Saturday, February 22, 2025
Saturday, February 22, 2025

ಶ್ರೀ ರಾಮ ದೇಗುಲದ ಪ್ರತಿಷ್ಠಾ ವರ್ಧಂತಿ

ಶ್ರೀ ರಾಮ ದೇಗುಲದ ಪ್ರತಿಷ್ಠಾ ವರ್ಧಂತಿ

Date:

ಬ್ರಹ್ಮಾವರ, ಫೆ.15: ಕೋಡಿ ಕನ್ಯಾಣ ಇಲ್ಲಿನ ಶ್ರೀ ರಾಮ ದೇಗುಲದ 15ನೇ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವ, 31ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಶುಕ್ರವಾರ ಜರಗಿತು. ಈ ಪ್ರಯುಕ್ತ ಪೂರ್ವಾಹ್ನ 109 ಕಲಶ ಸ್ಥಾಪನೆ, ಅಧಿವಾಸ ಹೋಮ, ಸಾಮೂಹಿಕ ಸತ್ಯನಾರಾಯಣ ಪೂಜೆ, ಕಲಶಾಭಿಷೇಕ ಮಹಾಪೂಜೆ, ಮಹಾಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ಸ್ಥಳೀಯ ಶಾಲಾ ವಿದ್ಯಾರ್ಧಿಗಳಿಂದ, ಸಾಂಸ್ಕೃತಿಕ ಕಾರ್ಯಕ್ರಮ, ಆಕಾಶವಾಣಿ ಕಲಾವಿದ ತಿಮ್ಮಪ್ಪ ಕರ್ಕೇರ ಬಳಗದಿಂದ ಭಕ್ತಿಸಂಗೀತ, ವಿವಿಧ ಭಜನಾ ತಂಡಗಳಿಂದ ಭಜನೆ, ಶಿಶುಮಂದಿರದ ಪುಟಾಣಿಗಳಿಂದ ನೃತ್ಯ ವೈವಿಧ್ಯ, ಪ್ರತಿಭಾ ಪುರಸ್ಕಾರ, ಚೈತನ್ಯ ಕಲಾವಿದರು ಕಾರ್ಕಳ ಬೈಲೂರು ಇವರಿಂದ ಅಷ್ಟಮಿ ನಾಟಕ ಪ್ರದರ್ಶನ ನಡೆಯಿತು.

ವೇ.ಮೂ ಪಾಂಡೇಶ್ವರ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ದೇಗುಲದ ಅಧ್ಯಕ್ಷ ರಾಘವೇಂದ್ರ ಕರ್ಕೇರ, ಉಪಾಧ್ಯಕ್ಷರಾದ ರಾಜು ಕರ್ಕೇರ, ಸತೀಶ್ ಜಿ.ಕುಂದರ್, ಪ್ರಧಾನ ಕಾರ್ಯದರ್ಶಿ ಅಶೋಕ್ ಸಾಲಿಯಾನ್, ಜತೆ ಕಾರ್ಯದರ್ಶಿ ವಿಜಯ ಮಾಸ್ತರ್, ಮಹೇಶ್ ತಿಂಗಳಾಯ, ಕೋಶಾಧಿಕಾರಿ ಜಯಕುಮಾರ್ ಎ.ಎಸ್., ದೇಗುಲದ ಅರ್ಚಕ ಭಾಸ್ಕರ್ ಬಾಯರಿ, ಸಹಾಯಕ ಅರ್ಚಕ ರಾಮದಾಸ ಸಾಲಿಯಾನ್ ಮುಂತಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಡ್ವಕೇಟ್‌ ಡಿ. ಕೆ. ಶೆಟ್ಟಿ ನೋಟರಿ ಪಬ್ಲಿಕ್‌ ಆಗಿ ನೇಮಕ

ಮುಂಬಯಿ, ಫೆ.21: ಮುಂಬಯಿಯ ಹಿರಿಯ ವಕೀಲ ಅಡ್ವಕೇಟ್‌ ಡಿ. ಕೆ. ಶೆಟ್ಟಿ...

ರೆಡಿಮಿಕ್ಸ್ ಕಾಂಕ್ರೀಟ್ ಘಟಕಗಳ ಅಧಿಕಾರಿಗಳೊಂದಿಗೆ ಸಭೆ

ಉಡುಪಿ, ಫೆ.21: ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಚರಿಸುವ ರೆಡಿಮಿಕ್ಸ್ ಕಾಂಕ್ರೀಟ್ ಘಟಕಗಳ...

ಆಗಮಡಂಬರ ಕೃತಿ ಲೋಕಾರ್ಪಣೆ

ಉಡುಪಿ, ಫೆ.21: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ...

ವಿಕಾಸಕ್ಕಾಗಿ ಜಾನಪದ

ಉಡುಪಿ, ಫೆ.21: ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ...
error: Content is protected !!