ನವದೆಹಲಿ, ಫೆ.1: 12 ಲಕ್ಷ ರೂ.ವರೆಗಿನ ಆದಾಯದ ಮೇಲೆ ತೆರಿಗೆ ಇಲ್ಲ. ಮಧ್ಯಮ ವರ್ಗವು ಪಾವತಿಸುವ ತೆರಿಗೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಹೊಸ ತೆರಿಗೆ ರಚನೆಯು, ವಿಶೇಷ ಆದಾಯವನ್ನು ಹೊರತುಪಡಿಸಿ 12 ಲಕ್ಷ ರೂ.ವರೆಗಿನ ಆದಾಯದ ತೆರಿಗೆ ಪಾವತಿದಾರರಿಗೆ ತೆರಿಗೆ ರಿಯಾಯಿತಿ ನೀಡಲಾಗಿದೆ.
ಶನಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದರು. 12 ಲಕ್ಷ ರೂ. ವರೆಗಿನ ಆದಾಯದ ಮೇಲೆ ತೆರಿಗೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.