ಸಾಲಿಗ್ರಾಮ, ಫೆ.18: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಡ ಇಲ್ಲಿ ಕಾರ್ಕಡ ಕ್ಲಸ್ಟರ್ ಮಟ್ಟದ ಶಾಲಾ ಮಕ್ಕಳ ಕಲಿಕಾ ಹಬ್ಬ -೨೦೨೫ ಕಾರ್ಯಕ್ರಮ ಮಂಗಳವಾರ ವಿಶಿಷ್ಟ ರೀತಿಯಲ್ಲಿ ಆಯೋಜಿಸಲಾಯಿತು. ಸಾಲಿಗ್ರಾಮ ಪಟ್ಟಣ ಪಂಚಾಯತ್ ಪೇಟೆ ವಾರ್ಡ್ ಸದಸ್ಯೆ ರತ್ನಾ ನಾಗರಾಜ್ ಗಾಣಿಗ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು. ಕಲಿಕಾ ಹಬ್ಬದ ಅಂಗವಾಗಿ ಬ್ರಹ್ಮಾವರ ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಸುರೇಶ್ ಕುಂದರ್ ಮಕ್ಕಳಿಗೆ ಕಿರೀಟ ತೊಡಿಸಿ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಕಳಶ ಹಿಡಿದು ತರಗತಿ ಕೊಠಡಿ ಮೂಲಕ ಸಭೆಗೆ ಆಗಮಿಸಿ ಶಿಕ್ಷಕರನ್ನು ಹಾಗೂ ಪೋಷಕರನ್ನು ಬರಮಾಡಿಕೊಂಡರು. ಶಾಲೆಯ ಏಳು ಕೊಠಡಿಗಳನ್ನು ವಿವಿಧ ರೀತಿಯಲ್ಲಿ ಶೃಂಗರಿಸಿದ್ದು ಒಂದು ಸೇಲ್ಫಿ ಕೌಂಟರ್ ಗಮನ ಸೆಳೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ಶಾಲೆಗಳ ಶಿಕ್ಷಕರಾದ ವಾಣಿ, ವಿಜಯ ಕುಮಾರ್, ಪಾರ್ವತಿ, ಕಸ್ತೂರಿ, ಪುಷ್ಭಲತಾ, ಸುಶೀಲ ಇವರುಗಳನ್ನು ನೇಮಕಗೊಳಿಸಲಾಯಿತು. ಕಲಿಕಾ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ತಿಲೋತ್ತಮ ನಾಯಕ್, ಶಾಲಾ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರುಳಿಧರ ನಾಯರಿ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ದಿನೇಶ್ ಪೂಜಾರಿ, ಉಪಾಧ್ಯಕ್ಷೆ ಅನ್ನಪೂರ್ಣ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಕಡ ಕ್ಲಸ್ಟರ್ ವಿಭಾಗದ ಸಿಆರ್ ಪಿ ಸವಿತಾ ಆಚಾರ್ ವಂದಿಸಿ, ಶಿಕ್ಷಕಿ ಬೇಬಿ ನಿರೂಪಿಸಿದರು.