ಕಾಪು, ಫೆ.4: ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು ವ್ಯಾಪ್ತಿಯ 92 ಹೇರೂರು ಉಪ ಆರೋಗ್ಯ ಕೇಂದ್ರಕ್ಕೆ ಗಣೇಶ್ ಬೋಜ ಕರ್ಕೇರ ಇವರು 10 ಸೆಂಟ್ಸ್ ಜಾಗವನ್ನು ದಾನವಾಗಿ ಆರೋಗ್ಯ ಇಲಾಖೆಗೆ ನೀಡಿರುತ್ತಾರೆ. ಇವರಿಗೆ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಪುರಸಭೆಯ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಳಿಯಾರಗೋಳಿ ವಾರ್ಡ್ ಸದಸ್ಯ ಅರುಣ್ ಕುಮಾರ್ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಆಡಳಿತ ವೈದ್ಯಾಧಿಕಾರಿ ಡಾ.ರಾಜಶ್ರೀ, ವೈದ್ಯಾಧಿಕಾರಿ ಡಾ.ದೃತಿ.ವಿ.ಆಳ್ವ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು, ಗ್ರಾಮ ಪಂಚಾಯತ್ ಮಜೂರಿನ ಸಿಬ್ಬಂದಿ ವರ್ಗದವರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾಪು: ಆರೋಗ್ಯ ಇಲಾಖೆಗೆ ಜಾಗವನ್ನು ದಾನ ಮಾಡಿದ ಗಣೇಶ್ ಬೋಜ ಕರ್ಕೇರ
ಕಾಪು: ಆರೋಗ್ಯ ಇಲಾಖೆಗೆ ಜಾಗವನ್ನು ದಾನ ಮಾಡಿದ ಗಣೇಶ್ ಬೋಜ ಕರ್ಕೇರ
Date: