ಕೋಟ, ಫೆ.7: ವಿವೇಕ ವಿದ್ಯಾ ಸಂಸ್ಥೆಗಳಲ್ಲಿ ಸಂಸ್ಕೃತ ಅಧ್ಯಾಪಕರಾಗಿ, ಉಪನ್ಯಾಸಕರಾಗಿ 28 ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿ ಸೇವಾ ನಿವೃತ್ತಿಯನ್ನು ಹೊಂದಿದ ಸಿ.ಮಂಜುನಾಥ್ ಉಪಾಧ್ಯ ಇವರನ್ನು ಕೋಟ ವಿದ್ಯಾಸಂಘ ಇದರ ಆಡಳಿತ ಮಂಡಳಿಯಿಂದ ಮತ್ತು ವಿದ್ಯಾ ಸಂಸ್ಥೆಗಳ ಸಿಬ್ಬಂದಿ ವರ್ಗದವರ ಸಂಯುಕ್ತ ಆಶ್ರಯದಲ್ಲಿ ಪುರಸ್ಕರಿಸಿ ವಿದಾಯವನ್ನು ಕೋರಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ ಅಧ್ಯಕ್ಷರಾದ ಸಿ.ಎ ಪಿ.ಪ್ರಭಾಕರ ಮಯ್ಯ ವಹಿಸಿ ನಿವೃತ್ತರ ಕುರಿತಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವಿದ್ಯಾಸಂಘದ ಕಾರ್ಯದರ್ಶಿ ಎಂ.ರಾಮದೇವ ಐತಾಳ ಹಾಗೂ ಕೋಶಾಧಿಕಾರಿ ವೆಲೇರಿಯನ್ ಮೆನೇಜಸ್ ನಿವೃತ್ತರಿಗೆ ಶುಭ ಹಾರೈಸಿದರು. ಶಿಕ್ಷಕರಾದ ಸಂಜೀವ ಜಿ., ವೆಂಕಟೇಶ ಉಡುಪ, ಮುಖ್ಯೋಪಾಧ್ಯಾಯ ಜಗದೀಶ ಹೊಳ್ಳ ಇವರು ನಿವೃತ್ತರ ಕುರಿತಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಪುರಸ್ಕಾರವನ್ನು ಸ್ವೀಕರಿಸಿ ಮಂಜುನಾಥ ಉಪಾಧ್ಯ ತಮ್ಮ ಸೇವಾ ಅನುಭವವನ್ನು ಹಂಚಿಕೊಂಡರು. ಪ್ರಾಂಶುಪಾಲರಾದ ಜಗದೀಶ ನಾವಡ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಚೇರಿ ಸಹಾಯಕಿ ಸಹನಾ ಪ್ರಾರ್ಥಿಸಿದರು. ಪ್ರೇಮಾನಂದ ವಂದಿಸಿ, ಚಂದ್ರಶೇಖರ್ ಹೆಚ್ ಎಸ್ ಕಾರ್ಯಕ್ರಮ ನಿರೂಪಿಸಿದರು.