Thursday, February 6, 2025
Thursday, February 6, 2025

ಶಿವಪಾಡಿ ವೈಭವ ಆಮಂತ್ರಣ ಪತ್ರಿಕೆ ಬಿಡುಗಡೆ

ಶಿವಪಾಡಿ ವೈಭವ ಆಮಂತ್ರಣ ಪತ್ರಿಕೆ ಬಿಡುಗಡೆ

Date:

ಮಣಿಪಾಲ, ಫೆ.5: ಫೆಬ್ರವರಿ 22 ರಿಂದ ಫೆಬ್ರವರಿ 26ರವರೆಗೆ ವೈಭವೋಪೂರಿತವಾಗಿ ನಡೆಯಲಿರುವ ಐತಿಹಾಸಿಕ ಶಿವಪಾಡಿ ವೈಭವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮಣಿಪಾಲ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಅನಾವರಣಗೊಳಿಸಲಾಯಿತು.

ಶಿವಪಾಡಿ ವೈಭವ ಆಚರಣಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಕೆ ರಘುಪತಿ ಭಟ್ ಹಾಗೂ ಎಸ್.ಕೆ.ಡಿ.ಆರ್.ಡಿ.ಪಿ. ಬಿಸಿ ಟ್ರಸ್ಟ್ ಉಡುಪಿ ಇದರ ನಿರ್ದೇಶಕ ನಾಗರಾಜ್ ಜೆ ಶೆಟ್ಟಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೆಸರರಾದ ಮಹೇಶ್ ಠಾಕೂರ್, ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಇದರ ಅಧ್ಯಕ್ಷರಾದ ದಿನೇಶ್ ಪ್ರಭು, ಒಕ್ಕೂಟ ಕೇಂದ್ರೀಯ ಸಮಿತಿ ಜಿಲ್ಲಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಂದರ ಜೆ ಕಲ್ಮಾಡಿ, ಧರ್ಮಸ್ಥಳ ನ್ಯಾಚುರೋಪತಿ ಆಸ್ಪತ್ರೆ ಪರೀಕ ಇದರ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಭಜನಾ ಪರಿಷತ್ ಅಧ್ಯಕ್ಷರಾದ ವಿಜಯ ಕೊಂಡಾಡಿ, ಡೈರೆಕ್ಟರ್ ಆಫ್ ಸ್ಟೂಡೆಂಟ್ ಅಫೇರ್ಸ್ ಮಾಹೆ ಇದರ ಡಾ. ಗೀತಾ ಮೈಯ್ಯ, ಶಾಶ್ವತ ಟ್ರಸ್ತಿಗಳಾದ ದಿನೇಶ್ ಸಾಮಂತ್, ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು, ಕೆಕೆ ಡಿಜಿಬಿ ವಿದ್ಯಾ ಪ್ರಸಾರಕ ಮಂಡಲದ ಅಧ್ಯಕ್ಷ ಸತೀಶ್ ಪಾಟೀಲ್, ಟ್ರಸ್ಟಿಗಳಾದ ಪುರುಷೋತ್ತಮ ಪ್ರಭು, ಅಶೋಕ್ ಸಾಮಂತ್, ಶ್ರೀಕಾಂತ್ ಪ್ರಭು, ಜಿ ಕೃಷ್ಣರಾಯ ಪಾಟೀಲ್, ಪ್ರಕಾಶ್ ಪ್ರಭು, ಸಂಜಯ ಪ್ರಭು, ಎಸ್.ಕೆ.ಡಿ.ಆರ್.ಡಿ.ಪಿ ತಾಲೂಕು ಯೋಜನಾಧಿಕಾರಿ ರಾಮ.ಎಂ ಸ್ವಾಗತಿಸಿ ಹಾಗೂ ಎಸ್.ಕೆ.ಡಿ.ಆರ್.ಡಿ.ಪಿ ಮಣಿಪಾಲ ವಲಯ ಮೇಲ್ವಿಚಾರಕರಾದ ಬಾಲಚಂದ್ರ ಮತ್ತು ಕೃಷಿ ಮೇಲ್ವಿಚಾರಕರಾದ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಕ್ಕಳು – ಶೋಷಣೆ

ಮಕ್ಕಳು, ತಾವು ವಾಸಿಸುವ ಪರಿಸ್ಥಿತಿ ಹಾಗೂ ಸುತ್ತಮುತ್ತಲಿನ ಪರಿಸರದಿಂದ, ಒಡನಾಟದಿಂದ ಬಲು...

ಶ್ರೀ ಕೃಷ್ಣ ಮಠ: ವಿವಿಧ ಕ್ಷೇತ್ರಗಳ ಮುಖ್ಯಸ್ಥರಿಗೆ ಸನ್ಮಾನ

ಉಡುಪಿ, ಫೆ.5: ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ...

ಮನಸ್ಸು ಹತೋಟಿಯಲ್ಲಿರಲು, ಏಕಾಗ್ರತೆ ಸಾಧಿಸಲು ಯೋಗ, ಪ್ರಾಣಾಯಾಮ ಸಹಕಾರಿ: ಪ್ರಸನ್ನ ಶಣೈ

ಉಡುಪಿ, ಫೆ.5: ಮನಸ್ಸು ಹತೋಟಿಯಲ್ಲಿರಲು, ಏಕಾಗ್ರತೆ ಸಾಧಿಸಲು ಯೋಗ, ಪ್ರಾಣಾಯಾಮಗಳು ಸಹಕಾರಿ....

ಸಾಸ್ತಾನ ಟೋಲ್ ಪ್ಲಾಜಾ ಬಳಿ ಬಸ್ಸು ಮಾಲಕರ ಸಂಘಟನೆಯಿಂದ ಪ್ರತಿಭಟನೆ

ಕೋಟ, ಫೆ.5: ಸಾಸ್ತಾನ ಟೋಲ್ ಪ್ಲಾಜಾ ಮತ್ತು ಹೆಜಮಾಡಿ ಟೋಲ್ ಪ್ಲಾಜಾಗಳಲ್ಲಿ...
error: Content is protected !!