ನವದೆಹಲಿ, ಫೆ.7: 15 ನೇ ಹಣಕಾಸು ಆಯೋಗದಿಂದ ಕರ್ನಾಟಕದ ತೆರಿಗೆ ಪಾಲು 3.647% ರಷ್ಟು ನಿಗದಿಪಡಿಸಲಾಗಿದ್ದು, 2025-26 ಸಾಲಿನಲ್ಲಿ ರೂ. 51,876 ಕೋಟಿ ತೆರಿಗೆ ಹಂಚಿಕೆ (ಕಳೆದ ವರ್ಷಕ್ಕಿಂತ 10% ಹೆಚ್ಚು) ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು. 2004-2014ರ ಅವಧಿಯಲ್ಲಿ ಕರ್ನಾಟಕಕ್ಕೆ ಕೇವಲ ರೂ.81,795 ಕೋಟಿ ನೀಡಲಾಗಿತ್ತು. 2014-2024ರ ಅವಧಿಯಲ್ಲಿ ಕರ್ನಾಟಕಕ್ಕೆ ಬರೊಬ್ಬರಿ ರೂ.2,85,452 ಕೋಟಿ ತೆರಿಗೆ ಹಂಚಿಕೆ ಮಾಡಲಾಗಿದೆ. ಬರೊಬ್ಬರಿ ರೂ. 7,564 ಕೋಟಿ ವೆಚ್ಚದಲ್ಲಿ 15 ನಿರ್ಣಾಯಕ ರೈಲ್ವೆ ಯೋಜನೆಗಳನ್ನು ನೀಡಲಾಗಿದ್ದು, ಇದು ರಾಜ್ಯಕ್ಕೆ ಅತ್ಯಧಿಕ ರೈಲ್ವೆ ಯೋಜನೆಗಳ ಹಂಚಿಕೆಯಾಗಿದೆ.
ಸ್ಟಾರ್ಟ್ ಅಪ್‌ಗಳಿಗೆ 10 ವರ್ಷಗಳ ತೆರಿಗೆ ರಜೆ (ಏಪ್ರಿಲ್ 2030 ರವರೆಗೆ)ಯ ಜೊತೆಗೆ ರೂ.10,000 ಕೋಟಿ ಅನುದಾನ ನೀಡಲಾಗಿದೆ. ಕರ್ನಾಟಕದ ಬೆಳವಣಿಗೆಗೆ ಈ ಶಕ್ತಿಯುತ ಸುಧಾರಣೆಗಳು, ದೊಡ್ಡ ಅವಕಾಶಗಳು ಉಜ್ವಲ ಭವಿಷ್ಯ ರೂಪಿಸಲಿವೆ ಮತ್ತು ನಾವೀನ್ಯತೆಯ ಶಕ್ತಿ ಕೇಂದ್ರವಾಗಿ ಹೊರಹೊಮ್ಮಲಿವೆ ಎಂದು ಪ್ರಹ್ಲಾದ್ ಜೋಷಿ ಹೇಳಿದ್ದಾರೆ.