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್

51 ವಯಸ್ಸಿನಲ್ಲೂ ಸ್ಪೋಟಕ ಆಟ; ಗತ ವೈಭವ ನೆನಪಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್

Date:

ಮುಂಬಯಿ, ಫೆ.26: ಮಂಗಳವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್‌ ಇಂಗ್ಲೆಂಡ್ ಮಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್ 51 ಹರೆಯದ ಸಚಿನ್ ತೆಂಡೂಲ್ಕರ್ ಇಂಡಿಯಾ ಮಾಸ್ಟರ್ಸ್ ತಂಡವನ್ನು ಪ್ರತಿನಿಧಿಸಿದ ಸಚಿನ್ ಸ್ಪೋಟಕ ಆಟ ಪ್ರದರ್ಶಿಸಿ ತಮ್ಮ ಗತಕಾಲದ ನೆನಪುಗಳನ್ನು ಮೆಲುಕು ಹಾಕಿದರು.

ಕಿಕ್ಕಿರಿದ ಕ್ರೀಡಾಂಗಣದಿಂದ ಗದ್ದಲದ ಹರ್ಷೋದ್ಗಾರಗಳ ನಡುವೆ, ಸಚಿನ್ ತಮ್ಮ ಕ್ಲಾಸಿಕ್ ಸ್ಟ್ರೋಕ್‌ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಕೇವಲ 21 ಎಸೆತಗಳಲ್ಲಿ 34 ರನ್ ಗಳಿಸಿದರು. ಇಂಗ್ಲೆಂಡ್ ವೇಗಿ ಟಿಮ್ ಬ್ರೆಸ್ನನ್ ಅವರ ಓವರ್ ನಲ್ಲಿ 6, 4, 4 ಬಾರಿಸಿದ ಸಚಿನ್ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವ ಹಾಗೆ ಮಾಡಿದರು. ಮಾಸ್ಟರ್ ಬ್ಲಾಸ್ಟರ್ ಅವರ ಆಟವನ್ನು ಮತ್ತೊಮ್ಮೆ ವೀಕ್ಷಿಸಲು ಆನಂದಿಸಿದ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಐದು ಬೌಂಡರಿಗಳು ಮತ್ತು ಒಂದು ಸಿಕ್ಸರ್‌ನೊಂದಿಗೆ ಅವರ ಇನ್ನಿಂಗ್ಸ್ ಕೊನೆಗೊಂಡಾಗ ನೀರವ ಮೌನ ಕ್ರೀಡಾಂಗಣವನ್ನು ಆವರಿಸಿತು.

ಆರಂಭಿಕ ಆಟಗಾರ ಗುರುಕೀರತ್ ಸಿಂಗ್ ಮಾನ್ 35 ಎಸೆತಗಳಲ್ಲಿ 63 ರನ್ ಗಳಿಸಿ ಪಂದ್ಯವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಕೇವಲ 14 ಎಸೆತಗಳಲ್ಲಿ 27 ರನ್ ಗಳಿಸಿ ಅಜೇಯರಾಗಿ ಉಳಿದರು, ಇಂಡಿಯಾ ಮಾಸ್ಟರ್ಸ್ ತಂಡ 133 ರನ್‌ಗಳ ಗುರಿಯನ್ನು ಕೇವಲ 11.4 ಓವರ್‌ಗಳಲ್ಲಿ ಸುಲಭವಾಗಿ ತಲುಪಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಹಾಕುಂಭ ವೈಭವ- 45 ದಿನಗಳಲ್ಲಿ 65 ಕೋಟಿಗೂ ಹೆಚ್ಚು ಭಕ್ತರು, 3 ಲಕ್ಷ ಕೋಟಿ ರೂ. ಆದಾಯ

ಪ್ರಯಾಗರಾಜ್, ಫೆ.26: ಬುಧವಾರ ಮಹಾಶಿವರಾತ್ರಿಯಂದು ಸಂಪನ್ನಗೊಂಡ ಮಹಾಕುಂಭಮೇಳ ಕಳೆದ 45 ದಿನಗಳಲ್ಲಿ...

ಜೆಇಇ ಬಿ ಆರ್ಕ್ ಮತ್ತು ಬಿ ಪ್ಲಾನಿಂಗ್ ಫಲಿತಾಂಶ: ಕ್ರಿಯೇಟಿವ್ ಸಾಧನೆ

ಉಡುಪಿ, ಫೆ.26: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್.ಟಿ.ಎ) ವತಿಯಿಂದ ನಡೆಸಲಾದ ಜೆಇಇ...

ಪರೀಕ್ಷಾ ತರಬೇತಿ

ಕುಂದಾಪುರ, ಫೆ.26: ಜೆಸಿಐ ಶಂಕರನಾರಾಯಣ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಶಂಕರನಾರಾಯಣ...

ಮಣಿಪಾಲ ಜ್ಞಾನಸುಧಾ: ಗಣಕ ವಿಜ್ಞಾನ ಉಪನ್ಯಾಸಕರ ಕಾರ್ಯಾಗಾರ

ಮಣಿಪಾಲ, ಫೆ.26: ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ...
error: Content is protected !!