Saturday, February 22, 2025
Saturday, February 22, 2025

ಮಹಾಕುಂಭ ಮೇಳದಲ್ಲಿ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಿಗೆ ಜಲಾಭಿಷೇಕ

ಮಹಾಕುಂಭ ಮೇಳದಲ್ಲಿ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಿಗೆ ಜಲಾಭಿಷೇಕ

Date:

ತುಮಕೂರು, ಫೆ.19: ಕಲ್ಪತರು ನಾಡು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪಟ್ಟಣದ ಶಕ್ತಿ ಮಾತೆ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ಅಮ್ಮನವರಿಗೆ ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ ನೆಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕ್ಷೀರ, ಅರಿಶಿನ, ಕುಂಕುಮ, ಗಂಧ, ಭಸ್ಮ, ತುಪ್ಪ, ಪವಿತ್ರ ಇತರೆ ಸುಗಂಧದ ಅಭಿಷೇಕ ಜರುಗಿತು. ಈ ಸಂದರ್ಭದಲ್ಲಿ ತ್ರಿವೇಣಿ ಸಂಗಮದಲ್ಲಿ ಅಮ್ಮನವರ ಭಕ್ತರು ತೀರ್ಥ ಸ್ನಾನ ಮಾಡಿದರು ಹಾಗೂ ಗಂಗಾ, ಯಮುನಾ, ಸರಸ್ವತಿ, ಪವಿತ್ರ ನದಿಗಳಿಗೆ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿ, ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಪೂಜಾ ನೇತೃತ್ವವನ್ನು ಶ್ರೀ ಕುಮಾರಸ್ವಾಮಿ ಸ್ವಾಮೀಜಿ ಮಾಗಡಿ, ಹಾಗೂ ಪಂಡಿತ್ ನಾರಾಯಣ ಆಚಾರ್ಯ ವಹಿಸಿಕೊಂಡಿದ್ದರು ತ್ರಿವೇಣಿ ಸಂಗಮದ ತೀರ್ಥದಿಂದ ಆಸಕ್ತಿಯುಳ್ಳ ಭಕ್ತರಿಗೆ ತೀರ್ಥ ಸ್ನಾನವನ್ನು ಸಹ ದೇವಾಲಯದಲ್ಲಿ ಜರುಗಿಸಲಾಗುವುದು ಎಂದು ಧರ್ಮದರ್ಶಿ ರಂಗಸ್ವಾಮಿ ಸಿ ಎನ್ ತಿಳಿಸಿದರು. ನಾಗರತ್ನ, ಅಕ್ಷತ, ಮನೋಜ್, ಬ್ರಿತಿ, ಆಡಳಿತ ಮುಖ್ಯಸ್ಥರು ಲಕ್ಷ್ಮೀಶ ಭಾಗವಹಿಸಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಡ್ವಕೇಟ್‌ ಡಿ. ಕೆ. ಶೆಟ್ಟಿ ನೋಟರಿ ಪಬ್ಲಿಕ್‌ ಆಗಿ ನೇಮಕ

ಮುಂಬಯಿ, ಫೆ.21: ಮುಂಬಯಿಯ ಹಿರಿಯ ವಕೀಲ ಅಡ್ವಕೇಟ್‌ ಡಿ. ಕೆ. ಶೆಟ್ಟಿ...

ರೆಡಿಮಿಕ್ಸ್ ಕಾಂಕ್ರೀಟ್ ಘಟಕಗಳ ಅಧಿಕಾರಿಗಳೊಂದಿಗೆ ಸಭೆ

ಉಡುಪಿ, ಫೆ.21: ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಚರಿಸುವ ರೆಡಿಮಿಕ್ಸ್ ಕಾಂಕ್ರೀಟ್ ಘಟಕಗಳ...

ಆಗಮಡಂಬರ ಕೃತಿ ಲೋಕಾರ್ಪಣೆ

ಉಡುಪಿ, ಫೆ.21: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ...

ವಿಕಾಸಕ್ಕಾಗಿ ಜಾನಪದ

ಉಡುಪಿ, ಫೆ.21: ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ...
error: Content is protected !!