ಕುಂದಾಪುರ, ಜ.25: ಜೆಸಿಐ ಶಂಕರನಾರಾಯಣ ಇದರ ವತಿಯಿಂದ ಸ್ವಾತಂತ್ರ‍್ಯ ಸಂಗ್ರಾಮದ ಪ್ರಮುಖ ನಾಯಕರಲ್ಲಿ ಒಬ್ಬರಾದ ಸುಭಾಸಚಂದ್ರ ಬೋಸ್ ರವರ ಜನ್ಮ ದಿನಾಚರಣೆ ಶಂಕರನಾರಾಯಣ ಜೆಸಿ ಭವನದಲ್ಲಿ ನಡೆಯಿತು. ಕೃಷಿಕರು ಹಾಗು ಹಿರಿಯರಾದ ಶಂಕರ ನಾಯ್ಕ ಅಗ್ರಬೈಲು, ಪೂರ್ವಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಹೆಬ್ಬಾಡಿ, ರಾಮಚಂದ್ರ ದೇವಾಡಿಗ, ನಾಗರಾಜ್ ತಲ್ಲಂಜೆ, ರಾಘವೇಂದ್ರ ಕುಪ್ಪಾರು, ಸದಸ್ಯರಾದ ವಿನಯ್ ದೇವಾಡಿಗ, ಉದಯ ಎಲ್ಮಣ್ಣು ಉಪಸ್ಥಿತರಿದ್ದರು, ಅಧ್ಯಕ್ಷರಾದ ಪ್ರವೀಣ್ ಬಾಳೆಕೊಡ್ಲು ಸ್ವಾಗತಿಸಿ, ಕಾರ್ಯದರ್ಶಿ ಯೋಗೀಶ್ ದೇವಾಡಿಗ ವಂದಿಸಿದರು.
ಸುಭಾಸ್‌ಚಂದ್ರ ಬೋಸ್ ಜನ್ಮ ದಿನಾಚರಣೆ
ಸುಭಾಸ್‌ಚಂದ್ರ ಬೋಸ್ ಜನ್ಮ ದಿನಾಚರಣೆ
Date: